ಮೈಮುಲ್ ಎಂಡಿಯಾಗಿ ಕೆ.ಎನ್. ಸುರೇಶ್ ನಾಯ್ಕ್ ಅಧಿಕಾರ ಸ್ವೀಕಾರ

| Published : Jul 04 2024, 01:04 AM IST / Updated: Jul 04 2024, 01:00 PM IST

ಸಾರಾಂಶ

ಆಲನಹಳ್ಳಿಯ ಮೇಘ ಡೈರಿ ಕಚೇರಿಯಲ್ಲಿ ಆಡಳಿತ ಮತ್ತು ಖರೀದಿ ವಿಭಾಗದ ವ್ಯವಸ್ಥಾಪಕ ಕೆ.ಎಸ್. ಜಗದೀಶ್ ಅವರಿಂದ ಅಧಿಕಾರ ಸ್ವೀಕರಿಸಿದರು.

 ಮೈಸೂರು :  ಮೈಸೂರು ಜಿಲ್ಲಾ ಹಾಲು ಒಕ್ಕೂಟದ ನೂತನ ವ್ಯವಸ್ಥಾಪಕ ನಿರ್ದೇಶಕರಾಗಿ ಕೆ.ಎನ್. ಸುರೇಶ್ ನಾಯ್ಕ್ ಅವರು ಮಂಗಳವಾರ ಅಧಿಕಾರ ಸ್ವೀಕರಿಸಿದರು.

ಆಲನಹಳ್ಳಿಯ ಮೇಘ ಡೈರಿ ಕಚೇರಿಯಲ್ಲಿ ಆಡಳಿತ ಮತ್ತು ಖರೀದಿ ವಿಭಾಗದ ವ್ಯವಸ್ಥಾಪಕ ಕೆ.ಎಸ್. ಜಗದೀಶ್ ಅವರಿಂದ ಅಧಿಕಾರ ಸ್ವೀಕರಿಸಿದರು. ಧಾರವಾಡ ಹಾಲು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಸುರೇಶ್ ನಾಯಕ್ ಇಂದಿನಿಂದ ಮೈಸೂರು ಜಿಲ್ಲಾ ಹಾಲು ಒಕ್ಕೂಟದ ವ್ಯವಸ್ಥಾಪಕನಿರ್ದೇಶಕರಾಗಿ ಒಕ್ಕೂಟವನ್ನು ಮುನ್ನಡೆಸಲಿದ್ದಾರೆ.

ಈ ವೇಳೆ ಮಾರುಕಟ್ಟೆ ವ್ಯವಸ್ಥಾಪಕ ಎಚ್.ಕೆ. ಜಯಶಂಕರ್, ಡೇರಿ ವ್ಯವಸ್ಥಾಪಕಿ ಬಿ.ಎಲ್. ಶ್ವೇತಾ, ತಾಂತ್ರಿಕ ವಿಭಾಗದ ವ್ಯವಸ್ಥಾಪಕಿ ಎಸ್. ಗಿರಿಜಾ, ಅಧಿಕಾರಿ ಹಾಗೂ ಸಿಬ್ಬಂದಿ ಇದ್ದರು.