ಕಲಿಯುಗದ ಕಾಮಧೇನು ಶ್ರೀರಾಘವೆಂದ್ರ ಮಹಾಸ್ವಾಮಿಗಳು

| Published : Aug 24 2024, 01:21 AM IST

ಸಾರಾಂಶ

ಶ್ರೀರಾಘವೇಂದ್ರ ರಾಯರು ಕಲಿಯುಗ ಕಾಮದೇನು ಕಲ್ಪವೃಕ್ಷವಿದ್ದಂತೆ ಭಕ್ತಿಯಿಂದ ನಮಿಸಿದರೆ ಬೇಡಿದವರಿಗೆ ಇಷ್ಟಾರ್ಥಿ ಪೂರೈಸುವ ಮಹಾತಪಸ್ಪಿ ಎಂದು ಖ್ಯಾತ ನ್ಯಾಯವಾದಿ ಹಾಗೂ ಶ್ರೀರಾಘವೇಂದ್ರ ಮಹಾಸ್ವಾಮಿಗಳ ಸೇವಾ ಸಮಿತಿ ಅಧ್ಯಕ್ಷ ಜಿ.ಎಸ್.ಕುಲಕರ್ಣಿ ಹೇಳಿದರು.

ಕನ್ನಡಪ್ರಭ ವಾರ್ತೆ ಇಂಡಿ

ಶ್ರೀರಾಘವೇಂದ್ರ ರಾಯರು ಕಲಿಯುಗ ಕಾಮದೇನು ಕಲ್ಪವೃಕ್ಷವಿದ್ದಂತೆ ಭಕ್ತಿಯಿಂದ ನಮಿಸಿದರೆ ಬೇಡಿದವರಿಗೆ ಇಷ್ಟಾರ್ಥಿ ಪೂರೈಸುವ ಮಹಾತಪಸ್ಪಿ ಎಂದು ಖ್ಯಾತ ನ್ಯಾಯವಾದಿ ಹಾಗೂ ಶ್ರೀರಾಘವೇಂದ್ರ ಮಹಾಸ್ವಾಮಿಗಳ ಸೇವಾ ಸಮಿತಿ ಅಧ್ಯಕ್ಷ ಜಿ.ಎಸ್.ಕುಲಕರ್ಣಿ ಹೇಳಿದರು.

ಪಟ್ಟಣದ ಶ್ರೀರಾಘವೇಂದ್ರ ಮಹಾಸ್ವಾಮಿಗಳ ಮಠದಲ್ಲಿ ಹಮ್ಮಿಕೊಂಡ 353ನೇ ಆರಾಧನಾ ಮಹೋತ್ಸವ ಪ್ರಯುಕ್ತ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಲಿಯುಗದ ಕಾಮಧೇನು ಕಲ್ಪವೃಕ್ಷ ತನ್ನ ಭಕ್ತರಿಗಾಗಿ ಕರೆದಲ್ಲಿ ಪ್ರತ್ಯಕ್ಷಗೊಳ್ಳುವ ಸಾಕ್ಷಾತ ಬ್ರಹ್ಮ, ಭಕ್ತಿಗೆ ಎಷ್ಟೇ ಕಷ್ಟಗಳು ಬಂದಾಗ ಭಕ್ತರು ಒಳ್ಳೆಯ ಮನಸ್ಸು ಆತ್ಮ ಶುದ್ಧಿಯಿಂದ ಶ್ರೀರಾಘವೇಂದ್ರ ಮಹಾಸ್ವಾಮಿಗಳನ್ನು ಪೂಜಿಸಿದರೇ ಸರ್ವಕಷ್ಟಗಳು ಹಿಡಿಬೂದಿಯಾಗುತ್ತದೆ. ಕರುಣಾಮಯಿಯಾದ ಶ್ರೀರಾಯರು ಭಕ್ತರ ರಕ್ಷಕರಾಗಿದ್ದಾರೆ. ಸದಾ ಜ್ಞಾನ, ಹರಿಭಜನೆ ಮಾಡುವ ಮೂಲಕ ಮನುಷ್ಯ ತನ್ನ ಅಂತರಂಗವನ್ನು ಶುಚ್ಚಿ ಇಟ್ಟುಕೊಳ್ಳಬೇಕು. ಸರ್ವಜನಾಂಗದಲ್ಲಿ ಮೇಲೆ ಪ್ರತೀ ಕರುಣೆ ಇರಲಿ ಶ್ರೀರಾಘವೇಂದ್ರ ಮಹಾಸ್ವಾಮಿಗಳು ಎಲ್ಲರಿಗೂ ಆರೋಗ್ಯ ಭಾಗ್ಯ ಐಶ್ವರ್ಯ ಕೊಟ್ಟು ಕರುಣಿಸಲಿ ಎಂದು ಪ್ರಾರ್ಥಿಸಿದರು.

ಪತ್ರಕರ್ತ ರಾಘವೇಂದ್ರ ಕುಲಕರ್ಣಿ ಮಾತನಾಡಿ, ಶ್ರೀರಾಘವೇಂದ್ರ ಮಹಾಸ್ವಾಮಿಗಳ ಭಕ್ತಿಯ ಪರಾಕಾಷ್ಠೆಯನ್ನು ಭಕ್ತರಿಗೆ ಉಪನ್ಯಾಸದ ಮೂಲಕ ತಿಳಿಸಿದರು.ಶ್ರೀರಾಘವೇಂದ್ರ ಮಹಸ್ವಾಮಿಗಳ ಭಕ್ತರಿಂದ ಸುಪ್ರಭಾತ, ಅಷ್ಟೋತ್ತರ ಸಂಹಿತೆ, ಫಲಪಂಚಾಭೀಷೇಕ ವಿಜೃಂಭಣೆಯಿಂದ ಜರಿಗಿತು ನಂತರ ಸಕಲ ವಿಪ್ರಬಾಂಧವರಿಂದ ದಾಸರ ಪದಗಳು, ನೃತ್ಯ ಸಂಗೀತ, ಹರಿಭಜನೆ, ರಾಯರ ರಥೋತ್ಸವ ನಡೆಯಿತು. ಸಾರ್ವಭೌಮ ಭಜನಾ ಮಂಡಳಿಯಿಂದ ದಾಸವಾಣಿ ನೆರವೇರಿತು.ರಾಘವೇಂದ್ರ ಸೇವಾ ಸಮಿತಿ ಅಧ್ಯಕ್ಷರು ಹಾಗೂ ಖ್ಯಾತ ವಕೀಲರಾದ ಜಿ.ಎಸ್.ಕುಲಕರ್ಣಿ, ಕಾರ್ಯದರ್ಶಿ ಮತ್ತು ವಕೀಲರು ಆರ್.ವಿ.ದೇಶಪಾಂಡೆ ಹಾಗೂ ನೂರಾರು ಸಂಖ್ಯೆಯಲ್ಲಿ ವಿಪ್ರಬಾಂಧವರು ಮತ್ತು ಪಟ್ಟಣದ ಸಮಸ್ತ ಭಕ್ತಾದಿಗಳು ಶ್ರೀರಾಘವೇಂದ್ರ ಮಹಾಸ್ವಾಮಿಗಳ ಆರಾಧನಾ ಕಾರ್ಯಕ್ರಮದಲ್ಲಿದ್ದರು.