ಸಾರಾಂಶ
ಕನ್ನಡಪ್ರಭ ವಾರ್ತೆ ಕೊರಟಗೆರೆ
೬೫ ವರ್ಷದ ನಿರ್ಗತಿಕರಿಗೆ ಅನುಕೂಲಕ್ಕಾಗಿ ಸರ್ಕಾರ ಜಾರಿಗೆ ತಂದಿರುವ ಸಂಧ್ಯಾ ಸುರಕ್ಷಾ ಯೋಜನೆಯನ್ನು ಹಣದ ಆಸೆಗೆ ಕೆಲ ಸೈಬರ್ ಸೆಂಟರ್‌ಗಳು ೫೦ ವರ್ಷದ ವ್ಯಕ್ತಿಯನ್ನು ೬೫ ವರ್ಷಕ್ಕೆ ತಂದು ಸರ್ಕಾರದ ಬೊಕ್ಕಸಕ್ಕೆ ಕನ್ನ ಹಾಕುತ್ತಿರುವುದು ಬೆಳಕಿಗೆ ಬಂದಿದೆ.ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ೨೦೦೭-೦೮ರಲ್ಲಿ ೬೫ ವರ್ಷ ಮೇಲ್ಪಟ್ಟ ಕಡು ಬಡವರಿಗೆ ೫೦೦ ಪಿಂಚಣಿಯನ್ನ ಜಾರಿಗೆ ತಂದಿದ್ದು, ಸದ್ಯ ೧೨೦೦ ರು. ಹಿರಿಯ ನಾಗರಿಕರ ಕೈ ಸೇರುತ್ತಿದೆ. ಸಂಧ್ಯಾ ಸುರಕ್ಷಾ ಪಿಂಚಣಿ ಯೋಜನೆಯು ಅರ್ಹ ಹಿರಿಯ ನಾಗರಿಕರಿಗೆ ಮಾಸಿಕ ಪಿಂಚಣಿಗಳನ್ನ ಒದಗಿಸಲು ನಾನಾ ಮಾನದಂಡವನ್ನು ನಿಗದಿ ಪಡಿಸಲಾಗಿದೆ. ತಾಲೂಕಿನಲ್ಲಿ ೩೫,೧೮೮ ಜನರು ಈಗಾಗಲೇ ಸರ್ಕಾರದ ಎಲ್ಲಾ ಪಿಂಚಣಿಗಳನ್ನ ಪಡೆಯುತ್ತಿದ್ದು, ಇದರಲ್ಲಿ ಸುಮಾರು ೧೪,೪೩೪ ಜನರು ಸಂಧ್ಯಾ ಸುರಕ್ಷಾ ಯೋಜನೆಯ ಫಲಾನುಭವಿಗಳಾಗಿ ಹಣ ಪಡೆಯುತ್ತಿದ್ದಾರೆ. ಇದಲ್ಲಿ ಸಾಕಷ್ಟು ಜನರಿಗೆ ೬೫ ವರ್ಷ ತುಂಬದೆ ಹಣ ಪಡೆಯುತ್ತಿದ್ದು, ತಾಲೂಕಿನಲ್ಲಿರುವ ಕೆಲವು ಸೈಬರ್ ಸೆಂಟರ್ ಹಾಗೂ ಮಧ್ಯವರ್ತಿಗಳು ನಕಲಿ ದಾಖಲೆಯಗಳನ್ನ ಸೃಷ್ಠಿಸಿ ಸರ್ಕಾರದ ಬೋಕ್ಕಸಕ್ಕೆ ಕನ್ನ ಹಾಕುತ್ತಿದ್ದು, ಇಂತಹ ಸೈಬರ್ ಸೆಂಟರ್ ಹಾಗೂ ಮಧ್ಯವರ್ತಿಗಳನ್ನ ಅಧಿಕಾರಿಗಳು ಕಡಿವಾಣ ಹಾಕುವಲ್ಲಿ ವಿಫಲರಾಗಿದ್ದಾರೆ ಎಂದು ಸಾರ್ವಜನಿಕರು ದೂರಿದ್ದಾರೆ. ನಾಡಕಚೇರಿಗಳಲ್ಲಿ ಮದ್ಯವರ್ತಿಗಳ ಹಾವಳಿ: ಕೊರಟಗೆರೆ ತಾಲೂಕಿನ ಹೊಳವನಹಳ್ಳಿ, ಕೋಳಾಲ, ಸಿ.ಎನ್.ದುರ್ಗಾ ಹೋಬಳಿಯ ತೋವಿನಕೆರೆಯಲ್ಲಿ ನಾಡಕಚೇರಿಗಳಲ್ಲಿ ಹಾಗೂ ಕಸಬಾ ಹೋಬಳಿಯ ನಾಗರಿಕರು ಪಟ್ಟಣದ ತಾಲೂಕು ಕಚೇರಿಯಲ್ಲಿ ಸರ್ಕಾರದ ಅನೇಕ ಯೋಜನೆಗಳಿಗೆ ಅರ್ಜಿಯನ್ನ ಸಲ್ಲಿಸಬೇಕಾಗುತ್ತದೆ. ಆದರೆ ಯಾವುದೇ ಅರ್ಜಿದಾರ ಕಚೇರಿಗೆ ಅಲೆಯುವ ಅವಶ್ಯಕತೆ ಇಲ್ಲ. ಯಾಕಂದ್ರೆ ಮಧ್ಯವರ್ತಿಗಳಿಗೆ ₹೩ ರಿಂದ ೫ ಸಾವಿರ ಕೊಟ್ಟರೆ ಅವರ ಮನೆ ಮುಂದಕ್ಕೆ ಎಲ್ಲಾ ಯೋಜನೆಗಳ ಆದೇಶ ಪತ್ರ ನೀಡುತ್ತಾರೆ. ಇವರನ್ನು ಕಡಿವಾಣ ಹಾಕುವವರು ಯಾರು? ಸೈಬರ್ ಸೆಂಟರ್‌ನಲ್ಲಿ ಕನ್ನ: ಪಟ್ಟಣ ಸೇರಿದಂತೆ ತಾಲೂಕಿನ ಬಹುತೇಕ ಗ್ರಾಮಗಳಲ್ಲಿ ಗ್ರಾಮ ಒನ್, ಕರ್ನಾಟಕ ಒನ್, ಭಾರತ್ ಒನ್ ಸೇರಿದಂತೆ ತಾಲೂಕಿನ ಎಲ್ಲಾ ಸೈಬರ್ ಸೆಂಟರ್‌ಗಳಲ್ಲಿ ಸರ್ಕಾರದ ಯೋಜನೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ. ತಾಲೂಕಿನ ಕೆಲ ಸೈಬರ್ ಸೆಂಟರ್‌ಗಳಲ್ಲಿ ಮಧ್ಯವರ್ತಿಗಳ ಸಹಕಾರದಿಂದ ಆಧಾರ್ ಕಾರ್ಡ್, ರೇಷನ್ ಕಾರ್ಡ್‌ಗಳಲ್ಲಿರುವ ವ್ಯಕ್ತಿ ವಯಸ್ಸನ್ನು ಹೆಚ್ಚಿಗೆ ಮಾಡಿ ಸಂಧ್ಯಾ ಸುರಕ್ಷಾ ಯೋಜನೆಗೆ ಕಳ್ಳ ಮಾರ್ಗ ಕಂಡು ಹಿಡಿದು ಸರ್ಕಾರಕ್ಕೆ ಬೋಕ್ಕಸಕ್ಕೆ ಕನ್ನ ಹಾಕುತ್ತಿರುವುದು ಕಂಡುಬಂದಿದೆ.ತಾಲೂಕಿನಲ್ಲಿ ಸೈಬರ್ ಸೆಂಟರ್‌ಗಳಲ್ಲಿ ಹಣದ ದುರಾಸೆಗೆ ಆಧಾರ್ ಕಾರ್ಡ್, ರೇಷನ್ ಕಾರ್ಡ್‌ಗಳಲ್ಲಿ ವ್ಯಕ್ತಿಯ ವಯಸ್ಸು ಹೆಚ್ಚಿಗೆ ಮಾಡುತ್ತಿದ್ದರೂ ಸಹ ಯಾವುದೆ ಅಧಿಕಾರಿಯಾಗಲಿ ಕಡಿವಾಣ ಹಾಕಲು ವಿಫಲರಾಗಿದ್ದಾರೆ. ತುಮಕೂರು ಜಿಲ್ಲಾಧಿಕಾರಿಗಳು ಸರ್ಕಾರ ಎಲ್ಲಾ ಯೋಜನೆಯ ಫಲಾನುಭವಿಗಳ ತನಿಖೆ ಮಾಡಿಸಿ ಅಂತವರ ವಿರುದ್ದ ಸೂಕ್ತ ಕ್ರಮ ತೆಗೆದುಕೊಳ್ಳಬೇಕು.ನಾನು ಹೊಳವನಹಳ್ಳಿ ನಾಡಕಚೇರಿಯಲ್ಲಿ ೧೫ ದಿನಗಳ ಹಿಂದೆ ವಂಶವೃಕ್ಷಕ್ಕಾಗಿ ಅರ್ಜಿ ಸಲ್ಲಿಸಿದ್ದೆ ಆಮೇಲೆ ಕೇಳಿದರೆ ನನ್ನ ಅರ್ಜಿನೇ ಇಲ್ಲ ಕಳೆದು ಹೋಗಿದೆ ಎಂದು ಉಡಾಫೆ ಉತ್ತರ ನೀಡುತ್ತಾರೆ. ಮತ್ತೆ ನಾನು ಅರ್ಜಿ ಸಲ್ಲಿಸಲು ಬಂದಿದ್ದಾನೆ.ರಾಜಣ್ಣ ಸ್ಥಳೀಯ ಕೊರಟಗೆರೆತಾಲೂಕಿನ ವಿವಿಧ ಸೈಬರ್ ಸೆಂಟರ್‌ಗಳಲ್ಲಿ ಆಧಾರ್ ಕಾರ್ಡ್ ಹಾಗೂ ರೇಷನ್ ಕಾರ್ಡ್‌ನಲ್ಲಿರುವ ವ್ಯಕ್ತಿಯ ವಯಸ್ಸನ್ನು ಹೆಚ್ಚಿಗೆ ಮಾಡಿ ಸಂಧ್ಯಾ ಸುರಕ್ಷಾ ಯೋಜನೆಗೆ ಅರ್ಜಿ ಸಲ್ಲಿಸಿ ಸರ್ಕಾರದ ಬೊಕ್ಕಸಕ್ಕೆ ಕನ್ನ ಹಾಕುತ್ತಿರುವುದು ಗಮನಕ್ಕೆ ಬಂದಿದೆ. ಯಾವುದೆ ಸೈಬರ್ ಸೆಂಟರ್‌ಗಳಲ್ಲಿ ಅಕ್ರಮವಾಗಿ ಇಂತಹ ಕೆಲಸಗಳನ್ನು ಮಾಡಿದರೆ ಅಂತಹವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಲಾಗುವುದು. ಕೆ.ಮಂಜುನಾಥ್ ತಹಸೀಲ್ದಾರ್ ಕೊರಟಗೆರೆಹೊಳವನಹಳ್ಳಿ ಸೇವಾ ಕೇಂದ್ರದಲ್ಲಿ ಸರ್ಕಾರಿ ಯೋಜನೆಗಳಿಗೆ ಕನ್ನ: ಹೊಳವನಹಳ್ಳಿ ಗ್ರಾಮದ ಎಸ್.ಬಿ.ಐ ಬ್ಯಾಂಕ್ ಹತ್ತಿರ ಇರುವ ಗ್ರಾಹಕರ ಸೇವಾ ಕೇಂದ್ರದಲ್ಲಿ ಸಂಧ್ಯಾ ಸುರಕ್ಷಾ ಯೋಜನೆಗಾಗಿ ಬರುವ ವ್ಯಕ್ತಿ ವಯಸ್ಸನ್ನು ಹೆಚ್ಚಿಗೆ ಮಾಡಿ ಸರ್ಕಾರದ ಯೋಜನೆಗಳಿಗೆ ಕನ್ನ ಹಾಕುತ್ತಿರುವುದು ಬೆಳಕಿಗೆ ಬಂದಿದೆ. ಹೊಳವನಹಳ್ಳಿ ನಾಡಕಚೇರಿಯಲ್ಲಿ ಇಂತಹ ಪ್ರಕರಣಗಳು ಬೆಳಕಿಗೆ ಬಂದಿದ್ದು, ಇಲ್ಲಿನ ಉಪ ತಹಸೀಲ್ದಾರ್ ಅವರು ಸರಿಯಾದ ದಾಖಲೆಗಳನ್ನ ಪರಿಶೀಲಿಸದೆ ಮಂಜೂರು ಮಾಡುತ್ತಿರುವುದು ಹಲವು ಅನುಮಾನಕ್ಕೆ ಕಾರಣವಾಗಿದೆ.