ಸಾರಾಂಶ
ಕನಕದಾಸರು ಕೀರ್ತನಕಾರರು ಮಾತ್ರವಲ್ಲ. ಅವರೊಬ್ಬ ದಾರ್ಶನಿಕ, ಕವಿಯಾಗಿದ್ದರು. ಭಕ್ತಿ ಪಂಥದಲ್ಲಿ ಬಂದಿರುವ ದಾಸ ಶ್ರೇಷ್ಠರು. ಅವರ ತತ್ವಗಳು ಸಾರ್ವಕಾಲಿಕವಾಗಿದ್ದು, ಜನಸಾಮಾನ್ಯರಿಗೆ ಅರ್ಥವಾಗುವಂತೆ ಅತ್ಯಂತ ಸರಳ ಭಾಷೆಯಲ್ಲಿ ತಿಳಿಸುವ ಮೂಲಕ ಕನ್ನಡವನ್ನು ಶ್ರೀಮಂತಗೊಳಿಸಿದರು ಎಂದು ಕೊಂಡಾಡಿದರು.
ಕನ್ನಡಪ್ರಭ ವಾರ್ತೆ ಹೊಸಪೇಟೆ
ಕನ್ನಡ ಸಾಹಿತ್ಯ ಲೋಕಕ್ಕೆ ಕನಕದಾಸರ ಕೊಡುಗೆ ಅಪಾರವಾಗಿದೆ ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ ತಿಳಿಸಿದರು.ಗುರುವಾರ ಜಿಲ್ಲಾಡಳಿತ, ಜಿಪಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಗಳ ಸಹಯೋಗದಲ್ಲಿ ನಗರದ ಕನಕದಾಸ ವೃತ್ತದಲ್ಲಿ ಏರ್ಪಡಿಸಿದ್ದ ಕನಕದಾಸರ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ, ಕನಕದಾಸರು ಕೀರ್ತನಕಾರರು ಮಾತ್ರವಲ್ಲ. ಅವರೊಬ್ಬ ದಾರ್ಶನಿಕ, ಕವಿಯಾಗಿದ್ದರು. ಭಕ್ತಿ ಪಂಥದಲ್ಲಿ ಬಂದಿರುವ ದಾಸ ಶ್ರೇಷ್ಠರು. ಅವರ ತತ್ವಗಳು ಸಾರ್ವಕಾಲಿಕವಾಗಿದ್ದು, ಜನಸಾಮಾನ್ಯರಿಗೆ ಅರ್ಥವಾಗುವಂತೆ ಅತ್ಯಂತ ಸರಳ ಭಾಷೆಯಲ್ಲಿ ತಿಳಿಸುವ ಮೂಲಕ ಕನ್ನಡವನ್ನು ಶ್ರೀಮಂತಗೊಳಿಸಿದರು ಎಂದು ಕೊಂಡಾಡಿದರು.
ಎಸ್ಪಿ ಶ್ರೀಹರಿ ಬಾಬು ಮಾತನಾಡಿ, ಕನಕದಾಸರು ತಮ್ಮ ಇಡೀ ಜೀವನವನ್ನು ಸಮಾಜದ ಸುಧಾರಣೆಗೆ ಅರ್ಪಿಸಿದ್ದಾರೆ. ಕನಕದಾಸರು ರಚಿಸಿದ ನೂರಾರು ಕೀರ್ತಿಗಳು ಸಮಾಜ, ಮಾನವೀಯ ಮೌಲ್ಯಗಳು, ಕೌಟುಂಬಿಕ ಸಂಬಂಧಗಳನ್ನು ಗಟ್ಟಿಗೊಳಿಸುವ ಸಂದೇಶಗಳನ್ನು ನೀಡಿದ್ದಾರೆ ಎಂರು.ಸಾಮಾಜಿಕ ಚಿಂತಕ, ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ವೈ.ಎನ್. ಗೌಡರ್ ಮಾತನಾಡಿ, ದಾರ್ಶನಿಕರ ಚಿಂತನೆಗಳು ಮತ್ತು ನಮ್ಮ ಬದುಕಿನ ಶೈಲಿಯ ಬಗ್ಗೆ ಮೌಲ್ಯಮಾಪನವಾಗಬೇಕು. ದಾರ್ಶನಿಕರ ಹೆಸರಲ್ಲಿ ನಡೆಯುವ ಜಯಂತ್ಯುತ್ಸವಗಳು ವೈಭೋಗದತ್ತ ಸಾಗುತ್ತಿವೆಯಾದರೂ ನಮ್ಮ ವಿಚಾರಧಾರೆಗಳು ವೈಚಾರಿಕತೆಯತ್ತ ಸಾಗುತ್ತಿಲ್ಲ. ಕನಕದಾಸ ಸೇರಿದಂತೆ ಅನೇಕ ದಾರ್ಶನಕರು ನುಡಿದಂತೆ ನಡೆದರು ಎಂದರು.
ತಹಸೀಲ್ದಾರ್ ವಿಶ್ವಜೀತ ಮೆಹತಾ, ಮುಖಂಡರಾದ ಅಯ್ಯಾಳಿ ತಿಮ್ಮಪ್ಪ, ಎಲ್. ಸಿದ್ದನಗೌಡ, ಆರ್. ಕೊಟ್ರೇಶ, ಜಿ. ಭರಮಲಿಂಗನ ಗೌಡ, ತಾರಿಹಳ್ಳಿ ಜಂಬುನಾಥ, ಎಚ್.ಜಿ. ವಿರೂಪಾಕ್ಷಿ, ರವಿಕುಮಾರ, ಸಿದ್ಧಲಿಂಗೇಶ್ವರ ರಂಗಣ್ಣವರ, ಮಲ್ಲಯ್ಯ ಒಡೆಯರ್ ಇತರರು ಇದ್ದರು.