ಕಲಘಟಗಿ ಪಟ್ಟಣ, ಬೆಂಡಿಗೇರಿ, ಮಾಚಾಪೂರ, ದಾಸ್ತಿಕೊಪ್ಪ ಹಾಗೂ ಕಲಕುಂಡಿ ಗ್ರಾಮಸ್ಥರು ಫೆ. 3, 6, 10, 13, 17ರಂದು ಹೊರವಾರವನ್ನಾಗಿ ಆಚರಿಸುವುದು. ಅಂದು ಬೆಳಗ್ಗೆ 10 ಗಂಟೆಗೆ ಭಕ್ತರು ಮನೆಯಿಂದ ಹೊರಗಡೆ ಹೋಗಿ ಹೊಲಗಳಲ್ಲಿ ಸಂಜೆ 5ಕ್ಕೆ ಮರಳಿ ಗ್ರಾಮಕ್ಕೆ ಬರುವ ಸಂಪ್ರದಾಯ ಹಿಂದಿನಿಂದ ನಡೆದುಕೊಂಡು ಬಂದಿದೆ.
ಕಲಘಟಗಿ:
ಪಟ್ಟಣದಲ್ಲಿ ಫೆ. 25ರಂದು ಜರುಗುವ ಗ್ರಾಮದೇವತೆಯರ ಜಾತ್ರಾ ಮಹೋತ್ಸವದ ಹಿನ್ನೆಲೆ ಇತ್ತೀಚೆಗೆ ದೇವಸ್ಥಾನದಲ್ಲಿ ಅರ್ಚಕ ಕಿರಣ ಪೂಜಾರ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಜಾತ್ರೆ ಸ್ವವಿವರದ ಪಟ್ಟಿಯನ್ನು ಜಾತ್ರಾ ಉತ್ಸವ ಕಮಿಟಿ ಅಧ್ಯಕ್ಷ ಸುಧೀರ ಬೋಳಾರಗೆ ಸಲ್ಲಿಸುವುದರೊಂದಿಗೆ ಜಾತ್ರೆಗೆ ಅಂಕಿತ ಹಾಕುವ ಕಾರ್ಯಕ್ರಮ ಜರುಗಿತು.ಕಾರ್ಯಕ್ರಮದಲ್ಲಿ ದೇವಸ್ಥಾನ ಟ್ರಸ್ಟ್ ಕಮಿಟಿ ಅಧ್ಯಕ್ಷ ಶ್ರೀಕಾಂತ ಖಟಾವಕರ, ಜಾತ್ರಾ ಕಮಿಟಿ ಅಧ್ಯಕ್ಷ ಸುಧೀರ ಭೋಳಾರ, ಗ್ರಾಮದೇವಿಯರಿಗೆ ಸಂಕಲ್ಪ ಪೂಜೆ ನೆರವೇರಿಸಿದರು.
ಈ ವೇಳೆ ಮಾತನಾಡಿದ ಕಿರಣ ಪೂಜಾರ, ಮೊದಲನೆ ಹೊರ ಬಿಡುವ ವಾರ ನಡೆಯಲಿದೆ. ಅಂದು ಪ್ರಮುಖ ಗ್ರಾಮಗಳಾದ ಕಲಘಟಗಿ ಪಟ್ಟಣ, ಬೆಂಡಿಗೇರಿ, ಮಾಚಾಪೂರ, ದಾಸ್ತಿಕೊಪ್ಪ ಹಾಗೂ ಕಲಕುಂಡಿ ಗ್ರಾಮಸ್ಥರು ಫೆ. 3, 6, 10, 13, 17ರಂದು ಹೊರವಾರವನ್ನಾಗಿ ಆಚರಿಸುವುದು. ಅಂದು ಬೆಳಗ್ಗೆ 10 ಗಂಟೆಗೆ ಭಕ್ತರು ಮನೆಯಿಂದ ಹೊರಗಡೆ ಹೋಗಿ ಹೊಲಗಳಲ್ಲಿ ಸಂಜೆ 5ಕ್ಕೆ ಮರಳಿ ಗ್ರಾಮಕ್ಕೆ ಬರುವ ಸಂಪ್ರದಾಯ ಹಿಂದಿನಿಂದ ನಡೆದುಕೊಂಡು ಬಂದಿದ್ದು, ಇದೇ ರೀತಿ ಪಾಲಿಸುವಂತೆ ಮನವಿ ಮಾಡಿದರು. ಜಾತ್ರಾ ಉತ್ಸವ ಕಮಿಟಿ ಅಧ್ಯಕ್ಷ ಸುಧೀರ ಬೋಳಾರ ಮಾತನಾಡಿ, ಫೆ. 18ರಂದು ದೇವಿಯರ ಕಳಾಕರ್ಷಣ ಹೋಮ, ಪೂಜೆಯೊಂದಿಗೆ ಬಣ್ಣ ಹಚ್ಚಲು ಬಿಡುವುದು, ಫೆ. 24ರಂದು ಪುಣ್ಯಾಹವಾಚನ, ನಂತರ ಕಳಾಕರ್ಷಣ ನಡೆಯುವುದು. ಮೃಗಶಿರ ನಂಕ್ಷತ್ರದಂದು ಮಾಂಗಲ್ಯ ಧಾರಣೆ, ಕುಮಾರಿಕಾ ಪೂಜೆ, ಪೂರ್ಣಾಹುತಿ, ಮಹಾ ಮಂಗಳಾರತಿ ನೆರವೇರಲಿದೆ. ಫೆ. 25ರಂದು 3ಕ್ಕೆ ಗ್ರಾಮದೇವಿಯರ ಭವ್ಯ ಮೆರವಣಿಗೆಯೊಂದಿಗೆ ಚೌತಿಮನೆ ಕಟ್ಟಿಯಲ್ಲಿ ಸ್ಥಾಪಿಸುವುದು. ನಂತರ 9 ದಿನಗಳ ವರೆಗೆ ದೇವಿಯರಿಗೆ ಉಡಿ ತುಂಬವ ಕಾರ್ಯಕ್ರಮ, ಸಾಂಸ್ಕೃತಿಕ, ವಿವಿಧ ಕಲಾವಿದರಿಂದ ಸಂಗೀತ ಕಾರ್ಯಕ್ರಮ ಜರುಗುವುದು ಎಂದರು.ಅಂಕಿತ ಹಾಕುವ ಕಾರ್ಯಕ್ರಮದಲ್ಲಿ ಹರಿಶಂಕರ ಮಠದ, ಬಾಬಣ್ಣ ಅಂಚಟಗೇರಿ, ಕುಮಾರ ಖಂಡೆಕರ, ಪ್ರಮೋದ ಪಾಲ್ಕರ, ರಾಕೇಶ ಅಳಗವಾಡಿ, ವೃಷಬೇಂದ್ರ ಪಟ್ಟಣಶೆಟ್ಟಿ, ನಿತಿನ್ ಶೆವಡೆ, ಶಶಿಧರ ನಿಂಬಣ್ಣವರ, ಗಂಗಪ್ಪ ಗೌಳಿ, ಮಹಾಂತೇಶ ತಹಶೀಲ್ದಾರ, ಶಿವಪುತ್ರಯ್ಯ ತೇಗೂರಮಠ, ಸದಾನಂದ ಚಿಂತಾಮಣಿ ಸೇರಿ ಹಲವರಿದ್ದರು.