ಕನಕರ ತತ್ವೋಪದೇಶಗಳು ಸಮಾಜಕ್ಕೆ ಪ್ರಸ್ತುತ

| Published : Nov 19 2024, 12:52 AM IST

ಸಾರಾಂಶ

ತಿಪಟೂರು: ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು ತತ್ವದ ಕನಕದಾಸರ ತತ್ವೋಪದೇಶಗಳು ಹಿಂದಿಗಿಂತಲೂ ಇಂದಿನ ಸಮಾಜಕ್ಕೆ ಅತ್ಯಂತ ಪ್ರಸ್ತುತ ಅವಶ್ಯಕ ಎಂದು ಪ್ರಾಂಶುಪಾಲ ಎಂ.ಡಿ. ಶಿವಕುಮಾರ್ ತಿಳಿಸಿದರು.

ತಿಪಟೂರು: ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು ತತ್ವದ ಕನಕದಾಸರ ತತ್ವೋಪದೇಶಗಳು ಹಿಂದಿಗಿಂತಲೂ ಇಂದಿನ ಸಮಾಜಕ್ಕೆ ಅತ್ಯಂತ ಪ್ರಸ್ತುತ ಅವಶ್ಯಕ ಎಂದು ಪ್ರಾಂಶುಪಾಲ ಎಂ.ಡಿ. ಶಿವಕುಮಾರ್ ತಿಳಿಸಿದರು.

ನಗರದ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕನಕದಾಸ ಜಯಂತಿ ಆಚರಣೆಯಲ್ಲಿ ಮಾತನಾಡಿದ ಅವರು, ಜಾತಿ, ವರ್ಗ ರಹಿತ ಸಮ ಸಮಾಜವನ್ನು ನಿರ್ಮಿಸಲು ನಾವೆಲ್ಲರೂ ಮುಂದಾಗಬೇಕಿದೆ. ಸಮಾಜದ ಜಾತಿ ವ್ಯವಸ್ಥೆ ವಿರುದ್ದ ಕೀರ್ತನೆಗಳ ಮುಖಾಂತರ ಹೋರಾಟ ನಡೆಸಿದ ಕನಕದಾಸರನ್ನು ನಾವೆಲ್ಲರೂ ಸ್ಮರಿಸಬೇಕು ಎಂದರು. ಉಪನ್ಯಾಸಕ ಮೈಲಾರಪ್ಪ ಮಾತನಾಡಿ ಕನಕದಾಸರು ಶ್ರೀಕೃಷ್ಣನ ಪರಮ ಭಕ್ತರಾಗಿದ್ದುಕೊಂಡು ತಂಬೂರಿ ಹಿಡಿದು ಕೀರ್ತನೆಗಳನ್ನು ಹಾಡುತ್ತಾ ನಾಡಿನ ಉದ್ದಗಲಕ್ಕೂ ಸಂಚರಿಸಿ ಲೋಕದ ಡೊಂಕನ್ನು ತಿದ್ದುವ ಪ್ರಯತ್ನ ಮಾಡಿದರು. ಆತ್ಮ ಯಾವ ಕುಲ, ಜೀವ ಯಾವ ಕುಲ ಎಂದು ಪ್ರಶ್ನಿಸಿದ್ದರು. ಸಮಾಜದಲ್ಲಿರುವ ಎಲ್ಲರೂ ದುಡಿಮೆ ಬದುಕು ಉದ್ದೇಶ ಎಲ್ಲರೂ ಮಾಡುವುದು ಹೊಟ್ಟೆಗಾಗಿ, ಗೇಣು ಬಟ್ಟೆಗಾಗಿ, ತುತ್ತು ಹಿಟ್ಟಿಗಾಗಿ ಎಂಬ ನಿತ್ಯ ಸತ್ಯ ತಿಳಿಸಿದ್ದರು. ಆದ್ದರಿಂದ ವಿದ್ಯಾರ್ಥಿಗಳು ಕನಕದಾಸರ ಚಿಂತನೆ, ತತ್ವಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಕರೆ ನೀಡಿದರು. ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಸಚ್ಚಿದಾನಂದಮೂರ್ತಿ, ಎಂ.ಎಸ್. ಹರೀಶ್, ಪ್ರಕಾಶ್, ಷಡಕ್ಷರಪ್ಪ ಮತ್ತಿತರರಿದ್ದರು.