ಸಾರಾಂಶ
ಕನ್ನಡ ಪ್ರಭ ವಾರ್ತೆ ಮುಧೋಳ
ಪತ್ರಕರ್ತರಿಂದ ಸಮಾಜ ಸುಧಾರಣೆ ಸಾಧ್ಯ. ಪತ್ರಿಕಾ ಧರ್ಮ ಕಾಪಾಡುವ ಮಹತ್ತರ ಜವಾಬ್ದಾರಿ ನಿಮ್ಮ ಮೇಲಿದೆ. ನಿಮ್ಮ ಜವಾಬ್ದಾರಿ ಅರಿತುಕೊಂಡು ಕಾರ್ಯನಿರ್ವಹಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪುರ ಹೇಳಿದರು.ಬುಧವಾರ ನಗರದ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯಾಲಯದ ಮೊದಲನೇ ಮಹಡಿಯಲ್ಲಿ ನಿರ್ಮಿಸಿದ ನೂತನ ಸಭಾಭವನವನ್ನು ಉದ್ಘಾಟಿಸಿ ಮಾತನಾಡಿ, ಪತ್ರಕರ್ತರ ಶಕ್ತಿ ಅಪಾರವಾದದು, ಪ್ರಜಾಪ್ರಭುತ್ವ ಸ್ವಸ್ಥ ಬೆಳವಣಿಗೆಗೆ ಪತ್ರಕರ್ತರ ಸೇವೆ ಅತ್ಯಗತ್ಯ, ಪತ್ರಿಕೆಗಳು ಸಮಾಜದಲ್ಲಿ ಒಳ್ಳೆಯ ಕಾರ್ಯಕ್ಕೆ ಬಳಕೆಯಾಗಬೇಕೆಂದು ಸಲಹೆ ನೀಡಿದ ಅವರು, ಪತ್ರಕರ್ತರ ಜೀವನ ಮುಳ್ಳಿನ ಮೇಲಿನ ಹಾಸಿಗೆಯಿದ್ದಂತೆ, ಪತ್ರಕರ್ತರು ನಿರ್ಭೀತಿಯಿಂದ ಕಾರ್ಯನಿರ್ವಹಣೆಗೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಎಲ್ಲ ರೀತಿಯ ಸಹಕಾರ ನೀಡುತ್ತಿದೆ, ಪತ್ರಕರ್ತರಿಗೆ ನಿರ್ಭೀತಿ ವಾತಾವರಣವಿದ್ದರೆ ಮಾತ್ರ, ಪ್ರಜಾಪ್ರಭುತ್ವ ವ್ಯವಸ್ಥೆ ಜೀವಂತವಾಗಿ ಉಳಿಯಲು ಸಾಧ್ಯ ಎಂದರು.
ನೂತನ ಪತ್ರಕರ್ತರ ಭವನದ ಸುತ್ತಲು ಗ್ಲಾಸ್ ಅಳವಡಿಕೆಗಾಗಿ ಸರ್ಕಾರದಿಂದ ₹5 ಲಕ್ಷ ಅನುದಾನ ನೀಡುವುದಾಗಿ ಸಚಿವ ಆರ್.ಬಿ. ತಿಮ್ಮಾಪುರ ಭರವಸೆ ನೀಡಿದರು.ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ರತ್ನಾಕರಶೆಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಾನಿಪ ಪ್ರಧಾನ ಕಾರ್ಯದರ್ಶಿ ಎಂ.ಎಚ್. ನದಾಫ್ ಪ್ರಾಸ್ತಾವಿಕವಾಗಿ ಮಾತನಾಡಿದರು. ತಹಸೀಲ್ದಾರ್ ವಿನೋದ ಹತ್ತಳ್ಳಿ, ತಾ.ಪಂ ಇಒ ಸಂಜೀವ ಹಿಪ್ಪರಗಿ, ನಗರಸಭೆ ಪೌರಾಯುಕ್ತ ಗೋಪಾಲ ಕಾಸೆ ವೇದಿಕೆ ಮೇಲಿದ್ದರು.
ಮುಧೋಳ ತಾಲೂಕಾ ಕಾನಿಪ ಸಂಘದ ಗೌರವ ಅಧ್ಯಕ್ಷ ಅಶೋಕ ಕುಲಕರ್ಣಿ, ಅಧ್ಯಕ್ಷ ಬಿ.ರತ್ನಾಕರಶೆಟ್ಟಿ, ಉಪಾಧ್ಯಕ್ಷ ವಿಶ್ವನಾಥ ಮುನವಳ್ಳಿ, ಪ್ರಧಾನ ಕಾರ್ಯದರ್ಶಿ ಎಂ.ಎಚ್.ನಧಾಪ, ಖಜಾಂಚಿ ಗಣೇಶ ಮೇತ್ರಿ, ಸದಸ್ಯರಾದ ಎಲ್.ಬಿ.ಹಳ್ಳದ, ಬಿ.ಎಚ್.ಬೀಳಗಿ, ಮಹಾಂತೇಶ ಕರೆಹೊನ್ನ, ವೆಂಕಟೇಶ ಗುಡೆಪ್ಪನವರ, ಗೋವಿಂದಪ್ಪ ತಳವಾರ, ಜಗದೀಶ ಜೀರಗಾಳ, ಶ್ರೀನಿವಾಸ ಬಬಲಾದಿ, ಸಲೀಂ ಕೊಪ್ಪದ, ಹಸನಡೋಂಗ್ರಿ ಮಹಾಲಿಂಗಪುರ, ಬಂದೇನವಾಜ ರಾಮದುರ್ಗ, ಸಿದ್ದು ಹೂಗಾರ, ಮಹೇಶ ಬೋಳಿಶೆಟ್ಟಿ ಸೇರಿದಂತೆ ಇತರರು ಇದ್ದರು.