ಕಲ್ಯಾಣದ ಮೊದಲ ಚಿಟ್ಟೆ ಪಾರ್ಕ್‌ ಕೊರಳ್ಳಿಯಲ್ಲಿ ಸಿದ್ಧ

| Published : Jun 29 2024, 12:30 AM IST

ಕಲ್ಯಾಣದ ಮೊದಲ ಚಿಟ್ಟೆ ಪಾರ್ಕ್‌ ಕೊರಳ್ಳಿಯಲ್ಲಿ ಸಿದ್ಧ
Share this Article
  • FB
  • TW
  • Linkdin
  • Email

ಸಾರಾಂಶ

ಕಲಬುರಗಿಯಲ್ಲಿ ನೀರಿಲ್ಲ, ಮರಗಳಿಲ್ಲ ಅನ್ನೋ ಮಾತಿಗೆ ಅಪವಾದ ಎಂಬಂತೆ ಜಿಲ್ಲೆಯ ಆಳಂದ ಪಟ್ಟಣದಿಂದ 8 ಕಿ.ಮೀ ದೂರದ ಕೋರಳ್ಳಿ ಮಾರ್ಗದಲ್ಲಿ ಪಾತರಗಿತ್ತಿ (ಚಿಟ್ಟೆ) ಉದ್ಯಾವನ ತಲೆ ಎತ್ತಿದೆ.

ವಿಶೇಷ ವರದಿ

ಕನ್ನಡಪ್ರಭ ವಾರ್ತೆ ಆಳಂದ

ಕಲಬುರಗಿಯಲ್ಲಿ ನೀರಿಲ್ಲ, ಮರಗಳಿಲ್ಲ ಅನ್ನೋ ಮಾತಿಗೆ ಅಪವಾದ ಎಂಬಂತೆ ಜಿಲ್ಲೆಯ ಆಳಂದ ಪಟ್ಟಣದಿಂದ 8 ಕಿ.ಮೀ ದೂರದ ಕೋರಳ್ಳಿ ಮಾರ್ಗದಲ್ಲಿ ಪಾತರಗಿತ್ತಿ (ಚಿಟ್ಟೆ) ಉದ್ಯಾವನ ತಲೆ ಎತ್ತಿದೆ.

ವಲಯ ಪ್ರಾದೇಶಿಕ ಅರಣ್ಯ ಇಲಾಖೆಯ ಸಾಲುಮರದ ತಿಮ್ಮಕ್ಕನ ವೃಕ್ಷೋದ್ಯಾನದಲ್ಲಿ ಅಪರೂಪದ ಚೆಟ್ಟೆಪಾರ್ಕ್‌ (ಪಾತರಗಿತ್ತಿ) ಸಿದ್ಧಗೊಂಡಿದ್ದು ಕಲ್ಯಾಣ ಕರ್ನಾಟಕದಲ್ಲೇ ಮೊದಸ ಪಾರ್ಕ್‌ ಎಂಬ ಹೆಗ್ಗಳಿಕೆ ಪಾತ್ರವಾಗಿದೆ.

ಚಿಟ್ಟೆಗಳನ್ನು ಆಕರ್ಷಿಸೋದರ ಜೊತೆಗೇ ಇಲ್ಲಿ ಔಷಧಿಯ ಸಸ್ಯ ಉದ್ಯಾನವನವೂ ಸಿದ್ದವಾಗಿದ್ದು ಇದರಿದಂ ಬರುವ ದಿನಗಳಲ್ಲಿ ಜನಮನಲ್ಲಿ ಔಷಧಿ ಸಸ್ಯಗಳ ಬಗ್ಗೆಯೂ ಪ್ರೀತಿ, ಕಾಳಜಿ ಮೂಡಿಸುವ ಯತ್ನ ಸಾಗಲಿದೆ.

ಇವೆರಡನ್ನೂ ವೃಕ್ಷೋದ್ಯಾನವನದಲ್ಲಿ ಪ್ರತ್ಯೇಕವಾಗಿ ನಿರ್ಮಿಸುವ ಮೂಲಕ ಪ್ರವಾಸಿಗರನ್ನು ಮತ್ತು ಸ್ಥಳೀಯರನ್ನು ಸೆಳೆಯುವಂತೆ ಮಾಡಿರುವುದು ಉದ್ಯಾನವನವು ಪ್ರಕೃತಿಯ ಸೌಂದರ್ಯವನ್ನು ಮೆರೆಸುವುದರ ಜೊತೆಗೆ ಆರೋಗ್ಯಕರ ಪರಿಸರವನ್ನು ಕಾಪಾಡಿಕೊಳ್ಳಲು ಪ್ರಾದೇಶಿಕ ಅರಣ್ಯ ಇಲಾಖೆಯ ಅಧಿಕಾರಿ ಜಗನಾಥ ಕೊರಳ್ಳಿ ಮತ್ತವರ ಸಿಬ್ಬಂದಿಗಳ ಶ್ರಮಕ್ಕೆ ಜನ ಮೆಚ್ಚುಗೆ ಬಂದಿದೆ.

ಕಲ್ಯಾಣ ಕರ್ನಾಟಕ ಭಾಗದಲ್ಲೇ ವಿಶೇಷ ಎನ್ನುವಂತೆ ತಾಲೂಕಿನ ಈ ಚಿಟ್ಟೆ ಪಾರ್ಕ್ ಪ್ರಮುಖ ಆಕರ್ಷಣೆಯಾಗಲಿದೆ.. ಇಲ್ಲಿ ಚಿಟ್ಟೆಗಳ ವಿವಿಧ ಬಗೆಯುಗಳನ್ನು ಕಾಣಬಹುದು. ಚಿಟ್ಟೆಗಳ ಪ್ರಪಂಚದೊಳಕ್ಕೆ ಪ್ರವಾಸಿಗರನ್ನು ತಂದು, ಅದವರ ಜೀವನಚಕ್ರ, ಆಹಾರಪದಾರ್ಥಗಳು ಮತ್ತು ಪರಿಸರದಲ್ಲಿ ಚಿಟ್ಟೆಗಳ ಪಾತ್ರದ ಕುರಿತು ಮಾಹಿತಿ ಇಲ್ಲಿ ಲಭ್ಯವಾಗಲಿದೆ.

ಉದ್ಯಾನವನದ ಔಷಧೀಯ ಸಶೋದ್ಯಾನವನ ಮತ್ತು ಚಿಟ್ಟೆ ಪಾರ್ಕ್ ಒಂದು ತರಹದ ಪರಿಸರ ಶಿಕ್ಷಣ ಕೇಂದ್ರವಾಗಿ ಕಾರ್ಯನಿರ್ವಹಿಸಲು ಮುಂದಾಗಿದೆ. ಈ ವಿಶಿಷ್ಟ ಉದ್ಯಾನವನವು ನಗರ ಜೀವನದ ಗೊಂದಲದಿಂದ ದೂರ, ಸಸ್ಯರಾಶಿಯ ನಡುವೆ ಶಾಂತಿಯನ್ನು ಅನುಭವಿಸಲು ಉತ್ತಮ ಸ್ಥಳವಾಗಿ ಮಾರ್ಪಡಿಸಲಾಗಿದೆ.

ಔಷಧೀಯ ಸಸ್ಯಗಳ ಉದ್ಯಾನವನ: 1 ಹೆಕ್ಟೇರ್ ಮೀಸಲು ಕ್ಷೇತ್ರದಲ್ಲಿ ರಾಷ್ಟ್ರೀಯ ಔಷಧಿಯ ಸಸ್ಯಗಳ ಮಂಡಳಿ (ಎನ್.ಎಂ.ಪಿ.ಬಿ), ಅನುದಾನದಲ್ಲಿ ಸಾರ್ವಜನಿಕ ಔಷಧಿಯ ಸಸ್ಯಗಳ ಉದ್ಯಾನವ ಕೈಗೊಳ್ಳಲಾಗಿದೆ. ಹಲವಾರು ಔಷಧೀಯ ಗಿಡಗಳನ್ನು ಬೆಳೆಸಲಾಗಿದೆ, ಉದಾಹರಣೆಗೆ ತುಳಸಿ, ನೀಲಿ ನಿಂಬೆ, ಅಶ್ವಗಂಧಾ, ಮತ್ತು ಮರಿಗೊಯ ಸೇರಿ ಹಲವು ರೀತಿಯ ಈ ಗಿಡಗಳು ತಮ್ಮ ಔಷಧೀಯ ಗುಣಗಳಿಂದ ಪ್ರಸಿದ್ಧವಾಗಿದ್ದು, ಅನೇಕ ಆರೋಗ್ಯ ಸಮಸ್ಯೆಗಳಿಗೆ ಪರಿಹಾರವನ್ನು ಒದಗಿಸುತ್ತವೆ. ಉದ್ಯಾನವನದಲ್ಲಿ ಪ್ರತಿ ಗಿಡದ ಪಕ್ಕದಲ್ಲಿ ಅದರ ವಿಜ್ಞಾನನಾಮ, ಉಪಯೋಗಗಳು ಮತ್ತು ಅದರ ಅರೋಗ್ಯಕ್ಕೆ ನೀಡುವ ಲಾಭದ ಕುರಿತು ಮಾಹಿತಿ ಫಲಕಗಳನ್ನು ಅಳವಡಿಸಲಾಗಿದೆ.

ಟ್ರೀ ಪಾರ್ಕ್: 15 ಎಕರೆ ಪ್ರದೇಶದಲ್ಲಿರುವ ಈ ಸಾಲುಮರದ ತಿಮ್ಮಕ್ಕನ ವೃಕ್ಷೋದ್ಯಾನವು 107 ಜಾತಿಯ ಸಸಿಗಳ ನೆಡುತೋಪವು ನಿರ್ಮಿಸಿದ್ದು, ನೋಡುಗರ ಆಕರ್ಶಿಸುತ್ತಿದೆ. ಈ ಸಾಲಿನಲ್ಲಿ ಪರಿಸರ ಮತ್ತು ನಿಸರ್ಗ ಪ್ರೀಯರಿಗೆ ಹೇಳಿಮಾಡಿಸಿದಂತೆ ಚಿಟ್ಟೆ ಪಾರ್ಕ್ ಮತ್ತು ಸಾರ್ವಜನಿಕ ಔಷಧಿಯ ಸಸ್ಯ ಉದ್ಯಾನವನ ನಿಸರ್ಗದ ಅನುಭವ ಹಂಚಿಕೊಳ್ಳಲು ಅನುಕೂಲಕಲ್ಪಸಿದೆ.

ವೃಕ್ಷೋದ್ಯಾನಕ್ಕೆ ಸೌಲಭ್ಯ:

ಪಾರ್ಕಿನಲ್ಲಿ ಸಂಜೆ ಸೋಲಾರ್ ಲೈಟ್, ಒಂದು ಪರ್ಬಲ ನಿರ್ಮಾಣ, ವಾಚ್ ಟವರ್, ಶುದ್ಧ ಕುಡಿಯುವ ನೀರಿನ ಘಟಕ, ಬೋರ್ವೆಲ್ ಅಳವಡಿಕೆ, ಇಲ್ಲಿನ ಸಸ್ಯಗಳು ಮತ್ತು ವನ್ಯಜೀವಿಗಳು ಹಾಗೂ ಔಷಧಿಯ ಸಸ್ಯಗಳು ಕುರಿತು ಮಾಹಿತಿಯ ಫಲಗಳು ಹಾಕಲಾಗಿದೆ. ಇಲ್ಲಿಗೆ ಬಂದರೆ ಈಗಾಗಲೇ ಟ್ರೀ ಪಾರ್ಕಿನಲ್ಲಿ ವಿವಿಧ ಜಾತಿಯ ಹೂವಿನ ಮಕರಂದ ಹಿರಲು ಹಾಗೂ ಇಲ್ಲಿನ ಪರಿಸರದಲ್ಲಿ ಹೋರಾಡುವ ಅನೇಕ ತರದ ಚಿಟ್ಟೆಗಳು ನೋಡುಗರ ಮನ ತಣಿಸುತ್ತಿವೆ.

------

ಬಯಲು ಪ್ರದೇಶದಲ್ಲಿ ನಿರ್ಮಿಸಿದ ಉದ್ಯಾನವನ ವಿವಿಧ ಜಾತಿಯ ಗಿಡ, ಮರ ಹೂವು ಹಣ್ಣಿನ ಗಿಡಗಳು ಕೂಡಿದ ಉದ್ಯಾನವನಕ್ಕೆ ಬರುವ ಮಕ್ಕಳನ್ನು ಪರಿಸರ ಪ್ರೇಮಿಗಳನ್ನು ಉಲ್ಲಾಸಭರತವಾಗಿ ಆನಂದ ಒದಗಿಸುವ ತಾಣವಾಗಿದೆ.

- ಈರಣ್ಣಾ ಧಂಗಾಪೂರ, ಕರವೇ ತಾಲೂಕು ಅಧ್ಯಕ್ಷ ಆಳಂದ.

---

ಮೇಲಾಧಿಕಾರಿಗಳ ಮಾರ್ಗದರ್ಶನದಲ್ಲಿ ಈ ಭಾಗದಲ್ಲೇ ವಿಶೇಷ ಎನ್ನುವಂತೆ ಚಿಟ್ಟೆಪಾರ್ಕ್ ನಿರ್ಮಿಸಲಾಗಿದೆ. ಇಲ್ಲಿ ಬಣ್ಣ ಬಣ್ಣದ ಚಿಟ್ಟೆಗಳ ಲೋಕ ಸೃಷ್ಟಿಯಾಗಿದೆ. ಜೊತೆಗೆ ಸಾರ್ವಜನಿಕರ ಅನುಕೂಲಕ್ಕಾಗಿ ನೂರಾರು ಜಾತಿಯ ಔಷಧಿಯ ಸಸ್ಯ ಒಳಗೊಂಡ ಉದ್ಯಾನವನ್ನ ಕೈಗೊಂಡಿದ್ದು ಇದರಿಂದ ಉದ್ಯಾನವನದ ಗರಿಹೆಚ್ಚಾಗಿ ಪ್ರವಾಸಿಗರನ್ನು ಆಕರ್ಶಿತವನ್ನಾಗಿ ಮತ್ತು ಅವರಿಗೆ ಅನುಕೂಲ ಕಲ್ಪಿಸುವ ಉದ್ದೇಶ ಇದಾಗಿದೆ.

- ಜಗನಾಥ ಕೊರಳ್ಳಿ, ಆರ್‌ಎಫ್‍ಒ ಆಳಂದ.