ಕನಕದಾಸರ ಉಪದೇಶಗಳು ಇಂದಿನ ಪೀಳಿಗೆಗೆ ಮಾರ್ಗದರ್ಶಕ: ಶಾಸಕ ಎಂ.ಆರ್. ಮಂಜುನಾಥ್

| Published : Nov 10 2025, 01:00 AM IST

ಕನಕದಾಸರ ಉಪದೇಶಗಳು ಇಂದಿನ ಪೀಳಿಗೆಗೆ ಮಾರ್ಗದರ್ಶಕ: ಶಾಸಕ ಎಂ.ಆರ್. ಮಂಜುನಾಥ್
Share this Article
  • FB
  • TW
  • Linkdin
  • Email

ಸಾರಾಂಶ

ಪಟ್ಟಣದ ಕನಕ ಸಮುದಾಯ ಭವನದಲ್ಲಿ ಶನಿವಾರ ಶ್ರೀ ಭಕ್ತ ಶ್ರೇಷ್ಠ ಕನಕದಾಸರ 538ನೇ ಜಯಂತ್ಯುತ್ಸವ ನಡೆಯಿತು. ಕನಕ ನೌಕರರ ಕ್ಷೇಮಾಭಿವೃದ್ಧಿ ಸಂಘದ ನಾಮಫಲಕವನ್ನು ಶಾಸಕ ಎಂ.ಆರ್. ಮಂಜುನಾಥ್ ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ, ಹನೂರು

ಪಟ್ಟಣದ ಕನಕ ಸಮುದಾಯ ಭವನದಲ್ಲಿ ಶನಿವಾರ ಶ್ರೀ ಭಕ್ತ ಶ್ರೇಷ್ಠ ಕನಕದಾಸರ 538ನೇ ಜಯಂತ್ಯುತ್ಸವ ನಡೆಯಿತು. ಕನಕ ನೌಕರರ ಕ್ಷೇಮಾಭಿವೃದ್ಧಿ ಸಂಘದ ನಾಮಫಲಕವನ್ನು ಶಾಸಕ ಎಂ.ಆರ್. ಮಂಜುನಾಥ್ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು, ಕನಕದಾಸರು ಸಮಾಜದಲ್ಲಿ ಸಮಾನತೆ, ಮಾನವೀಯತೆ ಮತ್ತು ಭಕ್ತಿ ಮಾರ್ಗದ ಸಂದೇಶವನ್ನು ಸಾರಿದ ಮಹಾನ್ ಸಂತರಾಗಿದ್ದಾರೆ. ಅವರ ಉಪದೇಶಗಳು ಇಂದಿನ ಪೀಳಿಗೆಗೂ ಮಾರ್ಗದರ್ಶಕವಾಗಿವೆ. ಸಮಾಜದ ಎಲ್ಲ ವರ್ಗಗಳು ಕನಕದಾಸರ ತತ್ವದ ಆಧಾರದಲ್ಲಿ ಬಾಳಬೇಕು ಎಂದು ಹೇಳಿದರು.

ಹಾಗಯೇ ಕನಕ ಜಯಂತಿ ಕಾರ್ಯಕ್ರಮ ಮುಂದಿನ ದಿನಗಳಲ್ಲಿ ಎಲ್ಲಾ ಸಮುದಾಯವನ್ನು ಒಂದೆಡೆ ಸೇರಿಸಿ ಹನೂರಿನಲ್ಲಿ ಹಬ್ಬದಂತೆ ಆಚರಿಸೋಣ. ಪಟ್ಟಣದಲ್ಲಿ ಬಹು ವರ್ಷಗಳಿಂದಲೂ ಕೂಡ ನಿರ್ಮಾಣ ಹಂತದಲ್ಲಿರುವಂತಹ‌ ಕನಕ ಭವನ ನಿರ್ಮಾಣ ಕಾರ್ಯವನ್ನು ಇನ್ನೂ ಆರು ತಿಂಗಳಲ್ಲಿ ಪೂರ್ಣಗೊಳಿಸುವ ಭರವಸೆಯನ್ನು ನೀಡಿದರು

ಈ ಕಾರ್ಯಕ್ರಮದಲ್ಲಿ ಕಳೆದ ಸಾಲಿನಲ್ಲಿ ಎಸ್ ಎಸ್ ಎಲ್ ಎಲ್ ಸಿ ಪಿಯುಸಿ ಪರೀಕ್ಷೆಗಳಲ್ಲಿ ಉತ್ತಮ ಅಂಕಗಳನ್ನು ಪಡೆದಂತ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.

ಇದೇ ಸಂದರ್ಭದಲ್ಲಿ ತಹಶೀಲ್ದಾರ್ ಚೈತ್ರಾ, ಡಾ. ಧರ್ಮಪುರ ಸಂಸ್ಥಾನ ಮಠದ ಅಶೋಕ್‌ ಗುರೂಜಿ, ಡಿಸಿಪಿ ಕೆ.ಎಸ್ ನಾಗರಾಜು, ಕೌದಳ್ಳಿ ಸರ್ಕಾರಿ ಪ್ರೌಢ ಶಾಲೆ ಶಿಕ್ಷಕರಾದ ಸುಭಾಷ್ ಮಲ್ಲೂರು, ತಾಲೂಕು ಕುರುಬ ಸಂಘದ ಅಧ್ಯಕ್ಷರಾದ ಶಿವಪ್ಪ, ತಾಲೂಕು ಅಧ್ಯಕ್ಷ ನಂಜೇಗೌಡ, ಚಂದ್ರಮುರಳಿ, ಮಂಜು, ಮಹಾದೇವಸ್ವಾಮಿ, ನಾಗರಾಜು, ಶಿವಮಲ್ಲು, ಸಿದ್ದಪ್ಪ ನಂಜುಂಡ, ಯಾರಂಬಡಿ ಹುಚ್ಚಯ್ಯ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.