ಕನ್ನಡ ಭಾಷೆ ಮಾತ್ರವಲ್ಲ, ಅದು ಪ್ರಾದೇಶಿಕ ಅಸ್ಮಿತೆ

| Published : Nov 02 2024, 01:19 AM IST / Updated: Nov 02 2024, 01:20 AM IST

ಸಾರಾಂಶ

ಕನ್ನಡ ನಾಡು-ನುಡಿ, ಸಾಹಿತ್ಯ-ಸಂಸ್ಕೃತಿ, ನೆಲ-ಜಲ, ಕೃಷಿ-ಕೈಗಾರಿಕೆ , ಅನ್ನ, ಅಕ್ಷರ ಮತ್ತು ಆರೋಗ್ಯ ಮುಂತಾಗಿ ಕರ್ನಾಟಕದ ಸರ್ವಾಂಗೀಣ ವಿಕಾಸವನ್ನು ಕುರಿತು ಚಿಂತಿಸಬೇಕಾದ ಸಂದರ್ಭ ಇದಾಗಿದೆ. ನಾಡುನುಡಿಗೆ ಸಂಬಂಧಿಸಿದಿಸಿದಂತೆ ನಮ್ಮಹಿರಿಯರ ಕನಸುಗಳು ಪೂರ್ಣ ನನಸಾಗಿಲ್ಲ. ಅಧಿಕಾರಿಗಳು ಮತ್ತು ಸಿಬ್ಬಂದಿ ಜನಭಾಷೆಲ್ಲಿ ಆಡಳಿತ ನಡೆಸಬೇಕು.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ನಾಡು-ನುಡಿ, ನೆಲ-ಜಲ, ಹಾಗೂ ಸಾಹಿತ್ಯ-ಸಂಸ್ಕೃತಿಗಳ ಪರಂಪರೆ ನಡೆದು ಬಂದ ದಾರಿಯನ್ನು ಹಾಗೂ ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಯ ಪರಂಪರೆಯನ್ನು ಕಟ್ಟಿ ಬೆಳೆಸಿದ ಮಹನೀಯರನ್ನು ಸ್ಮರಿಸಿ ಗೌರವಿಸು ವುದು ನಮ್ಮ ಕರ್ತವ್ಯ.ಎಲ್ಲಕ್ಕಿಂತ ಮುಖ್ಯವಾಗಿ ಕನ್ನಡ ಒಂದು ಭಾಷೆ ಮಾತ್ರವಲ್ಲ , ಅದು ನಮ್ಮ ಪಾದೇಶಿಕತೆಯ ಭಾವನೆ ಎಂದು ಉನ್ನತ ಶಿಕ್ಷಣ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್‌ ಹೇಳಿದರು.

ನಗರದ ಸರ್.ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಶುಕ್ರವಾರ ಜಿಲ್ಲಾಡಳಿತದ ವತಿಯಿಂದ ಆಯೋಜಿಸಲಾಗಿದ್ದ 69 ಕನ್ನಡ ರಾಜ್ಯೋತ್ಸವದಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ,ಪಥ ಪರಿವೀಕ್ಷಣೆ ಮತ್ತು ಪಥ ಸಂಚಲನ ಗೌರವ ರಕ್ಷೆ ಸ್ವೀಕರಿಸಿ ಮಾತನಾಡಿದರು.

ರಾಜ್ಯ ಭಾಷೆಯಲ್ಲೇ ಆಡಳಿತ

ಕನ್ನಡ ನಾಡು-ನುಡಿ, ಸಾಹಿತ್ಯ-ಸಂಸ್ಕೃತಿ, ನೆಲ-ಜಲ, ಕೃಷಿ-ಕೈಗಾರಿಕೆ , ಅನ್ನ, ಅಕ್ಷರ ಮತ್ತು ಆರೋಗ್ಯ ಮುಂತಾಗಿ ಕರ್ನಾಟಕದ ಸರ್ವಾಂಗೀಣ ವಿಕಾಸವನ್ನು ಕುರಿತು ಚಿಂತಿಸಬೇಕಾದ ಸಂದರ್ಭ ಇದಾಗಿದೆ. ನಾಡುನುಡಿಗೆ ಸಂಬಂಧಿಸಿದಿಸಿದಂತೆ ನಮ್ಮಹಿರಿಯರ ಕನಸುಗಳು ಪೂರ್ಣ ನನಸಾಗಿಲ್ಲ. ಸರ್ಕಾರದ ಎಲ್ಲ ಇಲಾಖೆಗಳು ಆಡಳಿತ ಮತ್ತು ಸಂವಹನವನ್ನು ಕನ್ನಡದಲ್ಲಿ ನಡೆಸಿ ಆಡಳಿತವನ್ನು ಜನತೆಗೆ ತಲುಪಿಸುವುದು ಅಪೇಕ್ಷಣೀಯ. ಅಧಿಕಾರಿಗಳು ಮತ್ತು ಸಿಬ್ಬಂದಿ ಜನಭಾಷೆಲ್ಲಿ ಆಡಳಿತ ನಡೆಸಬೇಕೆಂದು ವಿನಂತಿಸುತ್ತೇನೆ ಎಂದರು.

ಭಾಷಾ ಸಾಮರಸ್ಯಕ್ಕೆ ಮಾದರಿ:

ನಮ್ಮ ಜಿಲ್ಲೆ ಆಂದ್ರಪ್ರದೇಶದ ಗಡಿಯಾಗಿದ್ದು ಜನಜೀವನದಲ್ಲಿ ತೆಲುಗಿನ ಪ್ರಭಾವವಿದ್ದರೂ ನಾವು ತೆಲುಗು ಭಾಷೆಯನ್ನು ವಿರೋಧಿಸಬೇಕಾಗಿಲ್ಲ. ಭಾಷೆಗಳು ಬೇರೆಯಾದರೂ ನಮ್ಮೆಲ್ಲರ ಭಾವಗಳು ಒಂದೇ ಆಗಬೇಕು. ಕನ್ನಡದ ಸಹೋದರ ಬಾಷೆಗಳು ಮತ್ತುಸಂಸ್ಕೃತಿಗಳ ನಡುವೆ ಸಾಮರಸ್ಯ ಇರಬೇಕು-ಸಂಘರ್ಷ ಬೇಡ ಎಂಬ ನಿಟ್ಟಿನಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯ ಜನರುಭಾಷಾ ಸಾಮರಸ್ಯಕ್ಕೆ ಮಾದರಿಯಾಗಿದ್ದಾರೆ ಎಂದರೆ ತಪ್ಪಾಗಲಾರದು. ನಮ ಅಗತ್ಯಕ್ಕೆ ತಕ್ಕಂತೆ ಕನ್ನಡದ ಜೊತೆಗೆ ಸಹೋದರ ಭಾಷೆಗಳ ಕಲಿತು ಬಳಸೋಣ ಆದರೆ ಕನ್ನಡಭಾಷೆಯನ್ನು ತಾಯಿಯಂತೆ ಗೌರವಿಸಿ ಕನ್ನಡ ಭಾಷೆಯಲ್ಲಿಯೇ ಜೀವಿಸೋಣ ಎಂದರು.

ರಾಜ್ಯದ ರೇಷ್ಮ ಬೆಳೆಗಾರರಿಗೆ ಅನುಕೂಲವಾಗುವಂತೆ ದೇಶದಲ್ಲಿಯೇ ಅತಿ ಹೆಚ್ಚು ರೇಷ್ಮೆ ಗೂಡು ವಹಿವಾಟು ನಡೆಯುವ ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಹೈಟೆಕ್ ರೇಷ್ಮೆ ಗೂಡು ಮಾರುಕಟ್ಟೆಯನ್ನು 200 ಕೋಟಿ ವೆಚ್ಚದಲ್ಲಿ ಸುಮಾರು 12.36 ಎಕರೆ ವಿಸ್ತೀರ್ಣದಲ್ಲಿ ನಿರ್ಮಿಸಲು ಕ್ರಮವಹಿಸಲಾಗಿದ್ದು ಶೀಘ್ರದಲ್ಲೇ ಮುಖ್ಯಮಂತ್ರಿಗಳಿಂದ ಶಿಲಾನ್ಯಾಸ ಮಾಡಿಸಲಾಗುವುದು ಎಂದರು.

ಕನ್ನಡ ಭವನ ಶೀಘ್ರದಲ್ಲೇ ಉದ್ಘಾಟನೆ

ಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರದಲ್ಲಿ ಸುಮಾರು 17.5 ಕೋಟಿ ರೂಗಳ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಜಿಲ್ಲಾ ಕನ್ನಡ ಭವನ (ಜಿಲ್ಲಾ ರಂಗಮಂದಿರ) ನಿರ್ಮಾಣ ಕಾಮಗಾರಿಯು ಶರವೇಗ ಪಡೆದುಕೊಂಡಿದ್ದು, ಶೀಘ್ರದಲ್ಲೇ ಲೋಕಾರ್ಪಣೆ ಮಾಡಲು ಯೋಜಿಸಲಾಗಿದೆ.ಮುಂದಿನ ಹತ್ತು ತಿಂಗಳಲ್ಲಿ ಜಿಲ್ಲಾಸ್ಪತ್ರೆಗೆ ಎಂ.ಆರ್.ಐ ಸಿ.ಟಿ ಸ್ಕ್ಯಾನ್, ಎಕ್ಸ್ ರೇ, ಅಲ್ಟ್ರಾಸೌಂಡ್ ಸ್ಕಾನಿಂಗ್, ಎಕೋ, ಟಿಎಂಟಿ ಹಾಗೂ ಎಲ್ಲ ರೀತಿಯ ರಕ್ತ ಪರೀಕ್ಷೆಗಳನ್ನು ಮಾಡುವ ಸೌಲಭ್ಯ ನೀಡಲಾಗುವುದು ಎಂದು ಹೇಳಿದರು.ಶಾಸಕ ಪ್ರದೀಪ್ ಈಶ್ವರ್ ಮಾತನಾಡಿ, ಜಗತ್ತಿನ ಅತ್ಯಂತ ಹಳೆಯ ಭಾಷೆಗಳಲ್ಲಿ ಒಂದಾದ ಕನ್ನಡಕ್ಕೆ 2500 ವರ್ಷಗಳ ಇತಿಹಾಸವಿದೆ ಜಗತ್ತಿನ ಮೂರನೇ ಅತ್ಯಂತ ಹಳೇಯ ಭಾಷೆ ಕನ್ನಡ ಎಂಬುದೇ ನಮ್ಮೆಲ್ಲರ ಹೆಮ್ಮೆ.ಜಗತ್ತಿಲ್ಲಿ ಅತ್ಯಂತ ಹೆಚ್ಚು ಮಾತನಾಡುವ ಭಾಷೆಗಳ ಪೈಕಿ ಕನ್ನಡ 29ನೇ ಸ್ಥಾನದಲ್ಲಿದೆ. ಕನ್ನಡ ಭಾಷೆಗೆ ಅಭಿಜಾತಭಾಷೆ ಎಂದು ಕೇಂದ್ರ ಸರ್ಕಾರ ಗೌರವ ನೀಡಿದೆ. ದೇಶದಲ್ಲೇ ಎಂಟು ಪ್ರತಿಷ್ಠಿತ ಜ್ಞಾನ ಪೀಠ ಪುರಸ್ಕೃತರು ನಮ್ಮವರು ಎಂಬುದು ದೇಶದ ಸಾಹಿತ್ಯದಲ್ಲಿ ನಮ್ಮ ಮೌಲ್ಯ ಹೆಚ್ಚಿಸಿದೆ.ಅಲ್ಲದೇ ದೇಶದ ಭಾಷೆಗಳಲ್ಲಿ ನಾಲ್ಕಯ ಸ್ಥಾನ ಕನ್ನಡಕ್ಕಿದೆ ಎಂಬುದು ನಮ್ಮ-ನಿಮ್ಮೆಲ್ಲರ ಹೆಮ್ಮೆ ಎಂದರು. ಗಮನಸೆಳೆದ ಪೊಲೀಸ್‌ ಕವಾಯತು

ವಿವಿಧ ಇಲಾಖೆಗಳು,ತಂಡಗಳು ಹಾಗೂ ಪೊಲೀಸ್ ಕವಾಯತು ಪಥ ಸಂಚಲನ ಗಮನ ಸೆಳೆಯಿತು ಈ ಬಾರಿಯ ಜಿಲ್ಲಾ ಕನ್ನಡ ರಾಜ್ಯೋತ್ಸವದ ಪ್ರಶಸ್ತಿಗೆ ಆಯ್ಕೆಯಾದ ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಪಿ.ಎನ್‌. ರವೀಂದ್ರ, ಜಿಪಂ ಸಿಇಒ ಪ್ರಕಾಶ್ ಜಿ.ಟಿ.ನಿಟ್ಟಾಲಿ, ಎಸ್ಪಿ ಕುಶಾಲ್ ಚೌಕ್ಸೆ, ನಗರಸಭೆ ಅಧ್ಯಕ್ಷ ಎ.ಗಜೇಂದ್ರ, ಉಪಾಧ್ಯಕ್ಷ ಜೆ.ನಾಗರಾಜ್, ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ರಮೇಶ್, ಎಡಿಸಿ ಡಾ. ಎನ್. ಭಾಸ್ಕರ್, ಎಎಸ್ಪಿ ರಾಜಾ ಇಮಾಂ ಖಾಸಿಂ, ಎಸಿ ಡಿ.ಹೆಚ್.ಅಶ್ವಿನ್, ಡಿಡಿಪಿಐ ಬೈಲಾಂಜಿನೇಯ, ತಹಸೀಲ್ದಾರ್ ಅನಿಲ್,ಡಿವೈಎಸ್ ಪಿ ಗಳಾದ ಎಸ್.ಶಿವಕುಮಾರ್‌, ನಾಗೇಂದ್ರಪ್ರಸಾದ್ ಮತ್ತಿತರರು ಇದ್ದರು.