ಹಿರೇಕೆರೂರು ತಾಲೂಕಿನ ಬಾಳೆಂಬೀಡ ಗ್ರಾಮದಲ್ಲಿ ವಿಬಿ-ಜಿ ರಾಮ್‌ಜಿ ಯೋಜನೆಯ ಕಾಮಗಾರಿ ಸ್ಥಳದಲ್ಲಿ ಜಾಬ್ ಕಾರ್ಡ್ ಮೇಳ ಮತ್ತು ಅರಿವು ಅಭಿಯಾನ ಹಮ್ಮಿಕೊಳ್ಳಲಾಯಿತು.

ಹಿರೇಕೆರೂರು: ತಾಲೂಕಿನ ಬುರಡಿಕಟ್ಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಾಳಂಬೀಡ ಗ್ರಾಮದಲ್ಲಿ ವಿಬಿ ಜಿ ರಾಮ್‌ ಜಿ ಯೋಜನೆಯ ಕಾಮಗಾರಿ ಸ್ಥಳದಲ್ಲಿ ಜಾಬ್ ಕಾರ್ಡ್ ಮೇಳ ಮತ್ತು ಅರಿವು ಅಭಿಯಾನ ಹಮ್ಮಿಕೊಳ್ಳಲಾಯಿತು.

ಈ ವೇಳೆ ಗ್ಯಾರಂಟಿ ಗ್ರಾಮೀಣ ರೋಜಗಾರ್ ಕಾರ್ಡ್ ಪಡೆದ ರೈತರು, ಕೃಷಿ ಕೂಲಿ ಕಾರ್ಮಿಕರಿಗೆ 5 ಲಕ್ಷ ರು. ಮಿತಿಯಲ್ಲಿ ವೈಯಕ್ತಿಕ ಕಾಮಗಾರಿ ಮಾಡಿಕೊಳ್ಳಲು ಇರುವ ಸೌಲಭ್ಯದ ಸದುಪಯೋಗ ಪಡೆದುಕೊಳ್ಳುವಂತೆ ಮಾಹಿತಿ ನೀಡಲಾಯಿತು. ಆಗಸ್ಟ್ 15ರಿಂದ ಸೆಪ್ಟೆಂಬರ್ 15ರ ವರೆಗೆ ಗ್ರಾಮ ಪಂಚಾಯಿತಿಯಲ್ಲಿ ಜಾಬ್ ಕಾರ್ಡ್ ಮೇಳ ಅಭಿಯಾನ ನಡೆಯುತ್ತಿದ್ದು, ಇಲ್ಲಿಯವರೆಗೆ ಜಾಬ್ ಕಾರ್ಡ್ ಪಡೆಯದ ಕುಟುಂಬಗಳಿಗೆ ಉಚಿತವಾಗಿ ಕಾರ್ಡ್‌ ಮಾಡಿಕೊಡಲಾಗುವುದು ತಿಳಿಸಲಾಯಿತು. ಕಾರ್ಯಕ್ರಮದಲ್ಲಿ ಹೊಸದಾಗಿ 5 ಜಾಬ್ ಕಾರ್ಡ್‌ ವಿತರಿಸಲಾಯಿತು.

ಜೊತೆಗೆ ವಿಬಿ ಜಿ ರಾಮ್‌ಜಿ ಯೋಜನೆಯ ಉದ್ದೇಶ, ವಾರ್ಷಿಕ ಯೋಜನೆಯ ಉದ್ದೇಶ, ವಾರ್ಷಿಕ ಮಾನವ ದಿನಗಳನ್ನು 100ರಿಂದ 125ಕ್ಕೆ ಮತ್ತು ದಿನಗೂಲಿಯನ್ನು ₹ 370ರಿಂದ ₹ 382ಕ್ಕೆ ಹೆಚ್ಚಿಸಿರುವ ಕುರಿತು ಮಾಹಿತಿ ನೀಡಲಾಯಿತು.

ಈ ಸಂದರ್ಭದಲ್ಲಿ ಐಇಸಿ ಸಂಯೋಜಕ ಗೋವಿಂದರಾಜು, ಹನುಮಗೌಡ ಕಾರಗಿ, ಜಿಕೆಎಂ ಲಕ್ಷ್ಮಿ, ಗಿರಿಮಳ್ಳಿ, ಮೇಟಿಗಳಾದ ರೂಪಾ ಶಿವನಕ್ಕನವರ್, ಗಜೇಂದ್ರ ಶಿರಳ್ಳಿ, ಕರ್ನಾಟಕ ರಾಜ್ಯ ಕೃಷಿ ಕಾರ್ಮಿಕ ಸಂಘದ ಅಧ್ಯಕ್ಷ ಶೇಖಪ್ಪ ಶಿವಪ್ಪನವರ, ಮಂಜುಳಾ ಬರಮಗೌಡ, ಪ್ರವೀಣ್ ಬಣಕಾರ್ ಸೇರಿದಂತೆ ಕಾರ್ಮಿಕರು ಹಾಜರಿದ್ದರು.