ಸಾರಾಂಶ
ಕನ್ನಡಪ್ರಭ ವಾರ್ತೆ ಬೆಟ್ಟದಪುರಮದ್ಯ ಸೇವನೆಯು ಒಂದು ಚಟವಾಗಿದ್ದು, ಈ ಚಟ ಪುರುಷರಲ್ಲಿ ವಿಪರೀತವಾಗಿದೆ. ನಾಗರೀಕತೆಯ ಹುಚ್ಚಾಟದಲ್ಲಿ ಮಹಿಳೆಯರೂ ಚಟಕ್ಕೆ ಒಳಗಾಗುತ್ತಿರುವುದು ಆತಂಕ ಉಂಟು ಮಾಡುತ್ತಿದೆ ಎಂದು ಸರ್ಕಾರಿ ಆಸ್ಪತ್ರೆ ಆಡಳಿತಾಧಿಕಾರಿ ಡಾ. ಶಿವಪ್ರಸಾದ್ ವಿಷಾದಿಸಿದರು. ಪಟ್ಟಣದ ಜೆಎಸ್ಎಸ್ ಮಂಗಳ ಮಂಟಪದಲ್ಲಿ ಬುಧವಾರ ಶ್ರೀ ಧರ್ಮಸ್ಥಳ ಗ್ರಾಮೋದ್ಯೋಗ ಸಂಸ್ಥೆಯಿಂದ ಆಯೋಜಿಸಿದ್ದ ಮದ್ಯವರ್ಜನ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.ನಗರ ಪ್ರದೇಶಗಳಲ್ಲಿ ಮಹಿಳೆಯರು, ಪುರುಷರು ಒಟ್ಟಿಗೆ ಸೇರಿ ಮದ್ಯಸೇವನೆ ಮಾಡುತ್ತಿರುವುದು ಹೆಚ್ಚಾಗಿ ಕಾಣಬಹುದಾಗಿದ್ದು, ಗ್ರಾಮೀಣ ಪ್ರದೇಶದ ಮಹಿಳೆಯರಲ್ಲಿ ಇದು ಬಹಳ ವಿರಳ, ಇತ್ತೀಚಿನ ದಿನಗಳಲ್ಲಿ ಯುವ ಪೀಳಿಗೆ ಗಾಂಜಾ, ಅಫೀಮು, ಡ್ರಗ್ಸ್ ಸೇವನೆ ಚಟಗಳಿಗೆ ದಾಸರಾಗಿರುವುದು ಪೋಷಕರಲ್ಲಿ ಭಯ ಹುಟ್ಟಿಸುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಸ್ಥೆ ಮದ್ಯವರ್ಜನ ಶಿಬಿರವನ್ನು ಆಯೋಜಿಸಿರುವುದು ಅರ್ಥಪೂರ್ಣವಾಗಿದೆ ಎಂದು ಹೇಳಿದರು.ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನಿದೇರ್ಶಕ ವಿಜಯಕುಮಾರ್ ನಾಗನಾಳ ಮಾತನಾಡಿ, ಪ್ರತಿ ವರ್ಷವೂ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ, ಸಂಘ ಸಂಸ್ಥೆಗಳ ಜೊತೆಗೂಡಿ ಮದ್ಯ ವರ್ಜನ ಶಿಬಿರಗಳನ್ನು ನಡೆಸಿಕೊಂಡು ಬರಲಾಗುತ್ತಿದೆ, ತಾಲೂಕಿನ ಮದ್ಯವ್ಯಸನಿಗಳ ಮನಃಪರಿವರ್ತನೆ ಮಾಡಿ ಅವರ ಕುಟುಂಬ, ಜೀವನವನ್ನು ರೂಪಿಸಿಕೊಳ್ಳಲು ಅನುಕೂಲವಾಗುವಂತಹ ಕಾರ್ಯಕ್ರಮ ಇದಾಗಿದೆ ಎಂದು ಹೇಳಿದರು.ನಗರಸಭೆ ಅಧ್ಯಕ್ಷ ಶ್ರೀಕಂಠಸ್ವಾಮಿ, ವಿಶ್ವಕರ್ಮ ಅಭಿವೃದ್ಧಿ ನಿಗಮ ಮಾಜಿ ಅಧ್ಯಕ್ಷ ನಂದಕುಮಾರ್, ಪಿಎಸ್.ಐ ಗೋಪಾಲಕೃಷ್ಣ, ಮಕ್ಕಳ ಮನೆ ಸೋಮಶೇಖರ್, ಮುಖಂಡರಾದ ಅಳಗಂಚಿ ಶಿವಯ್ಯ , ಜಗದೀಶ್, ಚಿಕ್ಕಮಾದಪ್ಪ, ಧರ್ಮರಾಜ್, ಎಸ್.ಎ.ಎಲ್. ಮೂರ್ತಿ, ಗಟ್ಟವಾಡಿ ನಾಗರಾಜಪ್ಪ, ಪ್ರತಿಮಾ, ಮಂಜೇಶ್, ವರದರಾಜು, ಮಣಿಕಂಠ, ಕಿರಣ್, ಕ್ಷಮಾ, ಧನಲಕ್ಷ್ಮಿ ಇದ್ದರು.