ಸಾರಾಂಶ
ಎಸ್ಸೆಸೆಲ್ಸಿ, ಪಿಯುಸಿ ಮತ್ತು ವೈದ್ಯಕೀಯ ಕೋರ್ಸ್ ಗಳಲ್ಲಿ ಉಚಿತ ಸೀಟು ಪಡೆದ ಕುರುಬ ಸಮಾಜದ ಪ್ರತಿಭಾನ್ವಿತರಿಗೆ ಸನ್ಮಾನ
ಗಂಗಾವತಿ: ವಿಶ್ವಚೇತನ ಶ್ರೀಕನಕದಾಸರ ಜಯಂತ್ಯುತ್ಸವವನ್ನು ಶ್ರದ್ಧೆ-ಭಕ್ತಿಯಿಂದ ಆಚರಿಸುವ ಜತೆಗೆ ಅವರ ಜೀವನ ಮತ್ತು ಹೋರಾಟವನ್ನು ಯುವಜನರಿಗೆ ತಿಳಿಸುವುದಕ್ಕಾಗಿ ವಿಶೇಷ ಉಪನ್ಯಾಸ ಏರ್ಪಡಿಸುವ ಮೂಲಕ ಅದ್ಧೂರಿಯಾಗಿ ಆಚರಿಸಲು ತೀರ್ಮಾನಿಸಲಾಗಿದ್ದು, ಸರ್ವ ಸಮಾಜದವರು ಪಾಲ್ಗೊಳುವಂತೆ ಶ್ರೀ ಕನಕದಾಸ ಕುರುಬರ ಸಂಘದ ತಾಲೂಕಾಧ್ಯಕ್ಷ ವಿಠಲಾಪೂರ ಯಮನಪ್ಪ ಮನವಿ ಮಾಡಿದರು.
ಅವರು ತಹಸೀಲ್ದಾರ್ ಕಚೇರಿಯಲ್ಲಿ ಶ್ರೀಕನಕದಾಸರ ಜಯಂತ್ಯುತ್ಸವದ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.ಹೊಸಳ್ಳಿ ರಸ್ತೆಯಲ್ಲಿರುವ ಶ್ರೀಕನಕದಾಸರ ವೃತ್ತದಲ್ಲಿ ನ.8 ರಂದು ಜಯಂತ್ಯುತ್ಸವ ನಡೆಸಿ ಶ್ರೀಕನಕದಾಸರ ಭಾವಚಿತ್ರ ಮತ್ತು ಕಂಚಿನ ಪುತ್ಥಳಿಗೆ ಪೂಜೆ ನೆರವೇರಿಸಿ ವೇದಿಕೆಯ ಕಾರ್ಯಕ್ರಮದಲ್ಲಿ ಉಪನ್ಯಾಸಕರಿಂದ ಕನಕದಾಸರ ಜೀವನ ಹೋರಾಟ ಕುರಿತು ಯುವಜನರಿಗೆ ಸಂದೇಶ ನೀಡಲಾಗುತ್ತದೆ. ಎಸ್ಸೆಸೆಲ್ಸಿ, ಪಿಯುಸಿ ಮತ್ತು ವೈದ್ಯಕೀಯ ಕೋರ್ಸ್ ಗಳಲ್ಲಿ ಉಚಿತ ಸೀಟು ಪಡೆದ ಕುರುಬ ಸಮಾಜದ ಪ್ರತಿಭಾನ್ವಿತರಿಗೆ ಸನ್ಮಾನ ಮಾಡಲಾಗುತ್ತದೆ ಎಂದರು.
ಸಭೆಯಲ್ಲಿ ಗ್ರೇಡ್2 ತಹಸೀಲ್ದಾರ್ ಮಹಾಂತಗೌಡ, ಕುರುಬ ಸಮಾಜದ ಮುಖಂಡ ಶರಣೇಗೌಡ, ಕೆ. ನಾಗೇಶಪ್ಪ, ವಿರೂಪಾಕ್ಷಪ್ಪ ಹೊಸಳ್ಳಿ, ಬಸವರಾಜ ಲಿಂಗರಾಜ್ ಕ್ಯಾಂಪ್, ಬಿ.ವೆಂಕಟೇಶ, ಶಿವಬಸವನಗೌಡ, ನೀಲಪ್ಪ, ಕರಿಯಪ್ಪ, ಕೆ.ತಿರುಕಪ್ಪ, ರಾಮಕೃಷ್ಣ, ಶಿರಸ್ತೆದಾರ ರವಿ ನಾಯಕವಾಡಿ,ನಗರಸಭೆ ವ್ಯವಸ್ಥಾಪಕ ಷಣ್ಮುಖಪ್ಪ, ಶಿಶು ಅಭಿವೃದ್ಧಿ ಅಧಿಕಾರಿ ಜಯಶ್ರೀ, ಸಮಾಜಕಲ್ಯಾಣ ಇಲಾಖೆ ಸಂಗಪ್ಪ ವೈಜಾಪು ಮಂಜುನಾಥ ಸೇರಿ ವಿವಿಧ ಇಲಾಖೆಗಳ ಅಧಿಕಾರಿಗಳಿದ್ದರು.;Resize=(128,128))
;Resize=(128,128))