ಅಂಗಡಿ ಮುಂಗಟ್ಟುಗಳ ಮುಂದೆ ಕನ್ನಡ ನಾಮಫಲಕ

| Published : Oct 26 2024, 12:56 AM IST

ಸಾರಾಂಶ

ಅಂಗಡಿ ಮುಂಗಟ್ಟುಗಳ ನಾಮಫಲಕದ ಮೇಲ್ಭಾಗದಲ್ಲಿ ಕನ್ನಡ ಭಾಷೆ ಶೇ.60 ರಷ್ಟು ಕಡ್ಡಾಯವಾಗಿ ಅಳವಡಿಕೆ ಸಂಬಂಧ ತಾಲೂಕು ಆಡಳಿತ, ಪುರಸಭೆ ವತಿಯಿಂದ ಹಾಗೂ ಕನ್ನಡಪರ ಸಂಘಟನೆಗಳಿಂದ ನಗರದ ಆಡಳಿತ ಸೌಧದಿಂದ ಕಾಲ್ನಡೆಗೆ ಮೂಲಕ ನಗರದಲ್ಲಿ ಜಾಗ್ರತಿ ಜಾಥಾ ನಡೆಯಿತು. ಜಾಗೃತಿ ಜಾಥಾಕ್ಕೆ ಎಸಿ ಅಬೀದ್‌ ಗದ್ಯಾಳ ಅವರು ಚಾಲನೆ ನೀಡಿದರು.

ಕನ್ನಡಪ್ರಭ ವಾರ್ತೆ ಇಂಡಿ

ನಗರದ ಆಡಳಿತ ಸೌಧದಿಂದ ಸಂಗೊಳ್ಳಿ ರಾಯಣ್ಣ, ಅಂಬೇಡ್ಕರ್‌ ವೃತ್ತ,ಮಹಾವೀರ ವೃತ್ತದ ಮೂಲಕ ಜಾಗೃತಿ ಜಾಥಾ ನಡೆಯಿತು. ಅಂಗಡಿ ಮಾಲೀಕರಿಗೆ ಕಡ್ಡಾಯವಾಗಿ ಶೇ.60 ರಷ್ಟು ಕನ್ನಡ ನಾಮಫಲಕಗಳನ್ನು ಅಳವಡಿಸಲು ಸೂಚಿಸಿದರು.ಎಸಿ ಅಬೀದ್‌ ಗದ್ಯಾಳ ಮಾತನಾಡಿ, ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ತಿದ್ದುಪಡಿ ವಿದೇಯಕ -2024ರ ಅನ್ವಯ ಅಂಗಡಿ ಮುಗ್ಗಟ್ಟುಗಳ ನಾಮಫಲಕದ ಮೇಲ್ಭಾಗದಲ್ಲಿ ಕನ್ನಡ ಭಾಷೆ ಶೇ. 60 ರಷ್ಟು ಕಡ್ಡಾಯವಾಗಿ ಅಳವಡಿಸಬೇಕು ಎಂದು ತಿಳಿಸಿದರು.ಅ.31 ರ ನಂತರ ಕನ್ನಡ ಭಾಷೆ ಒಳಗೊಳ್ಳದ ನಾಮಫಲಕಗಳನ್ನು ಮುಟ್ಟುಗೊಲು ಹಾಕಿ,ಸಂಬಂಧಿಸಿದ ಅಂಗಡಿ, ಸಂಸ್ಥೆಗಳ ಮೇಲೆ ಯಾವುದೇ ಮುಲಾಜಿಲ್ಲದೆ ಕ್ರಮ ವಹಿಸಲಾಗುತ್ತದೆ. ಕನ್ನಡ ನಾಮಫಲಕ ಅಳವಡಿಸದ ಅಂಗಡಿ ಮಾಲೀಕರಿಗೆ ನೋಟಿಸ್‌ ನೀಡಿ ಅ. 31 ರೊಳಗೆ ಕನ್ನಡ ನಾಮಫಲಕ ಅಳವಡಿಸಬೇಕು. ಯಾರು ಕನ್ನಡ ನಾಮಫಲಕ ಅಳವಡಿಸದ ಅಂಗಡಿ ಮಾಲೀಕರಿಗೆ ದಂಡ ಹಾಗೂ ಪರವಾನಿಗೆ ರದ್ದುಪಡಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.ತಹಸೀಲ್ದಾರ್‌ ಬಿ.ಎಸ್‌.ಕಡಕಬಾವಿ, ಪುರಸಭೆ ಮುಖ್ಯಾಧಿಕಾರಿ ಮಹಾಂತೇಶ ಹಂಗರಗಿ, ಕರವೇ ಅಧ್ಯಕ್ಷ ಬಾಳು ಮುಳಜಿ, ಮಹೇಶ ಹೂಗಾರ, ಅದೃಶ್ಯಪ್ಪ ವಾಲಿ, ಸುನೀಲಗೌಡ ಬಿರಾದಾರ, ಮಹಿಬೂಬ್‌ ಬೇನೂರ, ರಾಮಸಿಂಗ ಕನ್ನೊಳ್ಳಿ, ರಾಜು ಕುಲಕರ್ಣಿ, ನಜೀರ್‌ ಮುಲ್ಲಾ, ಎಲ್‌.ಎಸ್‌.ಸೋಮನಾಯಕ, ಚಂದು ಕಾಲೇಬಾಗ, ಅಜುರುದ್ದಿನ್‌ ಶೇಖ, ಅಸ್ಲಮ ಖಾದಿಮ, ಸಂತೋಷ ಚವ್ಹಾಣ, ಮುತ್ತುರಾಜ ಮುರಾಳ, ಮಲ್ಲಿಕಾರ್ಜುನ ಕಾಳೆ, ಹುಚ್ಚಪ್ಪ ಶಿವಶರಣ, ಸೇರಿದಂತೆ ಆಶಾ ಕಾರ್ಯಕರ್ತರು, ಕನ್ನಡಪರ ಸಂಘಟನೆ ಮುಖಂಡರು ಜಾಗೃತಿ ಜಾಥಾದಲ್ಲಿ ಪಾಲ್ಗೊಂಡಿದ್ದರು.