ಜಾಯ್ ಪದ್ಯಗಳು ವಿಶಿಷ್ಟ ಕವನ ಸಂಕಲನ.ಆಲಿದ ಸಾಕುನಾಯಿಯ ಕುರಿತು ಬರೆದ ಪದ್ಯಗಳ ಗುಚ್ಛ ಇದಾಗಿದೆ. ಸಾವಿನ ಸನ್ನಿಧಿಯಲ್ಲಿ ಬದುಕಿನ ಧ್ಯಾನವನ್ನು ಮಾಡಿರುವ ಸಾಲುಗಳು ಇವಾಗಿವೆ. ಈ ಹಿಂದೆ ತಂದೆಯ ಸಾವಿನ ಸಂಬಂಧಿ ಕವನ ಸಂಕಲನ ಎಲೆ ಎಸೆದ ಮರವನ್ನು ಕೆ.ಪಿ.ಮೃತ್ಯುಂಜಯ ಪ್ರಕಟಿಸಿದ್ದರು.
ಕನ್ನಡಪ್ರಭ ವಾರ್ತೆ ಮಂಡ್ಯ
ಸ್ನೇಹ ಬಳಗದಿಂದ ಅಮರ್ತ್ಯ ಪ್ರಕಾಶನ ಪ್ರಕಟಿಸಿರುವ ಕೆ.ಪಿ.ಮೃತ್ಯುಂಜಯ ಅವರ ಜಾಯ್ ಪದ್ಯಗಳು ಪುಸ್ತಕ ಲೋಕಾರ್ಪಣೆ ಮತ್ತು ಗೌರವ ಸಮರ್ಪಣೆ ಕಾರ್ಯಕ್ರಮವನ್ನು ಏ ೨೭ರಂದು ಬೆಳಗ್ಗೆ ೧೦ ಗಂಟೆಗೆ ನಗರದ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ಆಯೋಜಿಸಲಾಗಿದೆ ಎಂದು ತಾಪಂ ಮಾಜಿ ಅಧ್ಯಕ್ಷ ಸಿ.ತ್ಯಾಗರಾಜು ಹೇಳಿದರು.ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಪುಸ್ತಕ ಬಿಡುಗಡೆ ಮತ್ತು ಕವಿಗೆ ಗೌರವ ಸಮರ್ಪಣೆ ಮಾಡುವರು. ಅಧ್ಯಕ್ಷತೆಯನ್ನು ಶಾಸಕ ಪಿ.ರವಿಕುಮಾರ್ ವಹಿಸುವರು. ಗೌರವ ಅತಿಥಿಯಾಗಿ ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಭಾಗವಹಿಸುವರು. ಪುಸ್ತಕ ಕುರಿತು ಆಂಗ್ಲ ಪ್ರಾಧ್ಯಾಪಕ ಪ್ರಸನ್ನಕುಮಾರ್ ಮಾತನಾಡುವರು ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕವಿ, ಉಪನ್ಯಾಸಕ ಕೆ.ಪಿ.ಮೃತ್ಯುಂಜಯ ಹಾಗೂ ತಾಪಂ ಮಾಜಿ ಅಧ್ಯಕ್ಷ ಸಿ.ತ್ಯಾಗರಾಜು ಉಪಸ್ಥಿತರಿರುವರು.ಸ್ನೇಹ ಬಳಗದಿಂದ ಸಿ.ಎಂ.ದ್ಯಾವಪ್ಪ, ಎಲ್.ಸಂದೇಶ್, ಗೊರವಾಲೆ ಚಂದ್ರಶೇಖರ್, ಎಂ.ಯೋಗೇಶ್, ಡಾ.ರಾಜು ಇತರರು ಭಾಗವಹಿಸುವರು ಎಂದರು.ಜಾಯ್ ಪದ್ಯಗಳು ವಿಶಿಷ್ಟ ಕವನ ಸಂಕಲನ.ಆಲಿದ ಸಾಕುನಾಯಿಯ ಕುರಿತು ಬರೆದ ಪದ್ಯಗಳ ಗುಚ್ಛ ಇದಾಗಿದೆ. ಸಾವಿನ ಸನ್ನಿಧಿಯಲ್ಲಿ ಬದುಕಿನ ಧ್ಯಾನವನ್ನು ಮಾಡಿರುವ ಸಾಲುಗಳು ಇವಾಗಿವೆ. ಈ ಹಿಂದೆ ತಂದೆಯ ಸಾವಿನ ಸಂಬಂಧಿ ಕವನ ಸಂಕಲನ ಎಲೆ ಎಸೆದ ಮರವನ್ನು ಕೆ.ಪಿ.ಮೃತ್ಯುಂಜಯ ಪ್ರಕಟಿಸಿದ್ದರು. ಇದೂ ಸಹ ವಿಶಿಷ್ಟ ಸಂಕಲನ ಎನಿಸಿತ್ತು. ಕೆ.ಪಿ.ಮೃತ್ಯುಂಜಯ ಪ್ರಕಟಿತ ಕೃತಿಗಳಿಗೆ ಹಲವು ಗೌರವ ಪ್ರಶಸ್ತಿಗಳು ಲಭಿಸಿವೆ ಎಂದರು.
ಒಂದು ಅನುರಾಗಕ್ಕಾಗಿ ಎಷ್ಟೆಲ್ಲ, ಮರ್ತ್ಯ ಮೀರದ ಮಾತು, ಅವರವರ ಸಾವು, ದೊಡ್ಡಮ್ಮ ದೇವತೆಗೆ ಕಣ್ಣು ಧರಿಸಿದ ಹೊತ್ತು, ನನ್ನ ಶಬ್ಧ ನಿನ್ನಲ್ಲಿ ಬಂದು, ಉಳಿದುಬಿಡು ಒಂದು ಬಿಂದುವಾಗಿ, ಎಲೆಗಳ ತರಹ ಬಾಳುವುದಾದರೆ ಎಂಬ ಕವನಸಂಕಲನಗಳು ಪ್ರಕಟಗೊಂಡಿದ್ದು, ಮುದ್ದಣ ಕಾವ್ಯ ಪುರಸ್ಕಾರ, ಡಾ.ದಿನಕರ ದೇಸಾಯಿ ಕಾವ್ಯಪುರಸ್ಕಾರ, ಎಂ.ಎಲ್.ಶ್ರೀಕಂಠೇಶಗೌಡ ಸಾಹಿತ್ಯ ಪ್ರಶಸ್ತಿ, ವೀಚಿ, ಸಾಹಿತ್ಯ ಪ್ರಶಸ್ತಿ ಸೇರಿ ಹಲವು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ.ಗೋಷ್ಠಿಯಲ್ಲಿ ಎಲ್.ಸಂದೇಶ್, ಸಿ.ಎಂ.ದ್ಯಾವಪ್ಪ, ಎಂ.ಯೋಗೇಶ್, ಲಿಂಗಣ್ಣ ಇದ್ದರು.