ಬಸ್ ನಲ್ಲಿ ಆಭರಣ ಕದ್ದ ಕಳ್ಳಿಯ ಬಂಧನ

| Published : Sep 30 2024, 01:24 AM IST

ಸಾರಾಂಶ

ಬೆಳಗಾವಿ: ಬಸ್ ನಲ್ಲಿ ಆಭರಣ ಕದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಬೆಳಗಾವಿ ಮಾರ್ಕೆಟ್ ಪೊಲೀಸರು ಬಂಧಿಸಿದ್ದಾರೆ. ನಿಪ್ಪಾಣಿಯ ಪೂನಂ ಅಮೀತ್‌ ಸಕಟ ( 39 ) ಬಂಧಿತ ಆರೋಪಿ. ಇವಳಿಂದ 43 ಗ್ರಾಂ ಚಿನ್ನಾಭರಣ, ₹ 3 ಲಕ್ಷ ಮೌಲ್ಯದ ವಸ್ತು ವಶಪಡಿಸಿಕೊಳ್ಳಲಾಗಿದೆ.

ಬೆಳಗಾವಿ: ಬಸ್ ನಲ್ಲಿ ಆಭರಣ ಕದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಬೆಳಗಾವಿ ಮಾರ್ಕೆಟ್ ಪೊಲೀಸರು ಬಂಧಿಸಿದ್ದಾರೆ.

ನಿಪ್ಪಾಣಿಯ ಪೂನಂ ಅಮೀತ್‌ ಸಕಟ ( 39 ) ಬಂಧಿತ ಆರೋಪಿ. ಇವಳಿಂದ 43 ಗ್ರಾಂ ಚಿನ್ನಾಭರಣ, ₹ 3 ಲಕ್ಷ ಮೌಲ್ಯದ ವಸ್ತು ವಶಪಡಿಸಿಕೊಳ್ಳಲಾಗಿದೆ.

ಸೆ.19ರಂದು ಬೆಳಗಾವಿ ತಾಲೂಕಿನ ಕುದುರೆ ಮನೆ ಗ್ರಾಮದ ಸವಿತಾ ಕೃಷ್ಣಾ ಮಗದುಮ್ಮ ನಿಪ್ಪಾಣಿಯಿಂದ ಬೆಳಗಾವಿಗೆ ಕೆ.ಎಸ್.ಆರ್.ಟಿ.ಸಿ ಬಸ್ಸಿನಲ್ಲಿ ಬೆಳಗಾವಿ ಕೇಂದ್ರ ಬಸ್ ನಿಲ್ದಾಣಕ್ಕೆ ಬಂದು ಬಸ್ಸಿನಿಂದ ಜನದಟ್ಟಣೆಯಲ್ಲಿ ಇಳಿಯುವ ಸಂದರ್ಭದಲ್ಲಿ ಬ್ಯಾಗ್‌ನಲ್ಲಿದ್ದ 43 ಗ್ರಾಂ ತೂಕದ ಚಿನ್ನಾಭರಣ ಕಳ್ಳತನವಾಗಿತ್ತು. ಈ ಬಗ್ಗೆ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.