ನ್ಯಾಯ ವ್ಯಕ್ತಿಯ ಮೂಲಭೂತ ಹಕ್ಕು

| Published : Sep 08 2025, 01:01 AM IST

ಸಾರಾಂಶ

ಸಾವು ಸಹೋದರತ್ವ ಮತ್ತು ಭ್ರಾತೃತ್ವದ ವಾತಾವರಣ ನಿರ್ಮಿಸುವ ಜತೆಗೆ ಮಾನವೀಯ ಸಮಾಜ ನಿರ್ಮಾಣಕ್ಕೆ ಪ್ರತಿಯೊಬ್ಬರು ಶ್ರಮಿಸಬೇಕು

ಕೊಪ್ಪಳ: ನ್ಯಾಯ ಎಂಬುವುದು ಪ್ರತಿಯೊಬ್ಬ ವ್ಯಕ್ತಿಯ ಮೂಲಭೂತ ಹಕ್ಕಾಗಿದೆ ಎಂದು ಮುಹಮ್ಮದ್‌ ಪೈಗಂಬರ್‌ರು ಸಾರಿದ್ದಾರೆಂದು ಶಾಸಕ ರಾಘವೇಂದ್ರ ಹಿಟ್ನಾಳ್ ಹೇಳಿದರು.

ನಗರದ ಯೂಸೂಫಿಯ ಮಸೀದಿ ಆವರಣದಲ್ಲಿ ಈದ್ ಮಿಲಾದ್ ಹಬ್ಬದ ಪ್ರಯುಕ್ತ ಏರ್ಪಡಿಸಿದ್ದ ಹಿಂದೂ-ಮುಸ್ಲಿಮರ ಭಾವೈಕ್ಯತೆಯ ಸಮ್ಮಿಲನ ಸಮಾರಂಭದಲ್ಲಿ ಪಾಲ್ಗೊಂಡು ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಶಾಂತಿ, ಸಮಾಧಾನ ನೆಲೆ ನಿಲ್ಲಬೇಕಾದರೆ ನ್ಯಾಯ ಪಾಲನೆ ಅನಿವಾರ್ಯವಾಗಿದೆ. ನ್ಯಾಯ ಮರೀಚಿಕೆಯಾದರೆ ಅಸಮಾಧಾನ, ಅಕ್ರಮ, ಆರಾಜಕತೆ ವರ್ದಿಸುತ್ತದೆ ಎಂದರು.

ಸಾವು ಸಹೋದರತ್ವ ಮತ್ತು ಭ್ರಾತೃತ್ವದ ವಾತಾವರಣ ನಿರ್ಮಿಸುವ ಜತೆಗೆ ಮಾನವೀಯ ಸಮಾಜ ನಿರ್ಮಾಣಕ್ಕೆ ಪ್ರತಿಯೊಬ್ಬರು ಶ್ರಮಿಸಬೇಕು. ಇಂತಹ ಹಬ್ಬಗಳ ಆಚರಣೆ ಮೂಲಕ ಪ್ರವಾದಿಗಳು, ಸಾಧು, ಸಂತರು ಹಾಕಿಕೊಟ್ಟ ಮಾರ್ಗದಲ್ಲಿ ಬದುಕು ಕಟ್ಟಿಕೊಳ್ಳಬೇಕು. ಸೌಹಾರ್ದತೆಯೊಂದಿಗೆ ಬದುಕಿದರೆ ಜೀವನ ಸಾರ್ಥಕವಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಅಂದಾನಪ್ಪ ಅಗಡಿ, ಶಾಂತಣ್ಣ ಮುದಗಲ್, ನಗರಸಭೆ ಅಧ್ಯಕ್ಷ ಅಮ್ಜದ್ ಪಟೇಲ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ. ಶ್ರೀನಿವಾಸ ಗುಪ್ತಾ, ನಗರ ಕಾಂಗ್ರೆಸ್ ಅಧ್ಯಕ್ಷ ಎಂ. ಪಾಷ ಕಾಟನ್, ಬಾಶೂ ಸಾಬ್ ಖತೀಬ್, ಪ್ರಸನ್ನ ಗಡಾದ್, ಶರಣಪ್ಪ ಸಜ್ಜನ್, ರವಿ ಕುರುಗೋಡು, ಮಂಜುನಾಥ ಗೊಂಡಬಾಳ, ಎಂ. ಲಾಯಕ್ ಅಲಿ, ಬಸವರಾಜ್ ಪುರದ, ಸುರೇಶ ಭೂಮರೆಡ್ಡಿ, ವೆಂಕಟೇಶ್ ಬಾರ್ಕೆರ್, ನಗರಸಭೆ ಸದಸ್ಯ ರಾಜಶೇಖರ ಅಡೂರ, ಮುತ್ತುರಾಜ ಕುಷ್ಟಗಿ, ಸಯ್ಯದ್ ಮೆಹ ಮೆಹಮುದ್‌ ಹುಸೇನಿ ಬಲ್ಲೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಮುಸ್ಲಿಂ ಧರ್ಮ ಗುರು ಮೌಲಾನ್‌ ಮುಫ್ತಿ ಮೊಹಮ್ಮದ್ ನಜೀರ್ ಅಹ್ಮದ್ ಖಾದ್ರಿ ತಸ್ಕಿನಿ ಸಾಮೂಹಿಕ ವಿಶೇಷ ಪ್ರಾರ್ಥನೆ ಸಲ್ಲಿಸಿ ಶುಭ ಕೋರಿದರು. ಮಸೀದಿ ಕಮಿಟಿ ಅಧ್ಯಕ್ಷ ಸೈಯದ್ ಎಜದಾನಿ ಪಾಷಾ ಖಾದ್ರಿ ಪಾಲ್ಗೊಂಡಿದ್ದು ಸಲೀಂ ಅಳವಂಡಿ ನಿರೂಪಿಸಿದರು.