ಪಾಂಡವಪುರ ತಾಲೂಕಿನ ಸಿಂಗ್ರೀಗೌಡನಕೊಪ್ಪಲು ಗ್ರಾಮದ ನಿವಾಸಿಯಾದ ನಟ ಸಿಂಗ್ರೀಗೌಡ ಅವರು ತಿಥಿ ಸಿನಿಮಾ ಮೂಲಕ ಕನ್ನಡ ಸಿನಿಮಾರಂಗಕ್ಕೆ ಪ್ರವೇಶ ಮಾಡಿದರು. ತಿಥಿ ಸಿನಿಮಾದಲ್ಲಿ ಸಂಚುರಿಗೌಡ ಎಂಬ ಪಾತ್ರದ ಮೂಲಕ ಎಲ್ಲರ ಮೆಚ್ಚುಗೆ ಗಳಿಸಿದ್ದರು. ಬಳಿಕ ತರ್ಲೆವಿಲೇಜ್ ಸೇರಿದಂತೆ ಹಲವಾರು ಸ್ಮಾಟ್‌ರ್ ಮೂವಿಗಳಲ್ಲಿ ನಟಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಪಾಂಡವಪುರ
ಅಂತಾರಾಷ್ಟ್ರೀಯ ಪ್ರಶಸ್ತಿ ಪಡೆದ ಕನ್ನಡದ ‘ತಿಥಿ’ ಸಿನಿಮಾದ ನಟ ಸಿಂಗ್ರೀಗೌಡ (101) ಅವರು ವಯೋಸಹಜ ಕಾಯಿಲೆಯಿಂದ ಭಾನುವಾರ ರಾತ್ರಿ ನಿಧನರಾದರು.ಪಾಂಡವಪುರ ತಾಲೂಕಿನ ಸಿಂಗ್ರೀಗೌಡನಕೊಪ್ಪಲು ಗ್ರಾಮದ ನಿವಾಸಿಯಾದ ನಟ ಸಿಂಗ್ರೀಗೌಡ ಅವರು ತಿಥಿ ಸಿನಿಮಾ ಮೂಲಕ ಕನ್ನಡ ಸಿನಿಮಾರಂಗಕ್ಕೆ ಪ್ರವೇಶ ಮಾಡಿದರು. ತಿಥಿ ಸಿನಿಮಾದಲ್ಲಿ ಸಂಚುರಿಗೌಡ ಎಂಬ ಪಾತ್ರದ ಮೂಲಕ ಎಲ್ಲರ ಮೆಚ್ಚುಗೆ ಗಳಿಸಿದ್ದರು. ಬಳಿಕ ತರ್ಲೆವಿಲೇಜ್ ಸೇರಿದಂತೆ ಹಲವಾರು ಸ್ಮಾಟ್‌ರ್ ಮೂವಿಗಳಲ್ಲಿ ನಟಿಸಿದ್ದಾರೆ. ಇತ್ತೀಚೆಗೆ ಸೊಂಟದ ಮೂಳೆ ಮುರಿದು ಅನಾರೋಗ್ಯಕ್ಕೆ ಒಳಗಾಗಿದ್ದರು. ಚಿಕಿತ್ಸೆ ಫಲಕಾರಿಯಾಗಿದೆ ಭಾನುವಾರ ರಾತ್ರಿ ನಿಧನರಾದರು. ಮೃತರಿಗೆ ಕೆಂಪಮ್ಮ, ಬೆಟ್ಟಮ್ಮ, ಸಣ್ಣತಾಯಮ್ಮ ಹಾಗೂ ಕೆಂಪೇಗೌಡ ಮಕ್ಕಳು ಸೇರಿದಂತೆ ಅಪಾರ ಬಂಧುಗಳನ್ನು ಅಗಲಿದ್ದಾರೆ. ಹಲವು ಗಣ್ಯರು ಅಂತಿಮ ದರ್ಶನಪಡೆದರು, ಸೋಮವಾರ ಮಧ್ಯಾಹ್ನ ಗ್ರಾಮದ ಸ್ವಜಮೀನಿನಲ್ಲಿ ಅಂತ್ಯಸಂಸ್ಕಾರ ನಡೆಯಿತು.6 ತಿಂಗಳಿಂದ ನಾಪತ್ತೆಯಾಗಿದ್ದ ವ್ಯಕ್ತಿ ಶವವಾಗಿ ಪತ್ತೆ
ಕೆ.ಎಂ.ದೊಡ್ಡಿ:ಕಳೆದ ಆರು ತಿಂಗಳಿಂದ ನಾಪತ್ತೆಯಾಗಿದ್ದ ವ್ಯಕ್ತಿಯೊಬ್ಬ ಶವವಾಗಿ ಅಸ್ಥಿಪಂಜರ ರೂಪದಲ್ಲಿ ಬಾಡಿಗೆಗೆ ಇದ್ದ ಮನೆಯಲ್ಲಿ ಪತ್ತೆಯಾಗಿರುವ ಘಟನೆ ಸಮೀಪದ ದೊಡ್ಡರಸಿನಕೆರೆಯಲ್ಲಿ ನಡೆದಿದೆ.
ಮೃತ ವ್ಯಕ್ತಿಯನ್ನು ಮಹದೇವಸ್ವಾಮಿ (55) ಎಂದು ಗುರುತಿಸಲಾಗಿದೆ. ಗ್ರಾಮದ ಚಿಕ್ಕಮಾಯಿಗಯ್ಯ ಎಂಬುವವರ ಮನೆಯಲ್ಲಿ ಮಹದೇವಸ್ವಾಮಿ ಪತ್ನಿ ಮತ್ತು ಮಕ್ಕಳೊಂದಿಗೆ ಕಳೆದ 1 ವರ್ಷದಿಂದ ಬಾಡಿಗೆಗೆ ವಾಸವಿದ್ದರು. ಒಂದು ವರ್ಷದ ಹಿಂದೆ ದಾಂಪತ್ಯ ಜಗಳದಿಂದ ಪತ್ನಿ ದೂರವಾಗಿದ್ದರು.ಕಳೆದ ಆರು ತಿಂಗಳಿಂದ ಮನೆಯ ಬಾಗಿಲಿನ ಬೀಗ ಹಾಕಲಾಗಿತ್ತು. ಮನೆಯ ಮಾಲೀಕರು ಮನೆಯ ಬೀಗ ಹಾಕಿದ್ದ ಹಿನ್ನೆಲೆಯಲ್ಲಿ ಮಹದೇವಸ್ವಾಮಿ ಮನೆಯನ್ನು ಖಾಲಿ ಮಾಡಿರಬಹುದು ಎಂದು ಭಾವಿಸಿದ್ದರು. ಅಲ್ಲದೇ, ಮನೆಯ ಮಾಲೀಕರು ಭಾರತೀನಗರದಲ್ಲಿ ವಾಸವಿದ್ದರಿಂದ ಮನೆಯ ಬಗ್ಗೆ ಗಮನಹರಿಸಿರಲಿಲ್ಲ ಎನ್ನಲಾಗಿದೆ.
ಗ್ರಾಮದಲ್ಲಿ ಏಳೂರಮ್ಮನ ಹಬ್ಬದ ಹಿನ್ನೆಲೆಯಲ್ಲಿ ಗ್ರಾಮಕ್ಕೆ ಬಂದಿದ್ದ ಮನೆ ಮಾಲೀಕ ಮನೆಯನ್ನು ಸ್ವಚ್ಛ ಮಾಡಲು ಬಾಗಿಲು ಹೊಡೆದಾಗ ಮಹದೇವಸ್ವಾಮಿ ಅವರ ಶವ ಅಸ್ಥಿಪಂಜರದ ಸ್ಥಿತಿಯಲ್ಲಿ ಪತ್ತೆಯಾಗಿದೆ.ಈ ಬಗ್ಗೆ ಕೆ.ಎಂ.ದೊಡ್ಡಿ ಪೊಲೀಸರಿಗೆ ಮಾಹಿತಿ ನೀಡಿದ್ದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಪೊಲೀಸ್ ಇನ್ಸ್ ಪೆಕ್ಟರ್ ಅನಿಲ್ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.