ಸಾರಾಂಶ
ವೇದಮೂರ್ತಿ ಕಾಶಿನಾಥ್ ಭಟ್ ಮಾರ್ಗದರ್ಶನದಲ್ಲಿ ದೇವರಿಗೆ ಪಂಚಾಮೃತಾ ಅಭಿಷೇಕ, ಶತ ಕಲಶಾಭಿಷೇಕ, ಸಾನ್ನಿಧ್ಯ ಹವನ, ವಿಶೇಷ ಹೂವಿನ ಅಲಂಕಾರ ಪೂಜೆ, ಮಹಾಪೂಜೆ ಬಳಿಕ ಸಾರ್ವಜನಿಕ ಸಮಾರಾಧನೆ, ಪ್ರಸಾದ ವಿತರಣೆ ನಡೆಯಿತು.
ಕನ್ನಡಪ್ರಭ ವಾರ್ತೆ ಕಲ್ಯಾಣಪುರ
ಇಲ್ಲಿನ ಶ್ರೀ ರಾಮಾಂಜನೇಯ ದೇವಸ್ಥಾನದ ಪ್ರತಿಷ್ಠಾ ವರ್ಧಂತಿ ಮೇ 27, 28ರಂದು ಭಕ್ತಿಶ್ರದ್ಧೆಯಿಂದ, ವಿಜೃಂಭಣೆಯಿಂದ ಜರುಗಿತು. ಈ ಪ್ರಯುಕ್ತ ದೇವರ ಸನ್ನಿಧಿಯಲ್ಲಿ ಸೋಮವಾರ ಸಂಜೆ ವಸಂತ ಪೂಜೆ, ಪಲ್ಲಕ್ಕಿ ಉತ್ಸವ, ಅಷ್ಟಾವಧಾನ ಸೇವೆ, ಭಜನಾ ಕಾರ್ಯಕ್ರಮ, ಪ್ರಸಾದ ವಿತರಣೆ ನಡೆಯಿತು.ಮಂಗಳವಾರ ದೇವರಿಗೆ ಪಂಚಾಮೃತಾ ಅಭಿಷೇಕ, ಶತ ಕಲಶಾಭಿಷೇಕ, ಸಾನ್ನಿಧ್ಯ ಹವನ, ವಿಶೇಷ ಹೂವಿನ ಅಲಂಕಾರ ಪೂಜೆ, ಮಹಾಪೂಜೆ ಬಳಿಕ ಸಾರ್ವಜನಿಕ ಸಮಾರಾಧನೆ, ಪ್ರಸಾದ ವಿತರಣೆ ನಡೆಯಿತು.
ವೇದಮೂರ್ತಿ ಕಾಶಿನಾಥ್ ಭಟ್ ಮಾರ್ಗದರ್ಶನದಲ್ಲಿ ಧಾರ್ಮಿಕ ಪೂಜಾ ವಿಧಾನಗಳನ್ನು ರಾಮಚಂದ್ರ ಅವಧಾನಿ, ಗಣೇಶ ಭಟ್, ಜಯದೇವ ಭಟ್, ಪವನ್ ಭಟ್, ಜಯದೇವ ಪುರಾಣಿಕ್, ಮಹೇಶ್ ಭಟ್ ನಡೆಸಿಕೊಟ್ಟರು.ಇದೇ ಸಂದರ್ಭದಲ್ಲಿ ಶ್ರೀ ರಾಮಾಂಜನೇಯ ಸೇವಾ ಟ್ರಸ್ಟ್ ವತಿಯಿಂದ ಸ್ಥಳೀಯ ಶ್ರೀ ವೆಂಕಟರಮಣ ದೇವಳದ ಜೀರ್ಣೋದ್ಧಾರಕ್ಕೆ ಕಾರ್ಯಕ್ಕೆ 6 ಲಕ್ಷ ರು. ದೇಣಿಗೆಯನ್ನು ದೇವಳದ ಆಡಳಿತ ಮೊಕ್ತೇಸರ ಅನಂತ ಪದ್ಮನಾಭ ಕಿಣಿ ಅವರಿಗೆ ಹಸ್ತಾಂತರಿಸಲಾಯಿತು. ಎರಡೂ ದಿನಗಳ ವರ್ಧಂತಿ ಉತ್ಸವದಲ್ಲಿ ನೂರಾರು ಸಮಾಜಬಾಂಧವರು, ಭಕ್ತರೂ ಭಾಗವಹಿಸಿದ್ದರು.