ತುಳುನಾಡಿನ ಕಂಬಳ ಕೃಷಿ ಬದುಕಿನ ಜೀವನಾಡಿ : ಜಸ್ಟಿಸ್ ಕೃಷ್ಣ ದೀಕ್ಷಿತ್

| Published : Nov 10 2025, 02:00 AM IST

ತುಳುನಾಡಿನ ಕಂಬಳ ಕೃಷಿ ಬದುಕಿನ ಜೀವನಾಡಿ : ಜಸ್ಟಿಸ್ ಕೃಷ್ಣ ದೀಕ್ಷಿತ್
Share this Article
  • FB
  • TW
  • Linkdin
  • Email

ಸಾರಾಂಶ

ಮೂಲ್ಕಿಯ ಆಧ್ಯಾತ್ಮಿಕ ವಿಶ್ವಗುರು, ಅಂತಾರಾಷ್ಟ್ರೀಯ ವಾಸ್ತುತಜ್ಞರು, ಜ್ಯೋತಿಷ್ಯ ಶ್ರೀ ಚಂದ್ರಶೇಖರ ಸ್ವಾಮೀಜಿ ಸೇವಾಶ್ರಮದಲ್ಲಿ ಐಕಳಬಾವ ಕಾಂತಾಬಾರೆ ಬೂದಾಬಾರೆ ಕಂಬಳದ ಸುವರ್ಣ ಮಹೋತ್ಸವದ ‘ನೆನಪು’ ಸ್ಮರಣ ಸಂಚಿಕೆಯ ಮನವಿ ಪತ್ರ ಬಿಡುಗಡೆಗೊಳಿಸಲಾಯಿತು.

ಕನ್ನಡಪ್ರಭ ವಾರ್ತೆ ಮಂಗಳೂರು

ತುಳುನಾಡಿನ ಕಂಬಳ ಸಹಿತ ಇಲ್ಲಿನ ಜನಪದ ಇತಿಹಾಸ, ಸಂಸ್ಕೃತಿ, ಕೃಷಿ ಪರಂಪರೆಯು ಒಂದಕ್ಕೊಂದು ಬೆಸುಗೆಯಾಗಿದ್ದು, ಜನಪದ ಕ್ರೀಡೆಯಾಗಿರುವ ಕಂಬಳ ಕೃಷಿ ಬದುಕಿನ ಜೀವನಾಡಿಯಾಗಿದೆ. ಇದನ್ನು ತೆರೆಮರೆಯಲ್ಲಿ ಪೋಷಿಸುತ್ತಿರುವ ಶ್ರೀ ಚಂದ್ರಶೇಖರ ಸ್ವಾಮೀಜಿ ಸೇವಾಶ್ರಮದ ಕಾರ್ಯ ಶ್ಲಾಘನೀಯ ಎಂದು ಒಡಿಶಾ ಹೈಕೋರ್ಟ್‌ನ ನ್ಯಾಯಾಧೀಶದ ಜಸ್ಟಿಸ್ ಕೃಷ್ಣ ದೀಕ್ಷಿತ್ ಶ್ರೀಪಾದ್ ಹೇಳಿದರು.ಅವರು ಮೂಲ್ಕಿಯ ಆಧ್ಯಾತ್ಮಿಕ ವಿಶ್ವಗುರು, ಅಂತಾರಾಷ್ಟ್ರೀಯ ವಾಸ್ತುತಜ್ಞರು, ಜ್ಯೋತಿಷ್ಯ ಶ್ರೀ ಚಂದ್ರಶೇಖರ ಸ್ವಾಮೀಜಿ ಸೇವಾಶ್ರಮದಲ್ಲಿ ಐಕಳಬಾವ ಕಾಂತಾಬಾರೆ ಬೂದಾಬಾರೆ ಕಂಬಳದ ಸುವರ್ಣ ಮಹೋತ್ಸವದ ‘ನೆನಪು’ ಸ್ಮರಣ ಸಂಚಿಕೆಯ ಮನವಿ ಪತ್ರವನ್ನು ಬಿಡುಗಡೆಗೊಳಿಸಿ ಮಾತನಾಡಿದರು.

ಈ ಸಂದರ್ಭದಲ್ಲಿ ನೂತನ ರಾಜ್ಯ ಕಂಬಳ ಅಸೋಸಿಯೇಶನ್‌ನ ಪ್ರಥಮ ಅಧ್ಯಕ್ಷರಾಗಿ ಆಯ್ಕೆಗೊಂಡ ಐಕಳಬಾವ ಕಾಂತಾಬಾರೆ ಬೂದಾಬಾರೆ ಕಂಬಳದ ಸಮಿತಿಯ ಅಧ್ಯಕ್ಷ ಶ್ರೀ ಚಂದ್ರಶೇಖರ ಸ್ವಾಮೀಜಿ ಸೇವಾಶ್ರಮದ ಗೌರವಾಧ್ಯಕ್ಷ ಐಕಳಬಾವ ಡಾ.ದೇವಿಪ್ರಸಾದ್ ಶೆಟ್ಟಿ ಬೆಳಪು ಅವರನ್ನು ಶ್ರೀ ಚಂದ್ರಶೇಖರ ಸ್ವಾಮೀಜಿಯವರ ಉಪಸ್ಥಿತಿಯಲ್ಲಿ ಜಸ್ಟಿಸ್ ಕೃಷ್ಣ ದೀಕ್ಷಿತ್ ಅವರು ವಿಶೇಷವಾಗಿ ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಜಸ್ಟಿಸ್ ಕೃಷ್ಣ ದೀಕ್ಷಿತ್ ಅವರಿಗೆ ಕಂಬಳದ ಬಗ್ಗೆ ಮಾಹಿತಿ ನೀಡಿದ ಸ್ವಾಮೀಜಿಯವರು, ಐಕಳ ಕಂಬಳದ ಸುವರ್ಣ ಮಹೋತ್ಸವಕ್ಕೆ ಸಮಿತಿಯ ಗೌರವ ಸಲಹೆಗಾರ ನೆಲೆಯಲ್ಲಿ ವಿಶೇಷವಾಗಿ ಜಸ್ಟಿಸ್ ಅವರನ್ನು ಆಹ್ವಾನಿಸಿದರು. ಸೇವಾಶ್ರಮದ ನಿರ್ದೇಶಕಿ ರಜನಿ ಸಿ. ಭಟ್, ಯೋಗಿನಿ ಕೃಷ್ಣ ದೀಕ್ಷಿತ್, ರಾಘವ ಸೂರ್ಯ, ನ್ಯಾಯವಾದಿ ರೋಶನಿ ಚಂದ್ರಶೇಖರ್, ರಾಹುಲ್ ಚಂದ್ರಶೇಖರ್ ಮತ್ತಿತರರು ಇದ್ದರು. ಆಶ್ರಮದ ಸಂಚಾಲಕ ಪುನಿತ್‌ಕೃಷ್ಣ ಸ್ವಾಗತಿಸಿದರು, ವಕ್ತಾರ ನರೇಂದ್ರ ಕೆರೆಕಾಡು ನಿರೂಪಿಸಿದರು.ಬಾಕ್ಸ್‌----ಸುವರ್ಣ ಸಂಭ್ರಮ ಸುವರ್ಣಾಕ್ಷರದಲ್ಲಿ ದಾಖಲಾಗಲಿದೆ : ಚಂದ್ರಶೇಖರ ಸ್ವಾಮೀಜಿಕಂಬಳವನ್ನು ನಿಲ್ಲಿಸಲು ನ್ಯಾಯಾಲಯದಲ್ಲಿ ವಿಫಲಯತ್ನ ನಡೆದಾಗ ಪರ-ವಿರೋಧವನ್ನು ಆಲಿಸಿ, ಇತಿಹಾಸ, ಪರಂಪರೆಯ ಕಂಬಳಕ್ಕೆ ಧಕ್ಕೆಯಾಗದಂತೆ ಕಾನೂನಾತ್ಮಕವಾಗಿ ಕಂಬಳ ಇಂದಿಗೂ ನಮ್ಮ ಜೀವನಾಡಿಯಾಗಿ ಮುಂದುವರಿಯಲು ಪರೋಕ್ಷ ಕಾರಣ ಜಸ್ಟಿಸ್ ಕೃಷ್ಣ ದೀಕ್ಷಿತ್ ಅವರ ನ್ಯಾಯಪೀಠದ ಐತಿಹಾಸಿಕ ತೀರ್ಮಾನವಾಗಿದೆ.

ಸುಮಾರು ಐನೂರು ವರ್ಷದ ಇತಿಹಾಸ ಇರುವ ಐಕಳ ಕಂಬಳ ಈ ಬಾರಿ ಸುವರ್ಣ ಸಂಭ್ರಮದಲ್ಲಿರುವುದರಿಂದ ಸುವರ್ಣ ಸಂಭ್ರಮವು ಸುವರ್ಣಾಕ್ಷರದಲ್ಲಿ ದಾಖಲಾಗಲಿದೆ ಸೇವಾಶ್ರಮದಿಂದ ವಿಶೇಷವಾದ ಸಹಕಾರ ನೀಡಲಾಗುವುದು, ತುಳುನಾಡಿನ ಸಂಸ್ಕೃತಿ-ಪರಂಪರೆ ಉಳಿಸಿ ಬೆಳೆಸುವಲ್ಲಿ ಸೇವಾಶ್ರಮ ಎಂದಿಗೂ ಹಿಂಜರಿಯದು ಎಂದು ಆಧ್ಯಾತ್ಮಿಕ ವಿಶ್ವಗುರು ಶ್ರೀ ಚಂದ್ರಶೇಖರ ಸ್ವಾಮೀಜಿ ಅವರು ತಮ್ಮ ಅನುಗ್ರಹ ಭಾಷಣದಲ್ಲಿ ಹೇಳಿದರು.--------------------------------ಸ್ವಾಮೀಜಿಯವರ ಪಾದಸ್ಪರ್ಶದಿಂದ ಐಕಳ ಕಂಬಳ ಮೇಳೈಸಿದೆ : ದೇವಿಪ್ರಸಾದ್ಐಕಳ ಕಂಬಳ ಹಿಂದೆ ಸೀಮಿತವಾದ ಪ್ರೇಕ್ಷಕರ ನಡುವೆ ಸಂಪ್ರದಾಯವಾಗಿ ನಡೆಯುತ್ತಿತ್ತು. ನಂತರ ಶ್ರೀ ಚಂದ್ರಶೇಖರ ಸ್ವಾಮೀಜಿಯವರ ಪಾದಸ್ಪರ್ಶದಿಂದ ಇಂದು ದೇಶ ವಿದೇಶದಿಂದ ಕಂಬಳ ಪ್ರೇಮಿಗಳನ್ನು ಆಕರ್ಷಿಸಿದೆ. ಐಕಳ ಕಂಬಳ ವಿಶ್ವಮನ್ನಣೆ ಪಡೆದಿದೆ. ಸುವರ್ಣ ಸಂಭ್ರಮದಲ್ಲಿಯೂ ವಿಶೇಷರೀತಿಯ ಸಹಕಾರವನ್ನು ಸೇವಾಶ್ರಮದ ಮೂಲಕ ಸ್ವಾಮೀಜಿಯವರು ನೀಡಲಿದ್ದಾರೆ. ಸ್ವಾಮೀಜಿಯವರ ಮೂಲ್ಕಿಯ ಹುಟ್ಟೂರಿನ ಜನಪದ ಉಳಿವಿಗೆ ಸೇವಾಶ್ರಮ ನಿರಂತರವಾಗಿ ತೆರೆದ ಪುಸ್ತಕದಂತೆ ಕೆಲಸ ಮಾಡುತ್ತಿದೆ ಎಂದು ಕಂಬಳ ಸಮಿತಿಯ ಅಧ್ಯಕ್ಷ ಐಕಳಬಾವ ಡಾ.ದೇವಿಪ್ರಸಾದ್ ಶೆಟ್ಟಿ ಹೇಳಿದರು.

----------