ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರುಮೈಸೂರು ಲಿಟರರಿ ಫೋರಂ ಚಾರಿಟಬಲ್ ಟ್ರಸ್ಟ್ ಮತ್ತು ಮೈಸೂರು ಬುಕ್ ಕ್ಲಬ್ಸ್ ವತಿಯಿಂದ ಜು. 6 ಮತ್ತು 7 ರಂದು ನಗರದ ಸದರ್ನ್ ಸ್ಟಾರ್ ಹೊಟೇಲ್ ನಲ್ಲಿ ಮೈಸೂರು ಸಾಹಿತ್ಯ ಸಂಭ್ರಮ ಆಯೋಜಿಸಲಾಗಿದೆ.ಜು. 6 ರಂದು ಬೆಳಗ್ಗೆ 10.15ಕ್ಕೆ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಈ ಸಂಭ್ರಮಕ್ಕೆ ಚಾಲನೆ ನೀಡುವರು. ಚಲನಚಿತ್ರ ನಟ ರಮೇಶ್ ಅರವಿಂದ್ ಅತಿಥಿಯಾಗಿ ಪಾಲ್ಗೊಳ್ಳುವರು ಎಂದು ಟ್ರಸ್ಟ್ ನ ಅಧ್ಯಕ್ಷೆ ಶುಭಾ ಸಂಜಯ್ ಅರಸ್ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.ಇಂಗ್ಲಿಷ್ ಗೋಷ್ಠಿಯನ್ನು ಪ್ರಮೋದಾದೇವಿ ಒಡೆಯರ್ ಉದ್ಘಾಟಿಸಲಿದ್ದು, ಪರಿಸರ ತಜ್ಞ ಮತ್ತು ನಟ ಸುರೇಶ್ ಹೆಬ್ಳೀಕರ್ ಗೌರವ ಅತಿಥಿಯಾಗಿ ಪಾಲ್ಗೊಳ್ಳುವರು. ಲೇಖಕ ಮತ್ತು ಉದ್ಯಮಿ ಅರೂನ್ ರಾಮನ್ ಪಾಲ್ಗೊಳ್ಳುವರು.ಈ ಸಂಭ್ರಮದ ಇಂಗ್ಲಿಷ್ ಗೋಷ್ಠಿಯಲ್ಲಿ ಗ್ರಾಮ್ ಸಂಸ್ಥೆಯ ಸಂಸ್ಥಾಪಕ ಡಾ. ಬಾಲಸುಬ್ರಮಣ್ಯಂ ಅವರ ಪವರ್ ವಿತಿನ್ ನರೇಂದ್ರಮೋದಿ ಕೃತಿಯನ್ನು ಲೇಖಕ ಡಾ. ವಿಕ್ರಂ ಸಂಪತ್ ಬಿಡುಗಡೆಗೊಳಿಸುವರು. ಎಕ್ಸೆಲ್ ಸಾಫ್ಟ್ನ ಚೇರ್ಮನ್ ಸುಧನ್ವ ಧನಂಜಯ್ ಮೊದಲ ಪ್ರತಿಯನ್ನು ಸ್ವೀಕರಿಸುವರು.ಜು. 6 ರಂದು ಉದ್ಘಾಟನೆ ಬಳಿಕ ರಮೇಶ್ ಅರವಿಂದ್ ಅವರು ಬೆಳ್ಳಿತೆರೆಯಿಂದ ಬರವಣಿಗೆಗೆ: ಪ್ರೀತಿಯಿಂದ ರಮೇಶ್ ಕಾರ್ಯಕ್ರಮ ನಡೆಸಿಕೊಡುವರು. ಕಾಡು-ನಾಡು- ಕಾಪಾಡು ಸಾಹಿತ್ಯ ಸಿನಿಮಾ ಮತ್ತು ಪರಿಸರ ಚಿಂತನೆ ಕುರಿತ ವಿಚಾರ ಸಂಕಿರಣದಲ್ಲಿ ಸುರೇಶ್ಹೆಬ್ಲಿಕರ್, ಶಶಿಧರ ಹಾಲಾಡಿ, ಲಕ್ಷ್ಮೀಕಾಂತ ರಾಜೇ ಅರಸ್ ಪಾಲ್ಗೊಳ್ಳುವರು.
ಸಿರಿಧಾನ್ಯಗಳ ಸರದಾರ ಸುಸ್ಥಿರ ಬದುಕನ್ನು ಬಾಳುವುದು ಹೇಗೆ ವಿಷಯ ಕುರಿತು ಪದ್ಮಶ್ರೀ ಡಾ. ಖಾದರ್ ವಲ್ಲಿ ದೂದೇಕುಲ ಮಾತನಾಡುವರು. ಮಧ್ಯಾಹ್ನ ಸುದ್ದಿ ಸರ್ಕಸ್ಗಳ ನಡುವೆ ಮಾಧ್ಯಮಗಳ ಜವಾಬ್ದಾರಿಗಳು ಕುರಿತ ವಿಚಾರ ಸಂಕಿರಣದಲ್ಲಿ ಹಿರಿಯ ಪತ್ರಕರ್ತರಾದ ರವೀಂದ್ರ ಭಟ್ಟ, ಅಂಶಿ ಪ್ರಸನ್ನಕುಮಾರ್, ಧರ್ಮೇಂದ್ರಕುಮಾರ್ ಪಾಲ್ಗೊಳ್ಳುವರು. ಸರೋದ್ಮಾಂತ್ರಿಕನ ಸುಮಧುರ ನೆನಪುಗಳ ಕುರಿತು ಸುರೇಶ್ ಹೆಬ್ಲೀಕರ್, ರೂಮಿ ಹರೀಶ್ ಮತ್ತು ಕೃಷ್ಣ ಮನವಳ್ಳಿ ಮಾತನಾಡುವರು. ಕನ್ನಡ ಕಾವ್ಯ ಕಣಜ ನಾಟಕವನ್ನು ಮಂಡ್ಯ ರಮೇಶ್ ನಿರ್ದೇಶನದಲ್ಲಿ ಪ್ರದರ್ಶಿಸಲಾಗುವುದು ಎಂದರು.7 ರಂದು ಬೆಳಗ್ಗೆ ಏಕವ್ಯಕ್ತಿ ತಾಳಮದ್ದಳೆಯನ್ನು ಕೆರೆಹೊಂಡ ದಿವಾಕರ ಹೆಗಡೆ ತಂಡದವರು ಪ್ರಸ್ತುತಪಡಿಸುವರು. ರಾಷ್ಟ್ರಪ್ರಶಸ್ತಿಗಳ ಸುರಿಮಳೆ ಕಾಸರವಳ್ಳಿ ಮಾಯಾಲೋಕ ಕುರಿತು ಗಿರೀಶ್ ಕಾಸರವಳ್ಳಿ, ದೀಪಾ ರವಿಶಂಕರ್, ಗೋಪಾಲಕೃಷ್ಣ ಪೈ ಪಾಲ್ಗೊಳ್ಳುವರು. ಭಾಷಾ ಪಾಂಡಿತ್ಯ ಸೃಜನಶೀಲತೆಯನ್ನು ಮಸಕು ಮಾಡುವುದೇ? ವಿಷಯ ಕುರಿತು ಕಬ್ಬಿನಾಲೆ ವಸಂತ ಭಾರದ್ವಾಜ್ ಮಾತನಾಡುವರು.
ನಗಿಸುವವನ ಮನದ ಮಾತಿನಲ್ಲಿ ಗಂಗಾವತಿ ಪ್ರಾಣೇಶ್, ಡಾ. ಮಾಧುರಿ ಕುಲಕರ್ಣಿ ಪಾಲ್ಗೊಳ್ಳುವರು. ಅಂತರ್ಜಾಲ ಯುಗದಲ್ಲಿ ಸಂಬಂಧಗಳ ಸುಳಿಗಳು ಕುರಿತು ಉಷಾ ನರಸಿಂಹನ್, ಬಿ.ಆರ್. ನಾಗರತ್ನ, ಎನ್. ಸಂಧ್ಯಾರಾಣಿ, ವಸುಮತಿ ಉಡುಪ ಮಾತನಾಡುವರು. ಆನ್ಲೈನ್ ಸಂಬಂಧಗಳ ಸಮಾಜದಲ್ಲಿ ಕವನಗಳ ಪ್ರಸ್ತುತತೆ ಕುರಿತು ಎಚ್.ಎಸ್. ಶಿವಪ್ರಕಾಶ್, ಡಾ.ಬಿ.ಆರ್. ಶ್ರುತಿ, ಮಧುರಾಣಿ, ಅರೀಫ್ರಾಜ, ರಾಜೇಂದ್ರ ಪ್ರಸಾದ್ ಪಾಲ್ಗೊಳ್ಳುವುದಾಗಿ ಅವರು ಹೇಳಿದರು.ಅಜ್ಞಾತ ಅಲೆಮಾರಿ ಕಲಾವಿದರ ಜತೆಗೆ 60 ನಿಮಿಷಗಳು ಕಾರ್ಯಕ್ರಮದಲ್ಲಿ ಶಿಳ್ಳೆಕ್ಯಾತರ ಮಂಜುನಾಥ್, ಹೆಳವರಸೊಲ್ಲಿನ ಮಲ್ಲಯ್ಯ ಮ್ಯೂಜಿಕ್, ಕಲಾವಿದ ಸಯ್ಯದ್ ಮೌಲಾ, ದೊಂಬರ ನರಸಿಂಹ ಮತ್ತು ರಾಣಿ ಮೊದಲಾದವರು ಪಾಲ್ಗೊಳ್ಳಲಿದ್ದು, ಅಬ್ದುಲ್ರಶೀದ್ ಕಾರ್ಯಕ್ರಮ ನಡೆಸಿಕೊಡುವರು.
ಪ್ರಕಾಶನ ಕಲೆ- ಓದುಗರ ಮತ್ತು ಲೇಖಕರ ನಡುವಿನ ಕೊಂಡಿ ವಿಷಯದಲ್ಲಿ ಜಮೀಲ್ ಸಾವಣ್ಣ, ಪ್ರತಿಭಾ ಛಾಯಾಪತಿ, ನಿಂಗರಾಜು ಚಿತ್ತಣ್ಣನವರ್, ಅಭಿರುಚಿ ಗಣೇಶ್, ಮೀನಾ ಮೈಸೂರು ಮಾತನಾಡುವರು. ಭಾಷಾಂತರ ಸಾಂಸ್ಕೃತಿಕ ಸಂಬಂಧಗಳ ಜಾಲತಾಣದ ಪಾಸ್ ವರ್ಡ್ ಕುರಿತು ಡಾ. ಪ್ರಧಾನ ಗುರುದತ್ತ ಮಾತನಾಡುವರು. ವಿಕ್ರಂ ಚದುರಂಗ, ಧರ್ಮೇಂದ್ರ ಕುಮಾರ್ ಪಾಲ್ಗೊಳ್ಳುವರು. ಸಮಾಜ ಪರ ಪೊಲೀಸ್ ಕುರಿತು ಐಪಿಎಸ್ ಅಧಿಕಾರಿ ರವಿ ಚನ್ನಣ್ಣನವರ್ ಮಾತನಾಡುವರು.ಇಂಗ್ಲಿಷ್ ಆವೃತ್ತಿಯ ಗೋಷ್ಠಿಗಳಲ್ಲಿ ಅಶ್ವಿನಿ ಸಾಂಘಿ, ಗಿರೀಶ್ಕಾರಸವಳ್ಳಿ, ಇತಿಹಾಸಕಾರ ವಿಕ್ರಮ್ ಸಂಪತ್, ಅರೂನ್ ರಾಮನ್, ರಾಜೇಶ್ ರಾಮಚಂದರ್, ಶಾಂತನು ರಾಯ್ಚೌಧರಿ, ಮೈಥಿಲಿ ರಾವ್, ಬಾಲಾಜಿ ವಿಠಲ್, ಶಾಭಾ ನಾರಾಯಣ್, ಮೋನಿಕಾ ಮೊನಾಲಿಸ್ಟ್, ವಿಜಯ್ ಬಾಲನ್, ಶಶಿಕಲಾ ರಾಮನಾಥ್, ರುಗ್ಮಿನಿ ಪ್ರಭಾಕರ್, ಕವಿತಾ ರತ್ನ, ಸೋನ್ಯ ಜೆ. ನಾಯರ್, ಸೋನಾಲಿ ಪಟ್ನಾಯಕ್, ಅನುಜಾ ಚಂದ್ರಮೌಳಿ, ರವಿ ಜೋಷಿ, ನಿಖಿಲ್ಜೆ. ಆಳ್ವಾ, ಕೃಷ್ಣನ್ಶ್ರೀನಿವಾಸನ್, ಸೋನಾಜಿ ಸಬರ್ವಾಲ್ ಮೊದಲಾದವರು ಪಾಲ್ಗೊಳ್ಳುವುದಾಗಿ ಅವರು ವಿವರಿಸಿದರು.
ಇದೇ ವೇಳೆ ಲಿಟರರಿ ಫೆಸ್ಟ್ ನ ಪೋಸ್ಟರ್ಬಿಡುಗಡೆಗೊಳಿಸಲಾಯಿತು.ಸುದ್ದಿಗೋಷ್ಠಿಯಲ್ಲಿ ಶ್ಯಾಮ್ ಚೆರಿಯನ್, ಸಿ.ಆರ್. ಹನುಮಂತ್, ದಿವ್ಯಶ್ರೀ, ಸುಚಿತಾ ಇದ್ದರು.