ಸಾರಾಂಶ
ಲಿಂ.ಪಂ. ಪಂಚಾಕ್ಷರಿ ಗವಾಯಿಗಳವರ ಹಾಗೂ ಲಿಂ.ಡಾ.ಪಂ. ಪುಟ್ಟರಾಜ ಕವಿ ಗವಾಯಿಗಳವರ ಮಾರ್ಗದರ್ಶನದಲ್ಲಿ ಶ್ರೀಕಲ್ಲಯ್ಯಜ್ಜನವರು ವೀರೇಶ್ವರ ಪುಣ್ಯಾಶ್ರಮವನ್ನು ಮುನ್ನಡೆಸಿಕೊಂಡು ಹೋಗುತ್ತಿರುವುದರಿಂದ ಉಭಯ ಗುರುಗಳ ಕನಸನ್ನು ಸಾಕಾರಗೊಳಿಸಿದ್ದಾರೆ ಎಂದು ಕಪೋತಗಿರಿ ನಂದಿವೇರಿ ಶ್ರೀಮಠದ ಶ್ರೀ ಶಿವಕುಮಾರ ಶ್ರೀಗಳು ಹೇಳಿದರು.
ಗದಗ: ಲಿಂ.ಪಂ. ಪಂಚಾಕ್ಷರಿ ಗವಾಯಿಗಳವರ ಹಾಗೂ ಲಿಂ.ಡಾ.ಪಂ. ಪುಟ್ಟರಾಜ ಕವಿ ಗವಾಯಿಗಳವರ ಮಾರ್ಗದರ್ಶನದಲ್ಲಿ ಶ್ರೀಕಲ್ಲಯ್ಯಜ್ಜನವರು ವೀರೇಶ್ವರ ಪುಣ್ಯಾಶ್ರಮವನ್ನು ಮುನ್ನಡೆಸಿಕೊಂಡು ಹೋಗುತ್ತಿರುವುದರಿಂದ ಉಭಯ ಗುರುಗಳ ಕನಸನ್ನು ಸಾಕಾರಗೊಳಿಸಿದ್ದಾರೆ ಎಂದು ಕಪೋತಗಿರಿ ನಂದಿವೇರಿ ಶ್ರೀಮಠದ ಶ್ರೀ ಶಿವಕುಮಾರ ಶ್ರೀಗಳು ಹೇಳಿದರು. ನಗರದ ವೀರೇಶ್ವರ ಪುಣ್ಯಾಶ್ರಮದಲ್ಲಿ ಶ್ರೀಕಲ್ಲಯ್ಯಜ್ಜನವರ 55ನೇ ಜನ್ಮದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ತುಲಾಭಾರ ಸೇವೆಗಳನ್ನು ನೆರವೇರಿಸಿ ಅವರು ಮಾತನಾಡಿದರು.
ಕಲ್ಲಯ್ಯಜ್ಜನವರ ನೇತೃತ್ವದಲ್ಲಿ ಪುಣ್ಯಾಶ್ರಮವು ಉತ್ತರೋತ್ತರವಾಗಿ ಅಭಿವೃದ್ದಿಗೊಳ್ಳಲಿ, ಹಾನಗಲ್ ಶ್ರೀಗುರು ಕುಮಾರೇಶ್ವರರ, ಪಂ. ಪಂಚಾಕ್ಷರ ಗವಾಯಿಗಳವರ ಹಾಗೂ ಪಂ. ಪುಟ್ಟರಾಜ ಗವಾಯಿಗಳವರ ಶ್ರೀರಕ್ಷೆ ಕಲ್ಲಯ್ಯಜ್ಜನವರ ಮೇಲೆ ಸದಾ ಇರಲಿದೆ ಎಂದರು. ಲಿಂಗಸೂರಿನ ಮಾಣಿಕೇಶ್ವರಿ ಆಶ್ರಮದ ಶಿವಶರಣೆ ನಂದೀಶ್ವರಿ ಅಮ್ಮನವರು ಕಲ್ಲಯ್ಯಜ್ಜನವರ ತುಲಾಭಾರ ಸೇವೆಯನ್ನು ನೆರವೇರಿಸಿದರು. ಈ ಸಂದರ್ಭದಲ್ಲಿ ನಂದೀಶ್ವರಿ ಅಮ್ಮನವರಿಗೆ ''''ನಡೆದಾಡುವ ನಕ್ಷತ್ರ'''' ಎಂಬ ಬಿರುದು ನೀಡಿ ಶ್ರೀಮಠದಿಂದ ಗೌರವಿಸಲಾಯಿತು. ಪಿ.ಎಫ್. ಕಟ್ಟಿಮನಿ, ಪಿ.ಸಿ. ಹಿರೇಮಠ, ಸಾರಿಗೆ ನಿಗಮದ ಉಪಾಧ್ಯಕ್ಷ ಪೀರಸಾಬ ಕೌತಾಳ, ಜೋಹರಾ ಕೌತಾಳ, ಜೇವರ್ಗಿಯ ನಾಡಗೌಡ ಅಪ್ಪಸಾಬ ಪಾಟೀಲ, ಹೇಮರಾಜಶಾಸ್ತ್ರೀ ಹಿರೇಮಠ ಹೆಡಿಗ್ಗೊಂಡ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು. ಇದಕ್ಕೂ ಮುನ್ನ ಶ್ರೀ ಕಲ್ಲಯ್ಯಜ್ಜನವರನ್ನು ಪುಣ್ಯಾಶ್ರಮದ ಶಿಷ್ಯವೃಂದವು ಹೂವಿನ ದಾರಿಯಲ್ಲಿ ಹೂವಿನ ಸುರಿಮಳೆಗೈಯುತ್ತ ಕೈ ಹಿಡಿದು ಕರೆದುಕೊಂಡ ಬಂದರು. ಪೀರಸಾಬ್ ದಂಪತಿಗಳು ಸೇಬುವಿನ ಬೃಹತ್ ಹಾರದೊಂದಿಗೆ ಸನ್ಮಾನಿಸಿ ಕೇಕನ್ನು ಕತ್ತರಿಸುವ ಮೂಲಕ ಕಲ್ಲಯ್ಯಜ್ಜನವರ ಜನ್ಮದಿನ ಸಂಭ್ರಮದಿಂದ ಆಚರಿಸಲಾಯಿತು.