ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರುಕನ್ನಡ ರಾಜ್ಯೋತ್ಸವ ಅಂಗವಾಗಿ ಕೇರಳದ ಕೈತಂಗ (ಹೆಲ್ಪಿಂಗ್ ಹ್ಯಾಂಡ್ಸ್) ಯುವಕರ ತಂಡ ಮಯೂರ ಕನ್ನಡ ಯುವಕರ ಬಳಗದ ಸಹಯೋಗದೊಂದಿಗೆ ಚಾಮರಾಜ ಜೋಡಿ ರಸ್ತೆಯ ಡಾ .ರಾಜಕುಮಾರ್ ಪುತ್ಥಳಿಮಾಲಾರ್ಪಣೆ ಬಳಿಕ ಬಡವರಿಗೆ ಆಹಾರ ಸಾಮಗ್ರಿಗಳು ನೀಡುವ ಮೂಲಕ ಕನ್ನಡ ರಾಜ್ಯೋತ್ಸವ ಆಚರಿಸಿದರು.ಅದಕ್ಕೂ ಮುನ್ನ ಡಾ. ರಾಜಕುಮಾರ್ ಪುತ್ಥಳಿಗೆ ಪೂಜೆ ಸಲ್ಲಿಸಿ ಮಾಲಾರ್ಪಣೆ ಮಾಡಿ ನಂತರ ಕನ್ನಡ ಧ್ವಜ ಹಾರಿಸಿ 400 ಬಡ ಕುಟುಂಬದವರಿಗೆ ಆಹಾರ ಸಾಮಗ್ರಿಗಳು ವಿತರಿಸಿದರು.ಬಳಿಕ ಮಾತನಾಡಿದ ಮಯೂರ ಕನ್ನಡ ಯುವಕರ ಬಳಗದ ಗೌರವಾಧ್ಯಕ್ಷ ಜಿ ಶ್ರೀನಾಥ್ ಬಾಬು ಕೇರಳದ ಯುವಕರ ಸಂಘಟನೆ ಈ ಬಾರಿ ನಮ್ಮ ಜೊತೆ ಬಂದು ಕನ್ನಡ ರಾಜ್ಯೋತ್ಸವ ಆಚರಿಸುತ್ತಿರುವುದು ಸಂತಸ ಉಂಟು ಮಾಡಿದೆ. ಆಂಗ್ಲಭಾಷಾ ವ್ಯಾಮೋಹಕ್ಕೆ ಸಿಲುಕಿ ಕನ್ನಡ ಸಂಸ್ಕೃತಿಯನ್ನು ನಾಶಗೊಳಿಸಿಕೊಳ್ಳುತ್ತಿದ್ದೇವೆ. ಆಧುನಿಕ ಯುಗದಲ್ಲಿ ಅನ್ಯ ಭಾಷೆಗಳ ಕಲಿಕೆ ಅನಿವಾರ್ಯ. ಅನ್ಯಭಾಷೆಗಳ ಕಲಿಯುವ ಜೊತೆಗೆ ಕನ್ನಡವನ್ನು ಹೆಚ್ಚಾಗಿ ಬಳಸುವ, ಪ್ರೀತಿಸುವ ಮೂಲಕ ಉಳಿಸಿ, ಬೆಳೆಸುವಂತಾಗಬೇಕು ಎಂದರು. ಕೆ.ಆರ್. ಬ್ಯಾಂಕ್ ಅಧ್ಯಕ್ಷ ಬಸವರಾಜ್ ಬಸಪ್ಪ, ಜಿ. ಶೇಖರ್, ಜಿ. ರಾಘವೇಂದ್ರ, ಕಿರಣ್, ಕಿಶೋರ್, ಧೀನ್ ತಂಬಿ, ನಿತಿನ್, ಜೊಯೆಲ್, ವಿಷ್ಣು, ಮಲ್ಲೇಶ್, ಮಂಜುನಾಥ್, ಮಹಾನ್ ಫಯಾಸ್, ಶ್ರೀಕಾಂತ್ ಕಶ್ಯಪ್, ರಮೇಶ್, ಹರೀಶ್ ನಾಯ್ಡು, ಮುಷೀರ್, ಸಂತೋಷ್ ಶನ್ಮುಗ,ಸುರೇಶ್,ಶಂಕರ, ನಾಗರಾಜ್ ಮೊದಲಾದವರು ಇದ್ದರು.