ಸಾರಾಂಶ
ಕನ್ನಡಪ್ರಭ ವಾರ್ತೆ, ಚಾಮರಾಜನಗರ
ತಾಲೂಕಿನ ಜ್ಯೋತಿಗೌಡನಪುರ ಗ್ರಾಮದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಫ್ಲೆಕ್ಸ್ ಮತ್ತು ಬುದ್ಧ ಪ್ರತಿಮೆಯನ್ನು ಧ್ವಂಸಗೊಳಿಸಿರುವುದರ ಘಟನೆ ಬಗ್ಗೆ ನಿಷ್ಪಕ್ಷಪಾತವಾಗಿ ನಡೆಯಲಿ ಇದಕ್ಕೆ ನಮ್ಮ ಸಂಪೂರ್ಣ ಬೆಂಬಲ ಇದೆ. ಅದು ಬಿಟ್ಟು ಕೆಲವರು ನಾಯಕ ಸಮುದಾಯ ಹಾಗೂ ಮುಖಂಡರ ಬಗ್ಗೆ ಅವಹೇಳನಕಾರಿ ಮಾತನಾಡಿ ಸಾಮರಸ್ಯವನ್ನು ಹಾಳು ಮಾಡುವುದು ಖಂಡನೀಯ ಎಂದು ನಾಯಕ ಸಮುದಾಯದ ಮುಖಂಡ ಶಿವು ವಿರಾಟ್ ಹೇಳಿದರು.ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂಜುನಾಥ್ ಅಲಿಯಾಸ್ ಪೆಂಡಾಲ್‌ನನ್ನು ಬಂಧಿಸಿ ವಿಚಾರಣೆ ನಡೆಸುತ್ತಿರುವುದಕ್ಕೆ ನಮ್ಮ ಅಭ್ಯಂತರ ಇಲ್ಲ. ಆದರೆ ಪೊಲೀಸ್ ಇಲಾಖೆಯವರು ನಾಯಕ ಜನಾಂಗದ ಮಂಜುನಾಥ್ ಎಂದು ಹೇಳಿರುವುದು ಸರಿಯಲ್ಲ ಎಂದರು.
ಜ್ಯೋತಿಗೌಡನಪುರದಲ್ಲಿ ದಲಿತ ಜನಾಂಗದವರೇ ತಪ್ಪಿತಸ್ಧರನ್ನು ಬಂಧಿಸಿಲ್ಲ ಎಂದು ಪೊಲೀಸರಿಗೆ ಛೀಮಾರಿ ಹಾಕಿದ್ದಾರೆ. ಶ್ವಾನ ಮಂಜುನಾಥ್ ಮನೆಗೆ ಹೋಗಿಲ್ಲ, ಹೋಗಿರುವುದು ದಲಿತರ ಬೀದಿಯಲ್ಲಿ. ಆತ ತಪ್ಪು ಮಾಡಿದ್ದರೆ ಮಹಾಘೋರ ಶಿಕ್ಷೆಯಾಗಲಿ. ನಾವು ದಲಿತ ವಿರೋಧಿ ಅಲ್ಲ. ಬಾಬಾ ಸಾಹೇಬರು ನೀಡಿರುವ ಸಂವಿಧಾನದಿಂದಲೇ ನಾವೆಲ್ಲ ಈ ಮಟ್ಟಕ್ಕೆ ತಲುಪಿರುವುದು ಎಂದರು.ಘಟನೆಗೆ ಸಂಬಂಧಪಟ್ಟಂತೆ ಹರದನಹಳ್ಳಿ ಶಿವಣ್ಣನನ್ನು ಕರೆದುಕೊಂಡು ಹೋಗಿ ವಿಚಾರಣೆ ಮಾಡಿ, ಅತನಿಗೆ ಥಳಿಸಿ, ಬಲವಂತವಾಗಿ ಮಂಜುನಾಥನೇ ಮಾಡಿದ್ದಾನೆ ಎಂದು ಹೇಳಿಕೆ ಪಡೆದಿರುವುದು ಸರಿಯಲ್ಲ. ಆತ ಪದವೀಧರ ಅಂತಹ ಕೀಳು ಮಟ್ಟಕ್ಕೆ ಇಳಿಯುವ ವ್ಯಕ್ತಿ ಅಲ್ಲ, ಯಾರದೋ ಒತ್ತಡಕ್ಕೆ ಮಣಿದು ಈ ರೀತಿ ತನಿಖೆ ಮಾಡುತ್ತಿರುವುದು ಸರಿಯಲ್ಲ ಎಂದರು.
ಜ್ಯೋತಿಗೌಡನಪುರ ಪ್ರಕರಣದಲ್ಲಿ ನಾಯಕ ಜನಾಂಗವನ್ನು ಟಾರ್ಗೆಟ್ ಮಾಡಲಾಗುತ್ತಿದ್ದು, ದಲಿತ ಮುಖಂಡ ಶಿವಕುಮಾರ್ ಹಾಗೂ ಸೋಮೇಶ್ವರ್, ಪ್ರಚಾರಕ್ಕಾಗಿ ಇಲ್ಲಸಲ್ಲದ ಆರೋಪ ಮಾಡುವ ಜೊತೆಗೆ ನಮ್ಮ ಜನಾಂಗದ ನಾಯಕರಾದ ಎಂ. ರಾಮಚಂದ್ರ, ಕೆಲ್ಲಂಬಳ್ಳಿ ಸೋಮನಾಯಕ, ಪು. ಶ್ರೀನಿವಾಸನಾಯರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವುದು ಸರಿಯಲ್ಲ. ಇದು ಸಾಮರಸ್ಯ ಹಾಳು ಮಾಡುವ ಹೇಳಿಕೆ ಮೊದಲು ಇವರನ್ನು ಬಂಧಿಸಿ ಎಂದು ಒತ್ತಾಸಿದರು.ಬಾಬಾ ಸಾಹೇಬರ ಮೀಸಲಾತಿ ಋಣದಲ್ಲಿ ನಾವು ಬದುಕುತ್ತಿದ್ದೇವೆ ಅವರು ದಲಿತ ಜನಾಂಗಕ್ಕೆ ಸೀಮಿತವಲ್ಲ. ಅವರ ವಿಚಾರ ನಾವು ದುರ್ಬಳಕೆ ಮಾಡಿಕೊಂಡಿಲ್ಲ, ನಾವು ಅವರನ್ನು ಗೌರವದಿಂದ ಕಾಣುತ್ತಿದ್ದೇವೆ ಎಂದರು.
ಜ್ಯೋತಿ ಗೌಡನಪುರ ವಿಚಾರದಲ್ಲಿ ನಾನು ಗ್ರಾಮಕ್ಕೆ ಭೇಟಿ ಮಾಡಿ ನಮ್ಮ ಜನಾಂಗದವರನ್ನು ವಿಚಾರಿಸಿ ವಾಸ್ತವ ಮಾಹಿತಿ ಪಡೆದು ಜನಾಂಗದವರು ತಪ್ಪು ಮಾಡಿದ್ದರೆ ನೈತಿಕ ಹೊಣೆ ಹೊರುವಂತೆ ಹೇಳಿದ್ದೇನೆ. ಬದನಗುಪ್ಪೆ ವಿಚಾರದಲ್ಲಿ ಮಾಹಿತಿ ಕೊರತೆ ಇದೆ ಅದು ಸರ್ಕಾರಿ ಜಾಗ, ಅಲ್ಲಿ ಯಾವುದೇ ಪ್ರತಿಮೆ ಮಾಡಬೇಕಾದರೂ ಅನುಮತಿ ಮುಖ್ಯ, ಅಮಚವಾಡಿಯಲ್ಲೂ ಅಷ್ಟೇ ಎಂದರು.ಈಗಾಗಲೇ ಎಲ್ಲೆಡೆ ಉಂಟಾಗಿರುವ ಪ್ರತಿಮೆಗಳ ಅಪಮಾನ ವಿಚಾರದಲ್ಲಿ ಬಹುತೇಕ ಕಡೆ ಸ್ವಜಾತಿಯವರು ಮಾಡಿರುವುದು ರುಜುವಾತಾಗಿದೆ. ಅಂತಹದ್ದರ ಬಗ್ಗೆ ಮಾತನಾಡುವುದೇ ಇಲ್ಲ. ಅದು ಬಿಟ್ಟು ಸಾಮರಸ್ಯ ಹಾಳು ಮಾಡುವ ಹೇಳಿಕೆ ನೀಡುವುದು ಸರಿಯಲ್ಲ, ಮುಂದಿನ ದಿನಗಳಲ್ಲಿ ನಮ್ಮ ಜನಾಂಗದ ಮುಖಂಡರ ಬಗ್ಗೆ ಎಚ್ಚರಿಕೆಯಿಂದ ಮಾತನಾಡಿ ಎಂದರು.
ಹರದನಹಳ್ಳಿ ಗ್ರಾಮದ ದೇವಸ್ಥಾನದಲ್ಲಿ ಶಸ್ತ್ರಬ್ಯಾಸ ನಡೆಯುತ್ತಿದೆ ಎಂದು ತಪ್ಪು ಮಾಹಿತಿ ನೀಡಿ, ಬಿಜೆಪಿ ಆರ್‌ಎಸ್‌ಎಸ್ ನವರೇ ಘಟನೆಗೆ ಕಾರಣ ಎಂದು ದಲಿತ ಮುಖಂಡ ಸಂಘಸೇನೆ ಹೇಳಿಕೆ ಸರಿಯಲ್ಲ ಎಂದರು.ಹರದನಳ್ಳಿ ಪ್ರದೀಪ್, ಬಸವಣ್ಣ, ಲಿಂಗನಾಯಕ, ರವಿ, ನಾಗೇಂದ್ರ, ವೆಂಕಟೇಶ್ ಇದ್ದರು
;Resize=(128,128))
;Resize=(128,128))
;Resize=(128,128))
;Resize=(128,128))