ಕೊಪ್ಪಳ: ಜೆಡಿಎಸ್ ಮತ್ತಷ್ಟು ಬಲಿಷ್ಠತೆಗೆ ಪ್ರತಿಯೊಬ್ಬರು ಕೈ ಜೋಡಿಸಬೇಕು. ಮುಂದಿನ ಚುನಾವಣೆಯಲ್ಲಿ ಕುಮಾರಸ್ವಾಮಿ ಮುಖ್ಯಮಂತ್ರಿಗಳಾಗಬೇಕು ಎನ್ನುವುದು ಪಕ್ಷದ ಕಾರ್ಯಕರ್ತರ ಬಯಕೆ ಎಂದು ಜೆಡಿಎಸ್ ತಾಲೂಕು ಘಟಕದ ಅಧ್ಯಕ್ಷ ವೀರೇಶಗೌಡ್ರು ದಳಪತಿ ಹೇಳಿದರು.
ತಾಲೂಕಿನ ಗುಡಗೇರಿ, ಘಟ್ಟಿರಡ್ಡಿಹಾಳ, ಮುರ್ಲಾಪುರ, ಬೆಳಗಟ್ಟಿ ಗ್ರಾಮಗಳಲ್ಲಿ ಮಂಗಳವಾರ ಜೆಡಿಎಸ್ ಸದಸ್ಯತ್ವ ನೋಂದಣಿ ಅಭಿಯಾನದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಕಳೆದ ಮೂರು ವರ್ಷಗಳಲ್ಲಿ ಕೊಪ್ಪಳದಲ್ಲಿ ಜೆಡಿಎಸ್ ಬಲಿಷ್ಠಗೊಂಡಿದೆ. ಪಕ್ಷದ ರಾಜ್ಯ ಕೋರ್ ಕಮಿಟಿ ಸದಸ್ಯ ಸಿ.ವಿ.ಚಂದ್ರಶೇಖರ್ ನಾಯಕತ್ವದ ಬಗ್ಗೆ ಅಪಾರ ಬೆಂಬಲ ವ್ಯಕ್ತವಾಗುತ್ತಿದೆ. ಮುಂದಿನ ಎಲ್ಲ ಚುನಾವಣೆಗಳಲ್ಲಿ ಬಿಜೆಪಿ ಮತ್ತು ಜೆಡಿಎಸ್ ಹೊಂದಾಣಿಕೆ ಮುಂದುವರೆಯುತ್ತದೆ ಎಂದು ನಾಯಕರು ಸ್ಪಷ್ಟಪಡಿಸಿದ್ದಾರೆ.ಜೆಡಿಎಸ್ ಪ್ರಮುಖರಾದ ಶೇಖರಗೌಡ ಪಾಟೀಲ್, ವಿರೂಪಾಕ್ಷಗೌಡ ಗುಡಗೇರಿ, ರವಿಕುಮಾರ ಗುಡಗೇರಿ, ಗಿರೀಶ ಕುಮಾರ, ಸುರೇಶ ಗುಡಗೇರಿ,ಪಂಪಾಪತಿ ಗುಡಗೇರಿ, ಬಸವರಾಜ ಮುರ್ಲಾಪುರ, ಸಚಿನ್ ಡಂಬಳ, ಬಸವರಾಜ ಘಟ್ಟಿರಡ್ಡಿಹಾಳ, ರಮೇಶ ಘಟ್ಟಿರಡ್ಡಿಹಾಳ, ಚಿರಂಜೀವಿ ಪೂಜಾರ, ಕೋಟೇಶ ಬೆಳಗಟ್ಟಿ, ರಮೇಶ ಬೆಳಗಟ್ಟಿ, ದೇವಪ್ಪ ತಳವಾರ, ಮರ್ಧಾನಸಾಬ್ ಬೆಳಗಟ್ಟಿ, ಹನುಮಂತ ಬೆಳಗಟ್ಟಿ, ಅರುಣಕುಮಾರ ಬೆಳಗಟ್ಟಿ, ಪಕ್ಷದ ಕಾರ್ಯಕರ್ತರಿದ್ದರು.