ಸಾರಾಂಶ
ಎ.ಟಿ.ಮಂಜು ಉಪಾಧ್ಯಕ್ಷರಾಗಿ ಆಯ್ಕೆಯಾಗುತ್ತಿದ್ದಂತೆಯೇ ಹೊರಗಡೆ ಬೆಂಬಲಿಗರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.
ಕನ್ನಡಪ್ರಭ ವಾರ್ತೆ ಪಾಂಡವಪುರ
ತಾಲೂಕಿನ ಹೊನಗಾನಹಳ್ಳಿ ಗ್ರಾಪಂ ಉಪಾಧ್ಯಕ್ಷರಾಗಿ ಜೆಡಿಎಸ್ ಬೆಂಬಲಿತ ಎ.ಟಿ.ಮಂಜು ಗೆಲುವು ಸಾಧಿಸುವ ಮೂಲಕ ಆಯ್ಕೆಯಾದರು.17 ಮಂದಿ ಸದಸ್ಯರ ಸಂಖ್ಯಾಬಲ ಹೊಂದಿರುವ ಗ್ರಾಪಂನ ಹಿಂದಿನ ಉಪಾಧ್ಯಕ್ಷ ಕೆ.ಎಸ್.ರವಿ ಅವರ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಸೋಮವಾರ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿತ ಎ.ಟಿ.ಮಂಜು ಹಾಗೂ ರೈತಸಂಘ- ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ರಮೇಶ್ ನಾಮಪತ್ರ ಸಲ್ಲಿಸಿದರು.
ಎರಡು ನಾಮಪತ್ರಗಳು ಸಲ್ಲಿಕೆಯಾದ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿ ಗುಪ್ತ ಮತದಾನ ನಡೆಸಿದರು. ಎ.ಟಿ.ಮಂಜು 10 ಮತ ಪಡೆದು 6 ಮತ ಪಡೆದ ರಮೇಶ್ ವಿರುದ್ಧ 4 ಮತಗಳ ಅಂತರದಿಂದ ಗೆಲುವು ಸಾಧಿಸಿ ಉಪಾಧ್ಯಕ್ಷರಾಗಿ ಆಯ್ಕೆಯಾದರು.ಎ.ಟಿ.ಮಂಜು ಉಪಾಧ್ಯಕ್ಷರಾಗಿ ಆಯ್ಕೆಯಾಗುತ್ತಿದ್ದಂತೆಯೇ ಹೊರಗಡೆ ಬೆಂಬಲಿಗರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.
ನಂತರ ಉಪಾಧ್ಯಕ್ಷ ಎ.ಟಿ.ಮಂಜು ಮಾತನಾಡಿ, ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಅವರ ಆಶೀರ್ವಾದ ಹಾಗೂ ಎಲ್ಲಾ ಜೆಡಿಎಸ್ ಬೆಂಬಲಿತ ಸದಸ್ಯರ ಸಹಕಾರ, ಬೆಂಬಲದಿಂದ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದೇನೆ. ಮುಂದಿನ ದಿನಗಳಲ್ಲಿ ಸಿ.ಎಸ್.ಪುಟ್ಟರಾಜು ಮಾರ್ಗದರ್ಶನ, ಎಲ್ಲಾ ಸದಸ್ಯರ ಸಹಕಾರ ಪಡೆದು ಗ್ರಾಪಂ ವ್ಯಾಪ್ತಿಯ ಅಭಿವೃದ್ಧಿಗೆ ಅಧ್ಯಕ್ಷರ ಜತೆಗೂಡಿ ಕೆಲಸ ಮಾಡುತ್ತೇನೆ ಎಂದರು.ಗ್ರಾಪಂ ಅಧ್ಯಕ್ಷೆ ಪುಟ್ಟಲಿಂಗಮ್ಮ, ಸದಸ್ಯರಾದ ಚಂದ್ರಶೇಖರಯ್ಯ, ರತ್ನಮ್ಮ, ಸಿದ್ದರಾಜು, ಕೆ.ಎಸ್.ರವಿ, ಮಹದೇವ ಸ್ವಾಮಿ, ಬಿ.ಎಸ್.ಶಿವಣ್ಣ, ಮಂಗಳಮ್ಮ, ಶಾಂತಮ್ಮ, ಶಂಕರ,ಛಾಯಾ, ಜವರಯ್ಯ, ಇಂದ್ರ, ಎಸ್.ದಿವ್ಯ, ಭಾಗ್ಯಲಕ್ಷ್ಮೀ, ಮುಖಂಡರಾದ ತಾಪಂ ಮಾಜಿ ಸದಸ್ಯ ಅಲ್ಪಳ್ಳಿ ಗೋವಿಂದಯ್ಯ, ಗ್ರಾಪಂ ಮಾಜಿ ಅಧ್ಯಕ್ಷ ಶಿಂಡಭೋಗನಹಳ್ಳಿ ನಾಗಣ್ಣ, ಸ್ವಾಮೀಗೌಡ, ಮಹದೇವಪ್ಪ, ಗಣೇಶ್, ನಾಗರಾಜು, ಯೋಗೇಶ್, ನಾಗೇಶ್, ಬಿ.ಸಿ.ತಮ್ಮಯ್ಯ, ಶಿವಸ್ವಾಮಿ ಸೇರಿದಂತೆ ಹಲವರು ಹಾಜರಿದ್ದರು.