ಭಾಷೆಗಳ ಉಗಮಕ್ಕೆ ಚಿತ್ರಕಲಾ ಕಾರಣ: ಕೆ.ಸಿ. ಮಹದೇವಶೆಟ್ಟಿ

| Published : Apr 23 2024, 01:47 AM IST

ಭಾಷೆಗಳ ಉಗಮಕ್ಕೆ ಚಿತ್ರಕಲಾ ಕಾರಣ: ಕೆ.ಸಿ. ಮಹದೇವಶೆಟ್ಟಿ
Share this Article
  • FB
  • TW
  • Linkdin
  • Email

ಸಾರಾಂಶ

ಆದಿಮಾನವ ಮೊದಲು ಸಂಜ್ಞೆ ಬಳಸುತ್ತಿದ್ದ. ನಂತರ ಚಿತ್ರ ಬಿಡಿಸುವುದನ್ನು ಕಲಿತ ಎಂದರು. ಶಿಬಿರದಲ್ಲಿ ಮಕ್ಕಳು ರಚಿಸಿರುವ ಚಿತ್ರಕಲೆಗಳು ಮನಸ್ಸಿಗೆ ಆಹ್ವಾದವನ್ನುಂಟು ಮಾಡುತ್ತವೆ.

- ಜೆಎಸ್ಎಸ್ ಮಹಾವಿದ್ಯಾಪೀಠದ ಚಿತ್ರಕಲಾ ಶಿಬಿರ ಸಮಾರೋಪಕನ್ನಡಪ್ರಭ ವಾರ್ತೆ ಮೈಸೂರು

ಭಾಷೆಗಳ ಉಗಮಕ್ಕೆ ಚಿತ್ರಕಲೆ ಕಾರಣ ಎಂದು ಶ್ರೀ ಕಲಾನಿಕೇತನ ಕಲಾ ಕಾಲೇಜಿನ ಪ್ರಾಂಶುಪಾಲರೂ ಆದ ರಾಜ್ಯ ಲಲಿತಕಲಾ ಅಕಾಡೆಮಿ ಸದಸ್ಯ ಕೆ.ಸಿ. ಮಹದೇವಶೆಟ್ಟಿ ಹೇಳಿದರು.

ಜೆಎಸ್ಎಸ್ ಮಹಾವಿದ್ಯಾಪೀಠವು ರಾಜೇಂದ್ರ ಭವನದಲ್ಲಿ ಸೋಮವಾರ ಏರ್ಪಡಿಸಿದ್ದ ಚಿತ್ರಕಲಾ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಕ್ಕಳ ಚಿತ್ರಕಲಾ ಪ್ರದರ್ಶನ ಉದ್ಘಾಟಿಸಿ ಮಾತನಾಡಿದ ಅವರು, ಅಕ್ಷರಗಳ ತಾಯಿ ಚಿತ್ರಕಲೆ.

ಆದಿಮಾನವ ಮೊದಲು ಸಂಜ್ಞೆ ಬಳಸುತ್ತಿದ್ದ. ನಂತರ ಚಿತ್ರ ಬಿಡಿಸುವುದನ್ನು ಕಲಿತ ಎಂದರು.

ಶಿಬಿರದಲ್ಲಿ ಮಕ್ಕಳು ರಚಿಸಿರುವ ಚಿತ್ರಕಲೆಗಳು ಮನಸ್ಸಿಗೆ ಆಹ್ವಾದವನ್ನುಂಟು ಮಾಡುತ್ತವೆ. ಮಕ್ಕಳ ಮನಸ್ಸು ಪ್ರಬುದ್ಧವಾಗಿ ಬೆಳೆಯಲು ಚಿತ್ರಕಲೆ ಅವಶ್ಯಕ ಎಂದ ಅವರು, ತಂತ್ರಜ್ಞಾನದ ಕೆಟ್ಟ ಪರಿಣಾಮದಿಂದ ಎಲ್ಲವನ್ನು ಗೂಗಲ್ನಲ್ಲಿ ಹುಡುಕಲಾಗುತ್ತದೆ. ಆದರೆ ಮಕ್ಕಳು ಇಲ್ಲಿ ಸ್ವಂತಿಕೆ, ಅನುಭವದಿಂದ ಚಿತ್ರ ರಚಿಸಿದ್ದಾರೆ. ನಿಸರ್ಗ, ಜನಪದ, ಮಂಡಲ ಸೇರಿದಂತೆ ಎಲ್ಲಾ ಚಿತ್ರಗಳು ಚೆನ್ನಾಗಿ ಮೂಡಿ ಬಂದಿವೆ ಎಂದು ಶ್ಲಾಘಿಸಿದರು.

ಪೋಷಕರು ಮಕ್ಕಳಲ್ಲಿರುವ ಸೃಜನಾತ್ಮಕ ಆಸಕ್ತಿಯನ್ನು ಗುರುತಿಸಿ, ಇದೇ ರೀತಿ ಮುಂದೆಯೂ ಪ್ರೋತ್ಸಾಹಿಸುವಂತೆ ಅವರು ಸಲಹೆ ಮಾಡಿದರು.

ಅಧ್ಯಕ್ಷತೆ ವಹಿಸಿದ್ದ ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಮಾತನಾಡಿ, ಮಕ್ಕಳ ಬೇಸಿಗೆ ಶಿಬಿರಗಳು ಸಂಪೂರ್ಣ ವಾಣಿಜ್ಯೀಕರಣಗೊಂಡಿದ್ದು, ಬಹುತೇಕ ಕಡೆ ಪಾಶ್ಚಾತ್ಯ ಸಂಗೀತ ಮತ್ತಿತರವುಗಳನ್ನು ಕಲಿಸುತ್ತಿರುವಾಗ ಜೆಎಸ್ಎಸ್ ಮಹಾವಿದ್ಯಾಪೀಠ ಕಳೆದ ಚಿತ್ರಕಲಾ ಶಿಬಿರವನ್ನು ನಡೆಸಿಕೊಂಡು ಬರುತ್ತಿರುವುದು ಮೆಚ್ಚಬೇಕಾದ ಸಂಗತಿ ಎಂದರು,.

ಶಿಬಿರದ ಸಂಚಾಲಕ ಎಸ್.ಎಂ. ಜಂಬುಕೇಶ್ವರ ಪ್ರಾಸ್ತಾವಿಕ ಭಾಷಣ ಮಾಡಿ, ಮಕ್ಕಳಿಗೆ ಬೆಳಗ್ಗೆ 9 ರಿಂದ ಮಧ್ಯಾಹ್ನ 1 ರವಗೆಗೆ ನಿಸರ್ಗದ ಮರದ ನೆರಳಿನಡಿ ಕೂರಿಸಿ, ಚಿತ್ರಕಲೆ ಕಲಿಸಲಾಗುತ್ತದೆ. ನಾವು ಬೇರೆಡೆಯಿಂದ ಸಂಪನ್ಮೂಲ ವ್ಯಕ್ತಿಗಳನ್ನು ಕರೆಸಿಲ್ಲ. ಜೆಎಸ್ಎಸ್ ಸಂಸ್ಥೆಗಳಲ್ಲಿ ಕೆಲಸ ಮಾಡುವ ಚಿತ್ರಕಲಾ ಶಿಕ್ಷಕರೇ ಆಸಕ್ತಿಯಿಂದ ಮಕ್ಕಳಿಗೆ ಕಲಿಸುತ್ತಾರೆ ಬರುತ್ತಿದ್ದಾರೆ ಎಂದರು.

ಮಕ್ಕಳನ್ನು ಸೋಮನಾಥಪುರ, ಮುಡುಕುತೊರೆ, ಸುತ್ತೂರು ಶ್ರೀ ಕ್ಷೇತ್ರಕ್ಕೂ ಕರೆದುಕೊಂಡು ಹೋಗಿ, ನಿಸರ್ಗ ಚಿತ್ರರಚನೆಯ ಬಗ್ಗೆ ತಿಳಿಸಿಕೊಡಲಾಯಿತು. ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಜೆಎಸ್ಎಸ್ ವಿದ್ಯಾಪೀಠದ ಸಾಮಾನ್ಯ ಶಿಕ್ಷಣ ವಿಭಾಗ, ಸಂಸ್ಥೆಯ ಚಿತ್ರಕಲಾ ಶಿಕ್ಷಕರು, ಪೋಷಕರ ಹಾಗೂ ವಿದ್ಯಾರ್ಥಿಗಳ ಸಹಕಾರದಿಂದ ಶಿಬಿರ ಯಶಸ್ವಿಯಾಗಿದೆ. ಮಕ್ಕಳು ಅತ್ಯುತ್ತಮವಾದ ರೀತಿಯಲ್ಲಿ ಚಿತ್ರಗಳನ್ನು ರಚಿಸಿ,ಇಲ್ಲಿ ಪ್ರದರ್ಶಿಸಿದ್ದಾರೆ ಎಂದರು.

ಶಿಬಿರಾರ್ಥಿಗಳಾದ ದೃತಕೀರ್ತಿ, ಅಭಿನಂದನ್, ಧನ್ಯಾ ಡಿ. ಪ್ರಭು, ಪೋಷಕರಾದ ಕಾಶೀನಾಥ್, ಆಶಾ, ರೇಖಾ ಶಿಬಿರದ ಬಗ್ಗೆ ಅನಿಸಿಕೆಗಳನ್ನು ಹಂಚಿಕೊಂಡರು.

ಶಿಬಿರಾರ್ಥಿ ಬಿ. ಲಿಖಿತಾ ಪ್ರಾರ್ಥಿಸಿದರು ಹಾಗೂ ವರದಿ ಓದಿದರು. ಶಿಕ್ಷಕ ಎಂ. ನಾಗೇಂದ್ರ ಸ್ವಾಗತಿಸಿದರು. ಶಿಕ್ಷಕ ಡಿ.ಎಸ್. ನಾಗರಾಜಪ್ಪ ವಂದಿಸಿದರು. ಶಿಕ್ಷಕ ಪಿ.ಎಸ್. ಸಲಬಣ್ಣವರ್ ನಿರೂಪಿಸಿದರು. ಶಿಕ್ಷಕರಾದ ಪಲ್ಲೇದ, ವೆಂಕಟರಾಜು, ಮೌನೇಶ್ ಬಡಿಗೇರ್, ಬಿ.ಎಂ. ಕೆರೂರ್, ಜೆಎಸ್ಎಸ್ ಸಾಮಾನ್ಯ ಶಿಕ್ಷಣ ವಿಭಾಗದ ಅಧಿಕಾರಿಗಳಾದ ರೇನುರ್ ಸ್ವಾಮಿ, ಚನ್ನಬಸಪ್ಪ, ನಾಗರಾಜು ಇದ್ದರು.

ಬಹುಮಾನ ವಿಜೇತರು

ಶಿಬಿರದಲ್ಲಿ ಒಟ್ಟು 71 ಮಂದಿ ಭಾಗವಹಿಸಿದ್ದರು. ಶಿಬಿರದಲ್ಲಿ ಬಿಡಿಸಿದ ಚಿತ್ರಗಳಿಗೆ ಮೂರು ವಿಭಾಗಗಳಲ್ಲಿ ತಲಾ ನಾಲ್ಕು ಬಹುಮಾಗಳನ್ನು ನೀಡಲಾಯಿತು. 1-4 ತರಗತಿ ವಿಭಾಗ- ಐಸಿರಿ, ಧನ್ವಂತ್, ಹರ್ಷಿತಾ, ಮೋನಿಶ್, 5 ರಿಂದ 7 ನೇ ತರಗತಿ ವಿಭಾಗ- ಶ್ರುತಿಕೀರ್ತಿ, ಅಭಿನಂದನ್, ಧೃತಿ, ವರ್ಷಿನಿ, 8 ರಿಂದ 11 ನೇ ತರಗತಿ ವಿಭಾಗ- ಹ್ಯಬಾ, ಲಿಖಿತಾ, ಚಂದನ, ರಾಜಗುರು ಬಹುಮಾನಗಳನ್ನು ಪಡೆದರು.