ಹಳೆ ಕಾರಂಜಿ ಮರು ನಿರ್ಮಾಣಕ್ಕೆ ಕಡೂರು ಪುರಸಭೆ ನಿರ್ಧಾರ

| Published : Dec 31 2024, 01:00 AM IST

ಸಾರಾಂಶ

ಕಡೂರು, ಪಟ್ಟಣವನ್ನು ಸ್ವಚ್ಛತೆ ಜೊತೆಗೆ ಸುಂದರವಾಗಿಯೂ ಕಾಣಬೇಕೆಂಬ ನಿರ್ಧಾರಕ್ಕೆ ಕಡೂರು ಪುರಸಭೆ ಆಡಳಿತ ಮಂಡಳಿ ಅಸ್ತು ನೀಡಿ ನೀರಿನ ಕಾರಂಜಿ ಮರು ನಿರ್ಮಿಸಿ ಪಟ್ಟಣದ ಸೌಂದರ್ಯ ಹೆಚ್ಚಿಸುವಂತಹ ಕಾರ್ಯಕ್ಕೆ ಮುಂದಡಿ ಇಟ್ಟಿದೆ. ಪಟ್ಟಣದ ಹೃದಯ ಭಾಗದಲ್ಲಿರುವ ಕೆ.ಎಲ್.ವಿ. ವೃತ್ತದಲ್ಲಿ ಹಾಳಾಗಿದ್ದ ದೀಪದ ನೀರಿನ ಕಾರಂಜಿ ಮರು ನಿರ್ಮಾಣಕ್ಕೆ ಪುರಸಭೆ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ಮತ್ತು ತಂಡ ನಿರ್ಧರಿಸಿದೆ.

ಹಿಂದಿನ ವೈಭವದಂತೆ ₹8 ಲಕ್ಷ ವೆಚ್ಚದಲ್ಲಿ ನಿರ್ಮಿಸುವ ಉದ್ದೇಶ: ಭಂಡಾರಿ ಶ್ರೀನಿವಾಸ್

ಕಡೂರು ಕೃಷ್ಣಮೂರ್ತಿ.

ಕನ್ನಡ ಪ್ರಭ ವಾರ್ತೆ, ಕಡೂರು

ಪಟ್ಟಣವನ್ನು ಸ್ವಚ್ಛತೆ ಜೊತೆಗೆ ಸುಂದರವಾಗಿಯೂ ಕಾಣಬೇಕೆಂಬ ನಿರ್ಧಾರಕ್ಕೆ ಕಡೂರು ಪುರಸಭೆ ಆಡಳಿತ ಮಂಡಳಿ ಅಸ್ತು ನೀಡಿ ನೀರಿನ ಕಾರಂಜಿ ಮರು ನಿರ್ಮಿಸಿ ಪಟ್ಟಣದ ಸೌಂದರ್ಯ ಹೆಚ್ಚಿಸುವಂತಹ ಕಾರ್ಯಕ್ಕೆ ಮುಂದಡಿ ಇಟ್ಟಿದೆ. ಪಟ್ಟಣದ ಹೃದಯ ಭಾಗದಲ್ಲಿರುವ ಕೆ.ಎಲ್.ವಿ. ವೃತ್ತದಲ್ಲಿ ಹಾಳಾಗಿದ್ದ ದೀಪದ ನೀರಿನ ಕಾರಂಜಿ ಮರು ನಿರ್ಮಾಣಕ್ಕೆ ಪುರಸಭೆ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ಮತ್ತು ತಂಡ ನಿರ್ಧರಿಸಿದೆ. ಶಿವಮೊಗ್ಗ- ಬೆಂಗಳೂರು ಮಾರ್ಗದಲ್ಲಿ ಬರುವ ಕಡೂರು ಪಟ್ಟಣದ ಕಾರಂಜಿ ಜನರನ್ನು ಸೆಳೆಯುತಿತ್ತು. ಈ ವೃತ್ತ ಸುಮಾರು 50 ವರ್ಷಗಳ ಇತಿಹಾಸ ಹೊಂದಿದೆ. ಕಿರಾಣಿ ಲಿಂಗಪ್ಪ ವಿಶ್ವನಾಥ ಶ್ರೇಷ್ಟಿ ಹೆಸರಿನಲ್ಲಿ ವೃತ್ತ ನಿರ್ಮಿಸಿ ನೀರಿನ ಕಾರಂಜಿ ನಿರ್ಮಾಣ ಮಾಡಲಾಗಿತ್ತು. ಆದರೆ ಸುಮಾರು 20 ವರ್ಷಗಳಿಂದ ನಿರ್ವಹಣೆ ಇಲ್ಲದೆ ಕಾರಂಜಿ ಸ್ಥಗಿತವಾಗಿತ್ತು. ಅಲ್ಲದೆ ವಾಹನಗಳು ಗುದ್ದಿ ಕಾಂಪೌಂಡ್ ಒಡೆದು ಹೋಗಿತ್ತು. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ರಸ್ತೆ ವಿಸ್ತರಿಸಿದರೂ ವೃತ್ತವನ್ನು ತೆರವುಗೊಳಿಸದೆ ಉಳಿಸಿತ್ತು.

ಇದೀಗ ನೀರಿನ ಕಾರಂಜಿಯನ್ನು ಹಿಂದಿನ ವೈಭವದಂತೆ ನಿರ್ಮಿಸಿ ವಿದ್ಯುತ್ ದೀಪಗಳ ಅಳವಡಿಕೆ ಕಾರ್ಯಕ್ಕೆ ಕಡೂರು ಪುರಸಭಾ ನಿಧಿಯಿಂದ ಸುಮಾರು ₹8 ಲಕ್ಷ ವೆಚ್ಚದಲ್ಲಿ ಕಾಮಗಾರಿ ನಡೆಸಲಾಗುತ್ತಿದೆ. ಪುರಸಭೆಯಿಂದ ಭಂಡಾರಿ ಶ್ರೀನಿವಾಸ್ ನೇತೃತ್ವದಲ್ಲಿ ವೇದಾ ಪಾರ್ಕ್ ನಿರ್ಮಾಣ, ಕಡೂರನ್ನು ಕಸಮುಕ್ತ ಮತ್ತು ಸ್ವಚ್ಛ ಪಟ್ಟಣವಾಗಿಸುವ ಜೊತೆ ಇದೀಗ ಪಟ್ಟಣದ ಸೌಂದರ್ಯಕ್ಕೂ ಒತ್ತು ನೀಡಿ ಅದನ್ನು ಸಾಕಾರಗೊಳಿಸಲು ಅಧಿಕಾರಿಗಳ ಸಹಕಾರದೊಂದಿಗೆ ಆಡಳಿತ ಮಂಡಳಿ ಕಾಮಗಾರಿಗೆ ಮುಂದಾಗಿದೆ. ಪುನರ್‌ ನಿರ್ಮಾಣದ ಮೂಲಕ ಶೀಘ್ರದಲ್ಲೇ ಈ ಕಾರಂಜಿ ಲೋಕಾರ್ಪಣೆ ಆಗಲಿದೆ.

-ಕೋಟ್‌--

ಪಟ್ಟಣದ ಹೃದಯ ಭಾಗದಲ್ಲಿ ಸ್ಮಾರಕದಂತಿರುವ ಈ ಕಾರಂಜಿಯನ್ನು ಉಳಿಸಿಕೊಳ್ಳಲಾಗಿದೆ. ನನ್ನ ನಾಲ್ಕನೇ ‍ಅಧ್ಯಕ್ಷಗಿರಿ ಅವಧಿಯಲ್ಲಿ ಹಿಂದಿನ ವೈಭವ ಮರುಕಳಿಸುವಂತೆ ಆಡಳಿತ ಮಂಡಳಿ ಮಾರ್ಗದರ್ಶನ ಮತ್ತು ಸಹಕಾರದಿಂದ ಪುರಸಭೆ ನಿಧಿಯಿಂದ ₹8 ಲಕ್ಷ ವೆಚ್ಚದಲ್ಲಿ ಕಾರಂಜಿ ಕಾಮಗಾರಿ ನಡೆಯುತ್ತಿದೆ. ಇದರಿಂದ ಪ್ರತಿದಿನ ಈ ಮಾರ್ಗದಲ್ಲಿ ಸಂಚರಿಸುವ ಪ್ರವಾಸಿಗರ ಕಣ್ಣು ತುಂಬಿಕೊಳ್ಳಲಿದೆ. ಶೀಘ್ರದಲ್ಲೇ ಕಾರಂಜಿ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯಲಿದೆ.

-- ಭಂಡಾರಿ ಶ್ರೀನಿವಾಸ್.,ಅಧ್ಯಕ್ಷ , ಪುರಸಭೆ

-ಕೋಟ್‌--

1971ರಲ್ಲಿ ವೀರೇಂದ್ರಪಾಟೀಲರು ಈ ನೀರಿನ ಕಾರಂಜಿ ಉಧ್ಘಾಟಿಸಿದ್ದರು. ಅದು ಕೆ.ಆರ್ ಎಸ್‌ ನ್ನು ನೆನಪಿಸುವಂತಿತ್ತು. 1999- 1995 ರತನಕ ಕಡೂರು ಪುರಸಭೆ ಸದಸ್ಯ, ಅಧ್ಯಕ್ಷರಾಗಿದ್ದ ವ್ಯಾಪಾರಿ ಕಿರಾಣಿ ಲಿಂಗಪ್ಪನವರ ಕುಟುಂಬದಿಂದ ಕೆ ಎಲ್ ವಿಶ್ವನಾಥ ಸರ್ಕಲ್ ಮತ್ತು ನೀರಿನ ಕಾರಂಜಿ ನಿರ್ಮಾಣ ಮಾಡಲಾಗಿತ್ತು. ಇದನ್ನು ಪುರಸಭೆಯಿಂದ ನಿರ್ವಹಣೆ ಮಾಡಲಾಗುತಿತ್ತು. ಇದೀಗ 4ನೇ ಬಾರಿ ಪುರಸಭೆ ಅಧ್ಯಕ್ಷರಾಗಿರುವ ಭಂಡಾರಿ ಶ್ರೀನಿವಾಸ್ ಗಟ್ಟಿ ನಿರ್ಧಾರ ಕೈಗೊಂಡು, ಪುರಸಭೆ ಆಡಳಿತ ವರ್ಗದ ಸಮಾಲೋಚನೆ ಮೂಲಕ ಪಟ್ಟಣದ ಹಳೆಯ ನೆನಪಿನ ಸ್ಥಳ ಉಳಿಸಿಕೊಳ್ಳುವ ಜೊತೆಗೆ ಪಟ್ಟಣದ ಸೌಂದರ್ಯ ಹೆಚ್ಚಿಸುವ ಈ ನಿರ್ಧಾರ ಪಟ್ಟಣದ ಜನತೆಗೆ ಸಂತೋಷ ತರಲಿದೆ.

------ ಕೆ.ಮೂರ್ತಿರಾವ್, ಪುರಸಭಾ ಮಾಜಿ ಅಧ್ಯಕ್ಷ

29ಕೆಕೆಡಿಯು1.

ನಿರ್ಮಾಣ ಹಂತದಲ್ಲಿರುವ ಕಡೂರಿನ ಕೆಎಲ್‌ ವಿ. ವೃತ್ತದ ನೀರಿನ ಕಾರಂಜಿ.

29ಕೆಕೆಡಿಯು1ಎ. ಪುರಸಭೆ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ .

29ಕೆಕೆಡಿಯು1ಬಿ. ಮಾಜಿ ಪುರಸಭಾಧ್ಯಕ್ಷ ಕೆ.ಮೂರ್ತಿರಾವ್.