ಕಲಬುರಗಿ: ಎಸಿಸಿಯಿಂದ ಪ್ರಮಾಣ ಪತ್ರ ವಿತರಣೆ

| Published : Feb 08 2024, 01:32 AM IST

ಸಾರಾಂಶ

ಉತ್ಪಾದನೆಗೆ ತಕ್ಕಹಾಗೆ ಸಾಮಾಜಿಕ ಚಟುವಟಿಕೆಗಳಲ್ಲಿ ಸಹ ತೊಡಗಿಸಿಕೊಂಡಿದ್ದು ನಿರುದ್ಯೋಗ ವಿದ್ಯಾರ್ಥಿಗಳನ್ನು ಗುರುತಿಸಿ ಅವರಿಗೆ ಕಂಪ್ಯೂಟರ್ ತರಬೇತಿ ಸೇರಿ ಅನೇಕ ರೀತಿ ಸೌಕರ್ಯ ನೀಡಲಾಗುತ್ತಿದೆ: ಅನಿಲ್ ಗುಪ್ತಾ

ಕನ್ನಡಪ್ರಭ ವಾರ್ತೆ ವಾಡಿ

ಪಟ್ಟಣದ ಅದಾನಿ ಮಾಲಿಕತ್ವದ ಎಸಿಸಿ (ಸಿಎಸ್‍ಆರ್) ವಿಭಾಗದಿಂದ ಈಚೆಗೆ ಆಯೋಜಿಸಿದ್ದ ಕಂಪ್ಯೂಟರ್ ಹಾಗೂ ಇನ್ನಿತರರ ತರಬೇತಿ ಶಿಬಿರದಲ್ಲಿ ಭಾಗವಹಿಸಿದವರಿಗೆ ಪ್ರಮಾಣ ಪತ್ರ ವಿತರಣೆ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸೌತ್ ಕ್ಲಸ್ಟರ್ ವಿಭಾಗದ ಮುಖ್ಯಸ್ಥ ಅನಿಲ್ ಗುಪ್ತಾ, ಉತ್ಪಾದನೆಯಲ್ಲಿ ಎಸಿಸಿ ಕಂಪನಿ ಜಗತ್ತಿನ ಗಮನ ಸೆಳೆಯುತ್ತದೆ. ಉತ್ಪಾದನೆಗೆ ತಕ್ಕಹಾಗೆ ಸಾಮಾಜಿಕ ಚಟುವಟಿಕೆಗಳಲ್ಲಿ ಸಹ ತೊಡಗಿಸಿಕೊಂಡಿದ್ದು ನಿರುದ್ಯೋಗ ವಿದ್ಯಾರ್ಥಿಗಳನ್ನು ಗುರುತಿಸಿ ಅವರಿಗೆ ಕಂಪ್ಯೂಟರ್ ತರಬೇತಿ ಸೇರಿ ಅನೇಕ ರೀತಿ ಸೌಕರ್ಯ ನೀಡಲಾಗುತ್ತಿದೆ ಎಂದರು.

ಜೀವನದಲ್ಲಿ ತರಬೇತಿ ಇದ್ದರೆ ಅವಕಾಶಗಳು ಹುಡುಕಿಕೊಂಡು ಬರುತ್ತವೆ. ಇತ್ತೀಚಿನ ದಿನಗಳಲ್ಲಿ ಕಂಪ್ಯೂಟರ್ ಶಿಕ್ಷಣಕ್ಕೆ ಮಹತ್ವದ ಸ್ಥಾನ ಪಡೆದಿದ್ದು, ಉದ್ಯೋಗಗಳು ಹುಡುಕಿಕೊಂಡು ಬರುತ್ತಿವೆ. ಕಂಪ್ಯೂಟರ್ ಶಿಕ್ಷಣದಲ್ಲಿ ನೂರಾರು ಶಾಖೆಗಳಿದ್ದು ಪರಿಣಿತಿ ಹೊಂದವುದರ ಮೂಲಕ ಉದ್ಯೋಗ ಅವಕಾಶ ಕಂಡಕೊಳ್ಳಬೇಕು ಎಂದರು.

ಸಿಎಸ್‍ಆರ್ ವಿಭಾಗದ ಮುಖ್ಯಸ್ಥ ವೀರೇಶ್ ಎಮ್. ಮಾತನಾಡಿ, ಎಸಿಸಿ ವತಿಯಿಂದ ಕಂಪ್ಯೂಟರ್ ತರಬೇತಿ ಹೊಲಿಗೆ ತರಬೇತಿ ಬೇಕರಿ ಪದಾರ್ಥಗಳ ತಯಾರಿಕೆ ಹೀಗೆ ಹತ್ತು ಹಲವು ಕೌಶಲ್ಯಾಧಾರಿತ ತರಬೇತಿ ನೀಡುತ್ತಿದ್ದು ಸಾರ್ವಜನಿಕರು ಇದರ ಸೌಲಭ್ಯ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.

ಸಿಎಸ್‍ಆರ್ ವಿಭಾಗದ ಮುಖ್ಯಸ್ಥ ವೀರೇಶ, ಸಾಕ್ಷ ಮ್ ಸಂಸ್ಥೆಯ ಕೇಂದ್ರ ಮುಖ್ಯಸ್ಥ ಅಶೋಕುಮಾರ ಹಾಲವಿ, ಸಿಎಸ್‍ಆರ್ ವಿಭಾಗದ ಸಹಾಯಕ ವ್ಯವಸ್ಥಾಪಕ ಜಗದೀಶ ರಾಠೋಡ, ವೇಂಕಟ ರೆಡ್ಡಿ, ಶಿವಯೋಗಿ ಮರತೂರಕರ್, ಸುಮನ್ ಯಾಧವ್, ರೇಣುಕಾ ಇದ್ದರು. ಶ್ರೀಶ್ಥಲ ರಾಠೋಡ ನಿರೂಪಿಸಿ, ವಂದಿಸಿದರು. 30.ಜನ ಡಾಟ್ ಆಪರೇಟರ್, 30 ಜನ ನರ್ಸಿಂಗ್, 20.ಜನರಿಗೆ ಸಾಕ್ಷರಾತ್ ಸ್ಕಿಮ್‍ನಲ್ಲಿ ತರಬೇತಿ ಪಡೆದ ತರಬೇತುರಾರರಿಗೆ ಪ್ರಮಾಣ ಪತ್ರ ವಿತರಣೆ ಮಾಡಲಾಯಿತು.