ನಾಳೆಯೊಳಗೆ ನಾಮಫಲಕಗಳಲ್ಲಿ ಕನ್ನಡ ಕಡ್ಡಾಯ

| Published : Feb 09 2025, 01:16 AM IST

ನಾಳೆಯೊಳಗೆ ನಾಮಫಲಕಗಳಲ್ಲಿ ಕನ್ನಡ ಕಡ್ಡಾಯ
Share this Article
  • FB
  • TW
  • Linkdin
  • Email

ಸಾರಾಂಶ

ಕರ್ನಾಟಕದಲ್ಲಿ ಕನ್ನಡಕ್ಕೆ ಮೊದಲ ಆದ್ಯತೆ ನೀಡಿರುವುದರಿಂದ ಹಾಗೂ ರಾಜ್ಯದಲ್ಲಿ ಹುಟ್ಟಿ ಬೆಳೆಯುತ್ತಿರುವ ನಾವೆಲ್ಲರೂ ಕನ್ನಡ ಭಾಷೆಗೆ ಮೊದಲ ಅದ್ಯತೆಯನ್ನು ನೀಡಬೇಕಾದ ಜವಾಬ್ದಾರಿಯನ್ನು ಹೊಂದಿರುವುದರಿಂದ ಕನ್ನಡದಲ್ಲಿಯೇ ವ್ಯವಹರಿಸಬೇಕು ಕನ್ನಡ ನಾಮಫಲಕಗಳನ್ನು ಹಾಕಬೇಕು.

ಕನ್ನಡಪ್ರಭ ವಾರ್ತೆ ಬಂಗಾರಪೇಟೆ

ಸರ್ಕಾರದ ಆದೇಶದಂತೆ ಪಟ್ಟಣದ ಎಲ್ಲಾ ಅಂಗಡಿಗಳು ಹಾಗೂ ಕಚೇರಿಗಳ ಮೇಲೆ ಶೇ.೬೦ ಕನ್ನಡದಲ್ಲಿಯೇ ಎಲ್ಲಾ ನಾಮಫಲಕಗಳನ್ನು ಫೆ. 10ರೊಳಗೆ ಕಡ್ಡಾಯವಾಗಿ ಅಳವಡಿಸಬೇಕು. ಕಡೆಗಣಿಸಿದರೆ ಅಂತಹ ಅಂಗಡಿಗಳ ಮಾಲೀಕರ ಮೇಲೆ ಕಾನೂನು ಕ್ರಮ ಕೈಗೋಳ್ಳಲಾಗುವುದು ಎಂದು ಪುರಸಭೆ ಮುಖ್ಯಾಧಿಕಾರಿ ವಿ.ಸತ್ಯನಾರಾಯಣ ಎಚ್ಚರಿಸಿದ್ದಾರೆ.ಪಟ್ಟಣದ ಪ್ರಮುಖ ಬಜಾರ್ ರಸ್ತೆಗಳಲ್ಲಿ ಸೇರಿದಂತೆ ಎಲ್ಲಾ ಅಂಗಡಿಗಳಿಗೆ,ಕಚೇರಿಗಳಿಗೆ ಪುರಸಭೆ ಸಿಬ್ಬಂದಿ ತೆರಳಿ ಎಲ್ಲೆಲ್ಲಿ ಶೇ. ೬ಒರಷ್ಟು ಕನ್ನಡ ನಾಮಫಲಗಳಿಲ್ಲವೋ ಅಂತಹ ಅಂಗಡಿ ಮಾಲೀಕರಿಗೆ ಎಚ್ಚರಿಕೆ ನೀಡಿ ಕೂಡಲೇ ನಾಮಫಲಗಳನ್ನು ಬದಲಾಯಿಸುವಂತೆ ಎಂದು ಎಚ್ಚರಿಕೆ ನೀಡಿದರು.

ರಾಜ್ಯದಲ್ಲಿ ಕನ್ನಡಕ್ಕೇ ಆದ್ಯತೆ

ಕರ್ನಾಟಕದಲ್ಲಿ ಕನ್ನಡಕ್ಕೆ ಮೊದಲ ಆದ್ಯತೆ ನೀಡಿರುವುದರಿಂದ ಹಾಗೂ ರಾಜ್ಯದಲ್ಲಿ ಹುಟ್ಟಿ ಬೆಳೆಯುತ್ತಿರುವ ನಾವೆಲ್ಲರೂ ಕನ್ನಡ ಭಾಷೆಗೆ ಮೊದಲ ಅದ್ಯತೆಯನ್ನು ನೀಡಬೇಕಾದ ಜವಾಬ್ದಾರಿಯನ್ನು ಹೊಂದಿರುವುದರಿಂದ ಕನ್ನಡದಲ್ಲಿಯೇ ವ್ಯವಹರಿಸಬೇಕು ಕನ್ನಡ ನಾಮಫಲಕಗಳನ್ನು ಹಾಕುವಂತೆ ತಾಕೀತು ಮಾಡಿದರು.ಕರ್ನಾಟಕದಲ್ಲಿ ವಾಸ ಮಾಡುವ ಕನ್ನಡಿಗರು ಸ್ವಾಭಿಮಾನಿಗಳಾಗಿರಬೇಕು ಹಾಗೂ ಇತರರಿಗೆ ಮಾದರಿಯಾಗಬೇಕಾಗಿದೆ. ವ್ಯಾಪಾರದಲ್ಲಿ ಮುನ್ನುಗ್ಗುವ ಆಸೆಗಾಗಿ ಕನ್ನಡ ಪ್ರೇಮವನ್ನು ಮರೆತು ವಿದೇಶಿ ಭಾಷೆಗಳಿಗೆ ಮನ್ನಣೆ ನೀಡಿದರೆ ಪುರಸಭೆಯಿಂದ ಅಗತ್ಯಕ್ರಮಕೈಗೊಳ್ಳಬೇಕಾಗುತ್ತದೆ. ಕನ್ನಡದಲ್ಲಿಯೇ ಎಲ್ಲಾ ನಾಮಫಲಕಗಳು ಸೇರಿದಂತೆ ಪ್ರತಿಯೊಂದು ವಿಚಾರವೂ ಕನ್ನಡದಲ್ಲಿಯೇ ಇರಬೇಕು ಎಂದು ಹೇಳಿದರು.

ಕಾನೂನು ಉಲ್ಲಂಘಿಸಿದರೆ ಕ್ರಮ

ಈಗಾಗಲೇ ಹಲವು ಬಾರಿ ವ್ಯಾಪಾರಿಗಳಿಗೆ ಈ ಬಗ್ಗೆ ತಿಳಿಸಿದ್ದರೂ ಕಡೆಗಣಿಸಲಾಗಿದೆ. ಇದನ್ನು ಮೀರಿದವರಿಗೆ ಪುರಸಭೆಯಿಂದ ನೀಡಿರುವ ಪರವಾನಿಗೆಯನ್ನು ರದ್ದುಪಡಿಸಿ ಸೂಕ್ತ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ಕರ್ನಾಟಕ ಸರ್ಕಾರದ ಆದೇಶದಂತೆ ಬಂಗಾರಪೇಟೆ ಪುರಸಭೆ ವ್ಯಾಪ್ತಿಯಲ್ಲಿ ವ್ಯಾಪಾರ, ಉದ್ದಿಮೆ, ಕೈಗಾರಿಕೆಗಳನ್ನು ನಡೆಸುತ್ತಿರುವವರು ಸಾರ್ವಜನಿಕರ ಮಾಹಿತಿಗಾಗಿ ನಾಮಫಲಕಗಳನ್ನು ಬರೆಸಿಕೊಂಡಿದ್ದಾರೆ. ಆದರೆ ಸರ್ಕಾರದ ಆದೇಶದಂತೆ ನಾಮಫಲಕಗಳಲ್ಲಿ ಕನ್ನಡ ಭಾಷೆಯಲ್ಲಿ ಶೇ.೬೦ ರಷ್ಟು ಬಾಕಿ ಉಳಿದ ಶೇ.೪೦ ರಷ್ಟು ಬೇರೆ ಭಾಷೆ ಬರೆಸಿ ಕೊಳ್ಳಬಹುದಾಗಿದೆ.ನಾಳೆಯವರೆಗೆ ಗಡುವು

ಸರ್ಕಾರದ ಆದೇಶದಂತೆ ಕ್ರಮವಹಿಸಲು ನಗರಸಭೆಯಿಂದ ಖುದ್ದಾಗಿ ಹಾಗೂ ಧ್ವನಿವರ್ಧಕಗಳ ಮೂಲಕ ಹಲವಾರು ಬಾರಿ ವ್ಯಾಪಕ ಪ್ರಚಾರ ನೀಡಲಾಗಿದೆ. ಆದರೆ ಇದಕ್ಕೆ ಸ್ಪಂದಿಸದೆ ಇನ್ನು ಹಳೆಯ ನಾಮಫಲಕಗಳನ್ನು ಇಟ್ಟುಕೊಂಡಿರುವುದನ್ನು ಪುರಸಭೆಯು ಗಂಭೀರವಾಗಿ ಪರಿಗಣಿಸಿದೆ, ಆದ ಕಾರಣ ಸರ್ಕಾರದ ಆದೇಶದಂತೆ ಶೇ.೬೦ ರಷ್ಟು ಕನ್ನಡ ಭಾಷೆಯಲ್ಲಿ ನಾಮಫಲಕಗಳನ್ನು ಫೆ.೧೦ ಒಳಗಾಗಿ ಸಂಬಂಧಿಸಿದವರು ಅಳವಡಿಸಿಕೊಳ್ಳಬೇಕು, ತಪ್ಪಿದ್ದಲ್ಲಿ ಸರ್ಕಾರದ ನಿಯಮದಂತೆ ಚಾಲ್ತಿಯಲ್ಲಿರುವ ಕಾನೂನಿನಂತೆ ಕ್ರಮವಹಿಸಲಾಗುವುದು ಎಂದು ಸತ್ಯನಾರಾಯಣ ತಿಳಿಸಿದ್ದಾರೆ.