ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿಆಧಾರಸಹಿತವಾದ ಪಾರದರ್ಶಕ ವಸ್ತುನಿಷ್ಠವಾದ ವರದಿಗಳನ್ನು ಪಕ್ಷಪಾತವಿಲ್ಲದೇ ಯಾರ ಹಂಗಿಗೂ ಒಳಗಾಗದೆ ಪತ್ರಕರ್ತರು ಸುದ್ದಿ ಮಾಡಿದಾಗ ಮಾತ್ರ ಸಮಾಜದ ಓರೆಕೋರೆಗಳನ್ನು ತಿದ್ದಲು ಸಾಧ್ಯವೆಂದು ಶಾಸಕ ಸಿದ್ದು ಸವದಿ ಹೇಳಿದರು.
ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ
ಆಧಾರಸಹಿತವಾದ ಪಾರದರ್ಶಕ ವಸ್ತುನಿಷ್ಠವಾದ ವರದಿಗಳನ್ನು ಪಕ್ಷಪಾತವಿಲ್ಲದೇ ಯಾರ ಹಂಗಿಗೂ ಒಳಗಾಗದೆ ಪತ್ರಕರ್ತರು ಸುದ್ದಿ ಮಾಡಿದಾಗ ಮಾತ್ರ ಸಮಾಜದ ಓರೆಕೋರೆಗಳನ್ನು ತಿದ್ದಲು ಸಾಧ್ಯವೆಂದು ಶಾಸಕ ಸಿದ್ದು ಸವದಿ ಹೇಳಿದರು.ನಗರಸಭೆ ಸಭಾಭವನದಲ್ಲಿ ಭಾನುವಾರ ತಾಲೂಕು ಕಾನಿಪ ಸಂಘದ ಆಶ್ರಯದಲ್ಲಿ ನಡೆದ ಪತ್ರಿಕಾ ದಿನಾಚರಣೆ ಸಮಾರಂಭವನ್ನು ಸಸಿಗೆ ನೀರುಣಿಸಿ ಉದ್ಘಾಟಿಸಿ ಮಾತನಾಡಿ. ಬರವಣಿಗೆ ಶೈಲಿಯಿಲ್ಲದೆ ಕೆಲ ಪತ್ರಕರ್ತರು ಕೇವಲ ಓಲೈಕೆಗೆ ಸೀಮಿತರಾಗಿದ್ದಾರೆ. ಆದರೆ, ಸಮಾಜ, ಸರ್ಕಾರ ಹಾಗೂ ಅಧಿಕಾರಿ ವರ್ಗವನ್ನು ತಿದ್ದುವ ಕಾರ್ಯವನ್ನು ಪತ್ರಿಕಾರಂಗ ಮಾಡಬೇಕೆಂದರು.ಜಿಲ್ಲಾ ಕಾನಿಪ ಸಂಘದ ಅಧ್ಯಕ್ಷ ಮಹೇಶ ಅಂಗಡಿ ಹಾಗೂ ರಾಜ್ಯ ಕಾನಿಪ ಕಾರ್ಯಕಾರಿಣಿ ಸದಸ್ಯ ಈಶ್ವರ ಶೆಟ್ಟರ ಮಾತನಾಡಿ, ಸರಸ್ವತಿ ಸಂಹಾರಕರೇ ಇಂದು ಪತ್ರಿಕಾಲೋಕದಲ್ಲಿ ಮಿಂಚುತ್ತಿರುವುದು ದುರಂತ. ಬರೆಯುವ ಪ್ರವೃತ್ತಿ ಪತ್ರಕರ್ತರಲ್ಲಿ ಕ್ಷೀಣಿಸುತ್ತಿದ್ದು, ಇದರ ಸುಧಾರಣೆಗೆ ತಾಲೂಕು ಮತ್ತು ಗ್ರಾಮೀಣ ಹಂತದಲ್ಲಿ ಪತ್ರಕರ್ತರಿಗಾಗಿ ಕಾರ್ಯಾಗಾರಗಳನ್ನು ಆಯೋಜಿಸಬೇಕು. ಪ್ರತಿವರ್ಷ ನಡೆಯುವ ಪತ್ರಿಕಾ ದಿನಾಚರಣೆಯ ಸಂದರ್ಭದಲ್ಲಿ ಪತ್ರಿಕೆ ವಿತರಕರು ಹಾಗೂ ಹಿರಿಯ ಪತ್ರಕರ್ತರು, ಪತ್ರಕರ್ತರ ಪ್ರತಿಭಾವಂತ ಮಕ್ಕಳನ್ನು ಸನ್ಮಾನಿಸುವ ಕಾರ್ಯ ನಡೆಯಬೇಕು ಎಂದು ಸಲಹೆ ನೀಡಿದರು.ರಾಜ್ಯ ಮಟ್ಟದಲ್ಲಿ ಸರ್ಕಾರ ವಿವಿಧ ಸಾಧಕರ ಜಯಂತಿಗಳನ್ನು ಆಚರಿಸುತ್ತಿರುವಂತೆ, ಪತ್ರಿಕಾ ದಿನಾಚರಣೆಯನ್ನೂ ಸರ್ಕಾರದಿಂದ ಆಚರಿಸುವಂತಾಗಲು ಶಾಸಕರು ವಿಧಾನಸಭೆಯಲ್ಲಿ ಒತ್ತಾಯಿಸಬೇಕು ಎಂದು ಮನವಿ ಮಾಡಿದರು.
ಕಾಂಗ್ರೆಸ್ ಮುಖಂಡ ಸಿದ್ದು ಕೊಣ್ಣೂರ ಮಾತನಾಡಿ, ಕೆಲಸ ಮಾಡಿದವರನ್ನು ಪ್ರಾಮಾಣಿಕವಾಗಿ ಗುರ್ತಿಸಿ, ಬಡಾಯಿಕೋರರ ಬಣ್ಣ ಬಯಲು ಮಾಡುವತ್ತ ಪತ್ರಕರ್ತರು ಪ್ರಾಮಾಣಿಕವಾಗಿ ಯತ್ನಿಸಬೇಕೆಂದರು. ತಾಲೂಕು ಕಾನಿಪ ಸಂಘದ ಅಧ್ಯಕ್ಷ ಪ್ರಕಾಶ ಕುಂಬಾರ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಮ.ಕೃ.ಮೇಗಾಡಿ ಪ್ರಾರ್ಥಿಸಿದರು. ಶಿವಾನಂದ ಮಹಾಬಲಶೆಟ್ಟಿ ಮಾತನಾಡಿದರು. ಕಿರಣ ಆಳಗಿ ನಿರೂಪಿಸಿದರು. ಮಾಧವಾನಂದ ಕೋಪರ್ಡೆ ವಂದಿಸಿದರು.ಸಮಾರಂಭದಲ್ಲಿ ಶಿವಾನಂದ ಮಹಾಬಲಶೆಟ್ಟಿ, ಚಂದ್ರಶೇಖರ ತುಂಗಳ, ಮಾಧವಾನಂದ ಕೋಪರ್ಡೆ, ಕಿರಣ ಆಳಗಿ, ಬಸಯ್ಯ ವಸ್ತ್ರದ, ವಿಶ್ವಜ ಕಾಡದೇವರ, ಯಶವಂತ ವಾಗ್ಮೋರೆ, ಮಹಾದೇವ ತೋಟಗೇರ, ಬಸವರಾಜ ಪಟ್ಟಣ, ಬಸವರಾಜ ಜಾಗೋಜಿ, ಕಾಡೇಶ ಕಂಪು, ಮಹೇಶ ಆರಿ, ಚಂದ್ರಶೇಖರ ಮೋರೆ, ಅರುಣ ಯಾದವಾಡ, ಬಿ.ಟಿ. ಪತ್ತಾರ ಸೇರಿದಂತೆ ತೇರದಾಳ ಹಾಗೂ ಮಹಾಲಿಂಗಪುರ ನಗರಗಳ ಅನೇಕ ಪತ್ರಕರ್ತರು ಉಪಸ್ಥಿತರಿದ್ದರು.
ಅವಳಿ ನಗರದ ಹಿರಿಯರಾದ ಚಿದಾನಂದ ಸೊಲ್ಲಾಪುರ, ರಾಮಣ್ಣ ಹುಲಕುಂದ, ಶಂಕರ ಜಾಲಿಗಿಡದ, ಸಾಹಿತಿಗಳಾದ ಮಲ್ಲಿಕಾರ್ಜುನ ಹುಲಗಬಾಳಿ, ಶಿವಾನಂದ ಬಾಗಲಕೋಟಮಠ, ಧರೆಪ್ಪ ಉಳ್ಳಾಗಡ್ಡಿ, ಸುರೇಶ ಚಿಂಡಕ, ರಾಜು ಜಾಲಿಗಿಡದ, ನಂದಾ ಕೊಕಟನೂರ, ಮಹಾನಂದ ಹೊರಟ್ಟಿ ಸೇರಿ ಇತರರು ಇದ್ದರು.ಇಂದು ಸಾಮಾಜಿಕ ಜಾಲತಾಣಗಳ ಹಾವಳಿ ಹೆಚ್ಚಾಗಿದ್ದು, ಸತ್ಯ ಮತ್ತು ವಸ್ತುನಿಷ್ಠ ವರದಿಗಳು ದೂರವಾಗುತ್ತಿದ್ದು, ಅಸತ್ಯವೇ ಜನತೆಯೆದುರು ವಿಜೃಂಭಿಸುವಂತಾಗಿದೆ. ಸುದ್ದಿಗಳಲ್ಲಿ ಟಿವಿಯಲ್ಲಿ ಮೂಡುವ ಸುದ್ದಿಗಳು ಫಾಸ್ಟ್‌ಫುಡ್‌ನಂತಿದ್ದರೆ, ಮುದ್ರಣ ಮಾಧ್ಯಮದ ವೃತ್ತ ಪತ್ರಿಕೆಗಳು ಮನೆಯೂಟದಂತಿದ್ದು, ಬೇಕಾದಾಗ ಸವಿಯುವಂತೆ ಹಾಗೂ ದಾಖಲೆಗಳಾಗಿಯೂ ಉಳಿಯುತ್ತವೆ.-ಸಿದ್ದು ಸವದಿ, ಶಾಸಕ