ಕಂಬಳ ಕ್ಷೇತ್ರದ ಸಾಧಕ ಕೋಣ ‘ಲಕ್ಕಿ’ ಇನ್ನಿಲ್ಲ

| Published : Jul 18 2024, 01:34 AM IST

ಸಾರಾಂಶ

ಲಕ್ಕಿ ಕಳೆದ ಏಳೆಂಟು ದಿನಗಳಿಂದ ಅನಾರೋಗ್ಯದಿಂದ ಬಲಳುತ್ತಿದ್ದು, ಇದಕ್ಕೆ ನಿರಂತರ ಚಿಕಿತ್ಸೆ ನೀಡಲಾಗಿತ್ತು. ಮಂಗಳವಾರ ಕಾರ್ಕಳದಲ್ಲಿ ಇದಕ್ಕೆ ಅಪರೇಷನ್ ಕೂಡ ನಡೆದಿತ್ತು.

ಮೂಲ್ಕಿ: ಕಂಬಳ ಕ್ಷೇತ್ರದ ಸಾಧಕ, ಹಲವಾರು ಮೆಡಲ್‌ಗಳನ್ನು ತನ್ನದಾಗಿಸಿದ ಕಿನ್ನಿಗೋಳಿಯ ಉಳೆಪಾಡಿ ಬಡಗುಮನೆ ದಿವಾಕರ ಚೌಟ ಅವರ ಕಂಬಳದ ಕೋಣ ‘ಲಕ್ಕಿ’ ಅನಾರೋಗ್ಯದಿಂದ ಮೃತಪಟ್ಟಿದೆ.

ಲಕ್ಕಿ ಕಳೆದ ಏಳೆಂಟು ದಿನಗಳಿಂದ ಅನಾರೋಗ್ಯದಿಂದ ಬಲಳುತ್ತಿದ್ದು, ಇದಕ್ಕೆ ನಿರಂತರ ಚಿಕಿತ್ಸೆ ನೀಡಲಾಗಿತ್ತು. ಮಂಗಳವಾರ ಕಾರ್ಕಳದಲ್ಲಿ ಇದಕ್ಕೆ ಅಪರೇಷನ್ ಕೂಡ ನಡೆದಿತ್ತು. ಖ್ಯಾತ ವೈದ್ಯ ವಾಸುದೇವ ಪೈ ಅಪರೇಷನ್ ನಡೆಸಿದ್ದು ಮತ್ತೆ ಬುಧವಾರ ಚಿಕಿತ್ಸೆಗೆ ಕಾರ್ಕಳ ವೈದ್ಯರ ಬಳಿ ಕರೆದುಕೊಂಡು ಹೋಗಲಾಗಿತ್ತು. ವೈದ್ಯರನ್ನು ನೋಡಿದ ಲಕ್ಕಿ ಹೆದರಿ ಅತ್ತಿಂದಿತ್ತ ಓಡತೊಡಗಿತು, ಲಕ್ಕಿಯ ಮಾಲಕರು ಮತ್ತು ಮಾಲಕರ ಒಡನಾಡಿಗಳಿಗೂ ಲಕ್ಕಿ ನಿಯಂತ್ರಣಕ್ಕೆ ಸಿಗದಾಯಿತು. ಕೊನೆಗೆ ಲಕ್ಕಿಯನ್ನು ಅಲ್ಲೇ ಮರಕ್ಕೆ ಕಟ್ಟಿ ಹಾಕಿದ್ದು ಸ್ವಲ್ಪ ಹೊತ್ತಿನಲ್ಲೇ ಅಸುನೀಗಿದೆ. ಕಾರ್ಕಳದಿಂದ ಉಳೆಪಾಡಿಗೆ ತಂದು ಅಂತ್ಯಸಂಸ್ಕಾರ ನಡೆಸಲಾಯಿತು. ನೂರಾರು ಕಂಬಳಾಭಿಮಾನಿಗಳು ಲಕ್ಕಿಯ ಅಂತ್ಯಕ್ರಿಯಲ್ಲಿ ಪಾಲ್ಗೊಂಡು ಅಂತಿಮ ನಮನ ಸಲ್ಲಿಸಿದರು.