ಪತ್ರಕರ್ತರ ಟರ್ಫ್ ಕ್ರಿಕೆಟ್ ಪಂದ್ಯಾವಳಿ ಮಾ.29ರಂದು ಸಿದ್ದಾಪುರದಲ್ಲಿ ನಡೆಯಲಿದೆ. ಬುಧವಾರ ಕುಶಾಲನಗರ ತಾಲೂಕಿನ ಹೊಸಕೋಟೆಯ ರೆಸಾರ್ಟ್‌ನಲ್ಲಿ ಆಟಗಾರರ ಬಿಡ್ಡಿಂಗ್ ಪ್ರಕ್ರಿಯೆ ನಡೆಯಿತು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಕೊಡಗು ಪ್ರೆಸ್ ಕ್ಲಬ್ ಸೌಹಾರ್ದ ಸಹಕಾರಿ ಸಂಘ ಆಶ್ರಯದಲ್ಲಿ ಪತ್ರಕರ್ತರ ಟರ್ಫ್ ಕ್ರಿಕೆಟ್ ಪಂದ್ಯಾವಳಿ ಮಾ.29ರಂದು ಸಿದ್ದಾಪುರದಲ್ಲಿ ನಡೆಯಲಿದೆ. ಬುಧವಾರ ಕುಶಾಲನಗರ ತಾಲ್ಲೂಕಿನ ಹೊಸಕೋಟೆಯ ರೆಸಾರ್ಟ್‌ನಲ್ಲಿ ಆಟಗಾರರ ಬಿಡ್ಡಿಂಗ್ ಪ್ರಕ್ರಿಯೆ ನಡೆಯಿತು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಕೊಡಗು ಪ್ರೆಸ್ ಕ್ಲಬ್ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ, ಪ್ರೆಸ್ ಕ್ಲಬ್ ಸೌಹಾರ್ದ ಸಹಕಾರಿ ಸಂಘದ ಸದಸ್ಯರನ್ನು ಒಂದೆಡೆ ಸೇರಿಸುವ ಉದ್ದೇಶದಿಂದ ವಿನೂತನವಾಗಿ ಟರ್ಫ್ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಲಾಗಿದೆ. ಎಂಟು ತಂಡಗಳು ಭಾಗವಹಿಸಲಿದೆ ಎಂದರು.

ಕೊಡಗು ಪ್ರೆಸ್ ಕ್ಲಬ್ ಸೌಹಾರ್ದ ಸಹಕಾರಿ ಸಂಘ ಹಾಗೂ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ನಿರ್ದೇಶಕಿ ಸವಿತಾ ರೈ ಪಂದ್ಯಾವಳಿ ಕುರಿತು ಸಂತಸ ವ್ಯಕ್ತಪಡಿಸಿದರು.

ಉದ್ಯಮಿ ಹಾಗೂ ಕುಶಾಲನಗರ ಕಾಂಗ್ರೆಸ್ ಮುಖಂಡ ಅಜೀಜ್ ಮಾತನಾಡಿ, ಸುದ್ದಿಯ ಒತ್ತಡದಲ್ಲೇ ಕಾರ್ಯನಿರ್ವಹಿಸುವ ಪತ್ರಕರ್ತರಲ್ಲಿ ಉತ್ತಮ ಕ್ರೀಡಾಪಟುಗಳು ಇದ್ದಾರೆ ಎಂದರು.

ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಾಚರಣಿಯಂಡ ಅನು ಕಾರ್ಯಪ್ಪ,ಪ್ರೆ ಸ್ ಕ್ಲಬ್ ಅಧ್ಯಕ್ಷ ಬೊಳ್ಳಜಿರ ಅಯ್ಯಪ್ಪ ಇದ್ದರು. ಬಿಡ್ಡಿಂಗ್ ಪ್ರಕ್ರಿಯೆಯನ್ನು ಸಿದ್ದಾಪುರದ ಸಿಟಿ ಬಾಯ್ಸ್ ತಂಡ ಪದಾಧಿಕಾರಿಗಳು ನಡೆಸಿಕೊಟ್ಟರು.ಪ್ರಥಮ ವರ್ಷದ ಪತ್ರಕರ್ತರ ಟರ್ಫ್ ಕ್ರಿಕೆಟ್ ಪಂದ್ಯಾವಳಿಗೆ ಒಟ್ಟು

ಪ್ರೆಸ್ ಕ್ಲಬ್ ಸೌಹಾರ್ದ ಸಹಕಾರಿ ಸಂಘದ 80 ಸದಸ್ಯರು ನೋಂದಣಿ ಮಾಡಿಕೊಂಡಿದ್ದರು.

ಸಂಘದ ಉಪಾಧ್ಯಕ್ಷ ರೆಜಿತ್ ಕುಮಾರ್ ಗುಹ್ಯ ನಿರೂಪಿಸಿದರು.ನಿರ್ದೇಶಕರಾದ ಕೆ.ಬಿ ಶಂಶುದ್ದೀನ್ ಸ್ವಾಗತಿಸಿ. ಆರ್.ಸುಬ್ರಮಣಿ ವಂದಿಸಿದರು.ತಂಡಗಳ ಮಾಹಿತಿ:

1) ಮಾಲೀಕರು : ಇಸ್ಮಾಯಿಲ್ ಕಂಡಕರೆ, ನಾಯಕ : ನೌಫಲ್ ಕಡಂಗ, ತಂಡ : ಮೀಡಿಯಾ ಸೂಪರ್ ಕಿಂಗ್ಸ್.2) ಮಾಲೀಕರು: ಸಂತೋಷ್ ರೈ, ಸವಿತಾ ರೈ, ನಾಯಕ :ಎ.ಎಸ್ ಮುಸ್ತಫ, ತಂಡ: ಮೀಡಿಯಾ ರಾಯಲ್ಸ್3) ಮಾಲೀಕರು: ಎಂ.ಎನ್ ಚಂದ್ರಮೋಹನ್, ನಾಯಕ: ಎಚ್.ಸಿ ಜಯಪ್ರಕಾಶ್,

ತಂಡ :ಕಾವೇರಿ ಮೀಡಿಯಾ ಕ್ರಿಕೆಟರ್ಸ್4) ಮಾಲೀಕರು: ಸಣ್ಣುವಂಡ ಕಿಶೋರ್ ನಾಚಪ್ಪ, ವಿ.ವಿ ಅರುಣ್ ಕುಮಾರ್,

ನಾಯಕ: ಮಂಡೇಡ ಅಶೋಕ್, ತಂಡ: ಗೋಣಿಕೊಪ್ಪ ಮೀಡಿಯಾ.

5) ಮಾಲೀಕರು: ಪಿ.ವಿಷ್ಣು, ನಾಯಕ : ಡಾ.ಹೇಮಂತ್ ಕುಮಾರ್, ತಂಡ : ಟೀಮ್ ಅಯರ.6) ಮಾಲೀಕರು: ಎ.ಎನ್ ಪದ್ಮನಾಭ, ನಾಯಕ : ಪ್ರೇಮ್, ತಂಡ : ನನ್ನ ಧ್ವನಿ 7) ಮಾಲೀಕರು: ಚೆಯ್ಯಂಡ ಸತ್ಯ, ನಾಯಕ : ಆದರ್ಶ್, ತಂಡ: ಬ್ರಾಡ್ ಕಾಸ್ಟ್ ಇಬ್ನಿ ಬ್ಲಾಸ್ಟರ್ಸ್.8) ಮಾಲೀಕರು: ಮಚ್ಚಮಾಡ ಅನೀಶ್ ಮಾದಪ್ಪ, ನಾಯಕ : ದಿವಾಕರ, ತಂಡ : ಟೀಂ ಕಾಫಿ ನಾಡ್.