ಇಂದಿನಿಂದ ಜಾನುವಾರುಗಳಿಗೆ ಕಾಲುಬಾಯಿ ಬೇನೆ ಲಸಿಕಾ ಅಭಿಯಾನ

| Published : Oct 21 2024, 12:45 AM IST

ಇಂದಿನಿಂದ ಜಾನುವಾರುಗಳಿಗೆ ಕಾಲುಬಾಯಿ ಬೇನೆ ಲಸಿಕಾ ಅಭಿಯಾನ
Share this Article
  • FB
  • TW
  • Linkdin
  • Email

ಸಾರಾಂಶ

ಜಾನುವಾರುಗಳಿಗೆ ಕಾಲುಬಾಯಿ ಬೇನೆ ರೋಗ ಸೇರಿದಂತೆ ವಿವಿಧ ರೋಗಗಳಿಂದ ಸಂರಕ್ಷಿಸುವ ಉದ್ದೇಶದಿಂದ ಪಶು ಸಂಗೋಪನೆ ಇಲಾಖೆಯು ಲಸಿಕಾ ಅಭಿಯಾನವನ್ನು ಇಂದಿನಿಂದ ಪ್ರಾರಂಭ ಮಾಡಲಿದೆ.

ತಾಲೂಕಿನಲ್ಲಿ 73325 ಜಾನುವಾರುಗಳಿಗೆ ಲಸಿಕಾ ಗುರಿ, ಒಂದು ತಿಂಗಳ ಕಾಲ ನಡೆಯುವ ಅಭಿಯಾನಕನ್ನಡಪ್ರಭ ವಾರ್ತೆ ಕುಷ್ಟಗಿ

ಜಾನುವಾರುಗಳಿಗೆ ಕಾಲುಬಾಯಿ ಬೇನೆ ರೋಗ ಸೇರಿದಂತೆ ವಿವಿಧ ರೋಗಗಳಿಂದ ಸಂರಕ್ಷಿಸುವ ಉದ್ದೇಶದಿಂದ ಪಶು ಸಂಗೋಪನೆ ಇಲಾಖೆಯು ಲಸಿಕಾ ಅಭಿಯಾನವನ್ನು ಇಂದಿನಿಂದ ಪ್ರಾರಂಭ ಮಾಡಲಿದೆ.

ರಾಷ್ಟ್ರೀಯ ಜಾನುವಾರು ರೋಗ ನಿಯಂತ್ರಣ ಕಾರ್ಯಕ್ರಮದಡಿಯಲ್ಲಿ ಅ.21ರಿಂದ ನ.20ರವರೆಗೆ 6ನೇ ಸುತ್ತಿನ ಲಸಿಕಾ ಅಭಿಯಾನ ನಡೆಯಲಿದ್ದು, ಜಾನುವಾರುಗಳಿಗೆ ಕಡ್ಡಾಯವಾಗಿ ಹಾಕಿಸಬೇಕು ಇದು ಸಂಪೂರ್ಣವಾಗಿ ಉಚಿತವಾಗಿದೆ.

ಪಟ್ಟಣ ಸೇರಿದಂತೆ ತಾಲೂಕಿನ ಪಶು ಚಿಕಿತ್ಸಾಲಯದಲ್ಲಿ ಹಾಗೂ ಕ್ಯಾಂಪ್ ಮಾಡುವ ಮೂಲಕ ರಾಸುಗಳಿಗೆ ಲಸಿಕಾ ಕಾರ್ಯವನ್ನು ಮಾಡುತ್ತಿದ್ದು, ಕುಷ್ಟಗಿ ತಾಲೂಕಿನಾದ್ಯಂತ ಒಟ್ಟು 73,325 ಜಾನುವಾರುಗಳಿಗೆ ಕಾಲು ಮತ್ತು ಬಾಯಿ ಬೇನೆ ರೋಗದ ವಿರುದ್ಧ ಲಸಿಕೆ ಹಾಕುವ ಗುರಿ ಹೊಂದಲಾಗಿದೆ. ಪಶು ವೈದ್ಯಕೀಯ ಇಲಾಖೆಯ ಸಿಬ್ಬಂದಿ ಸುಮಾರು ಒಂದು ತಿಂಗಳ ಕಾಲ ಬೆಳಗ್ಗೆ 6.30ರಿಂದ ರೈತರ ಮನೆಗಳಿಗೆ ತೆರಳಿ ಕಾಲುಬಾಯಿ ರೋಗದ ನಿಯಂತ್ರಣ ಲಸಿಕೆ ಹಾಕುವ ಕಾರ್ಯ ಮಾಡಲಿದ್ದಾರೆ.3 ತಿಂಗಳ ಕರುಗಳ ಮೇಲ್ಪಟ್ಟು ಉಳಿದೆಲ್ಲ ಜಾನುವಾರುಗಳಿಗೂ ಈ ಲಸಿಕೆ ಹಾಕಿಸಬೇಕು. ಕಾಲುಬಾಯಿ ರೋಗ ಎತ್ತು, ಹೋರಿ, ಹಸು, ಎಮ್ಮೆ ಸೇರಿದಂತೆ ವಿವಿಧ ಜಾನುವಾರುಗಳಲ್ಲಿ ಆರ್ಥಿಕ ನಷ್ಟ ಉಂಟುಮಾಡುವ ಮಾರಕ ರೋಗವಾಗಿದೆ. ಜಾನುವಾರುಗಳಲ್ಲಿ ಗರ್ಭ ಕಟ್ಟುವಿಕೆಯಲ್ಲಿ ವಿಳಂಬ, ಸಾಮರ್ಥ್ಯ ನಷ್ಟ ಮತ್ತು ಹಾಲಿನ ಇಳುವರಿಯಲ್ಲಿ ಇಳಿಮುಖವಾಗುವ ಸಾಧ್ಯತೆ ಇದೆ. ರೋಗದಿಂದ ಸಂಪೂರ್ಣ ಸುರಕ್ಷತೆಗಾಗಿ ಮೂರು ತಿಂಗಳ ಮೇಲ್ಪಟ್ಟ ಎಲ್ಲ ಜಾನುವಾರುಗಳಿಗೆ ಲಸಿಕೆ ಹಾಕಿಸುವುದು ಅಗತ್ಯ.ರೋಗದ ಲಕ್ಷಣಗಳು:

ಜಾನುವಾರುಗಳಿಗೆ ಅತೀಯಾದ ಜ್ವರ, ಬಾಯಿಯಲ್ಲಿ ಗುಳ್ಳೆಗಳು ಕಾಣಿಸಿ ಅವು ಒಡೆದು. ನಾಲಿಗೆಯ ಮೇಲೆ ಗಾಯಗಳು ಆಗುತ್ತದೆ. ಗೊರಸುಗಳ ಸಂದಿಯಲ್ಲಿ ಹಾಗೂ ಕೆಚ್ಚಲಿನ ಮೇಲೆ ಗುಳ್ಳೆಗಳು ಕಾಣುತ್ತವೆ. ರೋಗ ಇರುವ ಜಾನುವಾರು ಬಂಜೆತನ ಬರುತ್ತದೆ. ಹಾಲಿನ ಇಳುವರಿ ಕಡಿಮೆಯಾಗುತ್ತದೆ. ಎತ್ತುಗಳು ಬಲಹೀನವಾಗುತ್ತದೆ. ಈ ರೋಗದಿಂದ ರೈತರು ಆರ್ಥಿಕವಾಗಿ ನಷ್ಟ ಅನುಭವಿಸುತ್ತಾರೆ ಇಂತಹ ಲಕ್ಷಣಗಳು ಕಂಡು ಬರುವ ಮುಂಚೆ ಲಸಿಕೆ ಹಾಕಿಸಬೇಕಿದೆ.6ನೇಯ ಸುತ್ತಿನ ಲಸಿಕೆ:

ಅ.21ರಿಂದ ನ20ರತನಕ ಆರನೇ ಸುತ್ತಿನ ಲಸಿಕೆಯನ್ನು ಸಂಪೂರ್ಣವಾಗಿ ಉಚಿತವಾಗಿ ನೀಡಲಾಗುತ್ತಿದ್ದು, ಪಶು ಇಲಾಖೆಯ ಅಧಿಕಾರಿಗಳನ್ನು ಸಂಪರ್ಕ ಮಾಡುವ ಮೂಲಕ ಲಸಿಕೆ ಹಾಕಿಸಬಹುದಾಗಿದೆ.