ಸಾರಾಂಶ
ಮಹಾಲಿಂಗಪುರ: ಜಗತ್ತಿನಲ್ಲಿ ಅತ್ಯಂತ ಶಕ್ತಿಶಾಲಿಯಾದ ದೇವತೆ ಕಾಳಿಕಾ ಮಾತೆಯನ್ನು ವಿಶ್ವದ ತುಂಬೆಲ್ಲ ವಿವಿಧ ಹೆಸರಿನಿಂದ ಜನರು ಪೂಜಿಸಿ ಆರಾಧಿಸುತ್ತಾರೆ. ನಿರ್ಮಲ ಭಕ್ತಿಯಿಂದ ಬೇಡಿ ಬಂದವರಿಗೆ ಸಕಲವನ್ನೂ ಕರುಣಿಸುವ ಕಾಮಧೇನು ಕಲ್ಪವೃಕ್ಷ ಈ ಕಾಳಿಕಾ ಮಾತೆ ಎಂದು ಚಿಕ್ಕುಂಬಿಯ ಶ್ರೀ ನಾಗಾಲಿಂಗ ಮಹಾಸ್ವಾಮಿಗಳು ಹೇಳಿದರು. ನಗರದ ಶ್ರೀ ಮಾರುತಿ ಮಂದಿರದ ಹತ್ತಿರವಿರುವ ಶ್ರೀ ಕಾಳಿಕಾ ದೇವಿಯ ಎರಡನೆಯ ವರ್ಷದ ಜಾತ್ರಾ ಮಹೋತ್ಸವ ನಿಮಿತ್ತ ನಡೆದ ಧರ್ಮ ಸಭೆಯ ಸಾನ್ನಿಧ್ಯ ವಹಿಸಿ ಕಾರ್ಯಕ್ರಮ ಉದ್ಘಾಟಿಸಿ ಆಶೀರ್ವಚನ ನೀಡಿದರು.
ಕನ್ನಡಪ್ರಭ ವಾರ್ತೆ ಮಹಾಲಿಂಗಪುರ
ಜಗತ್ತಿನಲ್ಲಿ ಅತ್ಯಂತ ಶಕ್ತಿಶಾಲಿಯಾದ ದೇವತೆ ಕಾಳಿಕಾ ಮಾತೆಯನ್ನು ವಿಶ್ವದ ತುಂಬೆಲ್ಲ ವಿವಿಧ ಹೆಸರಿನಿಂದ ಜನರು ಪೂಜಿಸಿ ಆರಾಧಿಸುತ್ತಾರೆ. ನಿರ್ಮಲ ಭಕ್ತಿಯಿಂದ ಬೇಡಿ ಬಂದವರಿಗೆ ಸಕಲವನ್ನೂ ಕರುಣಿಸುವ ಕಾಮಧೇನು ಕಲ್ಪವೃಕ್ಷ ಈ ಕಾಳಿಕಾ ಮಾತೆ ಎಂದು ಚಿಕ್ಕುಂಬಿಯ ಶ್ರೀ ನಾಗಾಲಿಂಗ ಮಹಾಸ್ವಾಮಿಗಳು ಹೇಳಿದರು.ನಗರದ ಶ್ರೀ ಮಾರುತಿ ಮಂದಿರದ ಹತ್ತಿರವಿರುವ ಶ್ರೀ ಕಾಳಿಕಾ ದೇವಿಯ ಎರಡನೆಯ ವರ್ಷದ ಜಾತ್ರಾ ಮಹೋತ್ಸವ ನಿಮಿತ್ತ ನಡೆದ ಧರ್ಮ ಸಭೆಯ ಸಾನ್ನಿಧ್ಯ ವಹಿಸಿ ಕಾರ್ಯಕ್ರಮ ಉದ್ಘಾಟಿಸಿ ಆಶೀರ್ವಚನ ನೀಡಿದ ಅವರು, ಸವದತ್ತಿ ತಾಲೂಕಿನ ಶಿರಸಂಗಿ ಶಕ್ತಿ ಪೀಠವಾಗಿದ್ದು, ವಿಜಯನಗರ ಸಾಮ್ರಾಜ್ಯದ ಶ್ರೀ ಕೃಷ್ಣ ದೇವರಾಯನ ಕಾಲದಲ್ಲಿ ಅವನ ಸಾಮಂತರು ಶಿರಸಂಗಿಯಲ್ಲಿ ಕೋಟೆ ಕಟ್ಟಿ ತಮ್ಮ ಕಾರ್ಯಸ್ಥಾನವಾಗಿಸಿಕೊಂಡಿದ್ದರು ಎಂಬುದು ಇತಿಹಾಸದಿಂದ ತಿಳಿಯುತ್ತದೆ ಎಂದರು.
ಶಿರಸಂಗಿಯ ವಿಶ್ವಕರ್ಮ ಸಮಾಜದ ಅಧ್ಯಕ್ಷ ಪಿ.ಬಿ. ಬಡಿಗೇರ ಮಾತನಾಡಿ, ಶಿರಸಂಗಿಯ ಕಾಳಿಕಾ ದೇವಿಯ ದೇವಸ್ಥಾನ ರಾಜ್ಯದ ಪ್ರಮುಖ ಶಕ್ತಿ ಕ್ಷೇತ್ರಗಳಲ್ಲಿ ಒಂದು. ಶಿರಸಂಗಿಗೆ ಸಾವಿರಾರು ವರ್ಷಗಳ ಇತಿಹಾಸವಿದೆ. ರಾಮಾಯಣ ಕಾಲದಲ್ಲಿ ದಶರಥ ಮಹಾರಾಜ ಪುತ್ರಕಾಮೇಷ್ಠಿ ಯಾಗ ಮಾಡಲು ನಿಶ್ಚಯಿಸಿದಾಗ ಮುಖ್ಯ ಅಗ್ನಿ ಹೋತ್ರಿಯಾಗಿ ಶಿರಸಂಗಿಯಲ್ಲಿ ತಪಸ್ಸು ಮಾಡುತ್ತಿದ್ದ. ವಿಶ್ವಕರ್ಮ ವಂಶಸ್ಥನಾದ ಕಶ್ಯಪ ಗೋತ್ರದ ವಿಭಾಂಡಕ ಮುನಿಯ ಮಗನಾದ ಶೃಂಗ ಋಷಿಯನ್ನು ಆಹ್ವಾನಿಸಿದನೆಂಬ ಐತಿಹ್ಯವಿದೆ. ರಾಮ,ಲಕ್ಷ್ಮಣರು ಇಲ್ಲಿಗೆ ಭೇಟಿ ನೀಡಿದ್ದರು ಎನ್ನಲಾಗಿದೆ. ಕ್ರಿ.ಶ. 1148ರಲ್ಲಿ ಕಲ್ಯಾಣ ಚಾಲುಕ್ಯ ಅರಸ ಇಮ್ಮಡಿ ಜಗದೇಕಮಲ್ಲನ ಕಾಲದಲ್ಲಿ ಕಾಳಿಕಾ ದೇವಸ್ಥಾನದ ಬಳಿ ನೆಟ್ಟ ಶಿಲಾ ಶಾಸನಗಳಿಂದ ತಿಳಿದುಬರುತ್ತದೆ ಎಂದರು.ಭಗವಂತ ಸೋನಾರ ಮಾತನಾಡಿದರು. ದೇವಸ್ಥಾನದಲ್ಲಿ ಮುಂಜಾವು 4ರಿಂದ ರಾತ್ರಿ 10 ಗಂಟೆಯವರೆಗೆ ಪೂಜೆ, ಅಭಿಷೇಕ, ಆರತಿ, ಪಂಚಾರತಿಗಳ ಸೇವೆಗಳು ನಡೆದವು.ವಿವಿಧ ಸಮಾಜದ ಗಣ್ಯರನ್ನು ಸನ್ಮಾನಿಸಲಾಯಿತು
ವಿಶ್ವಕರ್ಮ ಸಮಾಜದ ಅಧ್ಯಕ್ಷ ಹಣಮಂತ ಬಡಿಗೇರ, ಪತ್ರಕರ್ತ ಮಹೇಶ ಆರಿ, ವಕೀಲ ಮಹೇಶ ಬಡಿಗೇರ, ಸೋಮನಾಥ ಬಡಿಗೇರ, ಸದಾಶಿವ ಬಡಿಗೇರ ವೇದಿಕೆ ಮೇಲೆ ಉಪಸ್ಥಿತರಿದ್ದರು. ಮುಖಂಡರಾದ ಮೋನಪ್ಪ ಬಟ್ಟಲ, ಗುರು ಬಾಳಿಗೇರಿ, ಮಲ್ಲಪ್ಪ ಬಾವಿಕಟ್ಟಿ, ನಾನಪ್ಪ ಬಟ್ಟಲ್, ಸುರೇಶ ಆಸಂಗಿ, ಹಣಮಂತ ಗದ್ಯಾಳ, ಸದಾಶಿವ ಬಡಿಗೇರ, ಡಾ.ಬಿ.ಡಿ. ಸೊರಗಾಂವಿ, ಸಿದ್ದಗಿರೆಪ್ಪ ಕಾಗಿ, ಉಮೇಶ ಬಡಿಗೇರ, ಕುಮಾರ ಬಡಿಗೇರ, ಈರಣ್ಣ ಮಳಲಿ, ಸಂಜು ಬಡಿಗೇರ, ಭೀಮಶಿ ಬಡಿಗೇರ, ಕೃಷ್ಣ ತುಂಗಳ, ಮಾರುತಿ ಬಡಿಗೇರ, ಪ್ರಭು ಬೆಳಗಲಿ, ಸತೀಶ ಸೊರಗಾಂವಿ, ಸಂಜು ಜಮಖಂಡಿ, ಮಲ್ಲು ನಿಂಬರಗಿ, ಶಿವಾನಂದ ಕಿತ್ತೂರು, ಬಿ.ಸಿ. ಪೂಜಾರಿ, ಶ್ರೀಶೈಲಪ್ಪ ಬಾಡನವರ, ಮಹಾಂತೇಶ ಬಡಿಗೇರ, ರಮೇಶ ಬಡಿಗೇರ, ಡಾ.ರಮೇಶ ಪತ್ತಾರ, ಮೋಹನ ಪತ್ತಾರ, ಚಂದ್ರಶೇಖರ ವೇದಪಾಠಕ, ರಾಮಚಂದ್ರ ಪತ್ತಾರ, ಸದಾಶಿವ ಲಾಳಕೆ, ಗಣಪತಿ ಸುತಾರ, ಮೌನೇಶ ಬಡಿಗೇರ, ವಿ.ಎ. ಗೌಡರ ಸೇರಿ ಹಲವರು ಇದ್ದರು. ಶಂಭು ಬಡಿಗೇರ ನಿರೂಪಿಸಿ ವಂದಿಸಿದರು.