ಕನ್ನಡದ ವಿವೇಕ ದೊಡ್ಡದು: ಬರಗೂರು ರಾಮಚಂದ್ರಪ್ಪ

| Published : Nov 30 2024, 12:46 AM IST

ಸಾರಾಂಶ

ಕನ್ನಡ ಸಾಹಿತ್ಯ ಸಮಗ್ರವಾದದ್ದು, ಕನ್ನಡ ವಿವೇಕ ಬಹಳ ದೊಡ್ಡದು, ವಿವೇಕದ ಜಾಗದಲ್ಲಿ ಅವಿವೇಕ ,ಸತ್ಯದ ಜಾಗದಲ್ಲಿ ಅಸತ್ಯ ಅವರಿಸಿ ಕೊಳ್ಳುತ್ತಿದೆ, ಮಾನವೀಯತೆ ಬದಲು ಮತಿಯತೆ ಆವರಿಸಿಕೊಳ್ಳುತ್ತಿರುವ ಸಂದರ್ಭದಲ್ಲಿ ಪಂಪನಿಂದ ಇಂದಿನ ದಲಿತ,ಬಂಡಾಯದವರೆಗೆ ಕನ್ನಡ ಬಹು ದೊಡ್ಡ ವಿವೇಕವನ್ನು ಸಮಾಜಕ್ಕೆ ನೀಡಿದೆ ಎಂದು ನಾಡೋಜ ಪ್ರೊ. ಬರಗೂರು ರಾಮಚಂದ್ರಪ್ಪ ಅಭಿಪ್ರಾಯಪಟ್ಟರು. ತುಮಕೂರು 16ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ತುಮಕೂರುಕನ್ನಡ ಸಾಹಿತ್ಯ ಸಮಗ್ರವಾದದ್ದು, ಕನ್ನಡ ವಿವೇಕ ಬಹಳ ದೊಡ್ಡದು, ವಿವೇಕದ ಜಾಗದಲ್ಲಿ ಅವಿವೇಕ ,ಸತ್ಯದ ಜಾಗದಲ್ಲಿ ಅಸತ್ಯ ಅವರಿಸಿ ಕೊಳ್ಳುತ್ತಿದೆ, ಮಾನವೀಯತೆ ಬದಲು ಮತಿಯತೆ ಆವರಿಸಿಕೊಳ್ಳುತ್ತಿರುವ ಸಂದರ್ಭದಲ್ಲಿ ಪಂಪನಿಂದ ಇಂದಿನ ದಲಿತ,ಬಂಡಾಯದವರೆಗೆ ಕನ್ನಡ ಬಹು ದೊಡ್ಡ ವಿವೇಕವನ್ನು ಸಮಾಜಕ್ಕೆ ನೀಡಿದೆ.ಅದನ್ನು ಜನಸಾನಮಾನ್ಯರ ಮದ್ಯೆ ತೆಗೆದುಕೊಂಡು ಹೋಗುವ ಕೆಲಸ ಇಂತಹ ಸಮ್ಮೇಳನಗಳ ಮೂಲಕ ಅಗಬೇಕಾಗಿದೆ ಎಂದು ನಾಡೋಜ ಪ್ರೊ. ಬರಗೂರು ರಾಮಚಂದ್ರಪ್ಪ ಅಭಿಪ್ರಾಯಪಟ್ಟಿದ್ದಾರೆ.ನಗರದ ಗಾಜಿನಮನೆಯಲ್ಲಿ ಜಿಲ್ಲಾ ಕಸಾಪವತಿಯಿಂದ ಆಯೋಜಿಸಿದ್ದ 16ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು.ಕನ್ನಡ ಭಾಷೆ ಧಾರ್ಮಿಕ, ರಾಜಕೀಯ, ಸಾಹಿತಿಕ,ಸಾಮಾಜಿಕ,ಅರ್ಥಿಕ ವಿವೇಕಗಳನ್ನು ಕಲ್ಪಸಿರುವ ಭಾಷೆಯಾಗಿದೆ.ಕನ್ನಡ ಸಾಹಿತ್ಯದ ವಿವೇಕಾ ಬಹಳ ಪ್ರಾಚೀನವಾದದ್ದು ಪಂಪ ರನ್ನರ ಕಾಲಕ್ಕಿಂತಲ್ಲೂ ಮುಂಚಿನಿಂದಲ್ಲೂ ಆಗಿದೆ.ಪುರಾಣ, ಜನಪದ, ಸಾಂಸ್ಕೃತಿಕವು ಸೇರಿದಂತೆ ಸ್ಥಳೀಯ ಪ್ರಾದೇಶೀಕ,ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದ ವಿಚಾರಗಳನ್ನು ಸಹ ಕನ್ನಡ ಸಾಹಿತ್ಯ ಒಳಗೊಂಡಿದೆ ಎಂದರು.ಸಾಹಿತ್ಯ ಸಮ್ಮೇಳನಗಳು ಆಡಂಬರಕ್ಕಿಂತ ಅರ್ಥಪೂರ್ಣವಾದಾಗ ಮಾತ್ರ ಹೆಚ್ಚು ಜನರನ್ನು ತಲುಪಲು ಸಾಧ್ಯ. ಸಾಹಿತ್ಯ ಸಮ್ಮೇಳನಗಳಲ್ಲಿ ನಮ್ಮದೊಂದು ಇರಲಿ ಎಂಬಂತೆ ಮಹಿಳಾ, ದಲಿತ, ರೈತ,ಕಾರ್ಮಿಕ ಚಳವಳಿಗಳ ಬಗ್ಗೆ ಚರ್ಚಿಸುವ ಬದಲು, ಸಾಹಿತ್ಯ ಕೇಂದ್ರೀತವಾಗಿ ದಲಿತರು, ಪ್ರಗತಿಪರರು, ರೈತರು, ಮಹಿಳೆಯರು, ಕಾರ್ಮಿಕರ ವಿಷಯಗಳು ಚರ್ಚೆಯಾಗಬೇಕು.ಆ ಮೂಲಕ ಕನ್ನಡದ ವಿವೇಕವನ್ನು ವಿಸ್ತುರಿಸುವ ಕೆಲಸ ಆಗಬೇಕೆಂದು ಬರಗೂರು ರಾಮಚಂದ್ರಪ್ಪ ತಿಳಿಸಿದರು.ಕನ್ನಡ ಮಾನವೀಯ,ಸಮಾನತೆಯ,ಜಾತ್ಯತೀತ ಕನ್ನಡವು ಆಗಿದೆ, ನಮ್ಮ ಪರಂಪರೆಯಲ್ಲಿ ಸೌಹಾರ್ದತೆಯು ಸಹ ಇದೆ , ಜನಸಾಮಾನ್ಯರ ಬಗ್ಗೆ ಗೌರವ ಇದ್ದಾಗ ಮಾತ್ರ ಸಾಹಿತ್ಯವು ಉತ್ಕೃಷ್ಟ ವಾಗಿರುತ್ತದೆ.ಬರೆಯದವರ ಬಗ್ಗೆ ಬರೆಯುವವರು ಗೌರವ ಹೊಂದಿದಾಗ ಮಾತ್ರ ಸಾಹಿತ್ಯ ರು,ಬರೆಯುವವರ ಬಗ್ಗೆ ಗೌರವನ್ನು ಇಟ್ಟುಕೊಳ್ಳಬೇಕು ಎಂದು ಹೇಳಿದರು.

ತುಮಕೂರು ಜಿಲ್ಲಾ 16ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಡಾ.ಆಗ್ರಹಾರ ಕೃಷ್ಣಮೂರ್ತಿ ಮಾತನಾಡಿ, ಲೇಖಕರು, ಕಲಾವಿದರು, ಪತ್ರಕರ್ತರು ಈಗ ಆತಂಕದ ಸ್ಥಿತಿಯಲ್ಲಿದ್ದಾರೆ.ಅವರ ಸಾಚಾ ಅಭಿವ್ಯಕ್ತಿಗೆ ಧಕ್ಕೆ ಒದಗಿರುವುದು ಎದ್ದು ಕಾಣುತ್ತಿದೆ. ಜಗತ್ತಿನ ಅನೇಕ ಕಡೆಗಳಲ್ಲಿ ಯುದ್ಧ, ಭಯೋತ್ಪಾದನೆ, ಹಿಂಸೆ ತಲೆಯೆತ್ತುತ್ತಲೇ ಇವೆ. ಈಶಾನ್ಯ ಭಾರತದ ಗುಡ್ಡಗಾಡು ಜನಸಮುದಾಯಗಳ ನಡುವಿನ ಆತಂಕಕಾರಿ ಬೆಳವಣಿಗೆಗಳನ್ನು,ರಾಜಕಾರಣ ಹಿಂಸೆಯನ್ನೂ ತನ್ನ ಸ್ವಾರ್ಥಕ್ಕೆ ಬಳಸಿ ಕೊಳ್ಳುತ್ತಿರುವುದನ್ನು ದಿನನಿತ್ಯ ಕಾಣುತ್ತಿದ್ದೇವೆ.ಎನ್ಕೌಂಟರುಗಳು ನಮ್ಮ ಮನೆಯಂಗಳಕ್ಕೂ ಕಾಲಿಟ್ಟಿರಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದರು.ದೈಹಿಕ ಅಥವಾ ಮಾನಸಿಕ ಹಿಂಸೆಯುಂಟು ಮಾಡುವುದರ ಹಿಂದೆ ಸದಾ ಹೇಡಿತನ ಅಡಗಿರುತ್ತದೆ.ಅಮಾಯಕರ ಮೇಲೆ ಹಿಂಸೆಯನ್ನು ಚೆಲ್ಲಿ ಪರಾರಿಯಾಗಿ ಬಿಡುತ್ತಾರೆ.ಇದು ಮೂಲಭೂತವಾಗಿ ಧಾರ್ಮಿ ಮತ್ತು ರಾಜಕೀಯ ದುರುದ್ದೇಶ ವುಳ್ಳಂಥದ್ದು. ಹಿಂಸಕರು ತಾವು ಅಮಾಯಕರನ್ನು ಕೊಲ್ಲುತ್ತಿದ್ದೇವೆಂಬ ಪರಿಜ್ಞಾನವೇ ಇಲ್ಲದ ಕುರುಡರಂತಿರುತ್ತಾರೆ. ಹಿಂಸೆಯ ಹಲವು ಭಯಾನಕ ಮುಖಗಳಲ್ಲೊಂದು ಭಯೋತ್ಪಾದನೆ.ಹಿಂಸೆಯ ಕೂಸು ಅದು. ಇದು ರಚ್ಚೆ ಹಿಡಿಯುವುದು, ಹಟ ಹಿಡಿಯುವುದೇ ಹೆಚ್ಚು. ಹಿಂಸೆಯನ್ನು ಯಶಸ್ವಿಯಾಗಿ ಪಳಗಿಸಿದವರು ಮಹಾತ್ಮ ಗಾಂಧೀಜಿ ಎಂದು ಡಾ.ಆಗ್ರಹಾರ ಕೃಷ್ಣಮೂರ್ತಿ ನುಡಿದರು.ಸಾನಿಧ್ಯ ವಹಿಸಿದ್ದ ಕೊರಟಗೆರೆ ಅಕ್ಕಿರಾಂಪುರದ ವಿಶ್ವ ಕುಂಚಿಟಿಗರ ಸಂಸ್ಥಾನದ ಪೀಠಾಧ್ಯಕ್ಷ ಡಾ.ಹನುಮಂತನಾಥಸ್ವಾಮೀಜಿ ಆಶೀರ್ವಚನ ನೀಡಿ,ನಾಡು, ನುಡಿಯ ರಕ್ಷಣೆಯಲ್ಲಿ ಎಲ್ಲರೂ ಸಂಘಟಿತರಾಗಿ ಹೋರಾಡಬೇಕಿದೆ.ಆಗ ಮಾತ್ರ ನಮ್ಮ ಆಸ್ಥಿತ್ವ ಉಳಿಸಿಕೊಳ್ಳಲು ಸಾಧ್ಯ.ನವೆಂಬರ್ ಎಂದರೆ ಕನ್ನಡದ ತಿಂಗಳು, ಇದು ಕೇವಲ ಒಂದು ತಿಂಗಳಿಗೆ ಸೀಮಿತವಾಗದೆ, ಹಿರಿಯರನ್ನು ಗೌರವಿಸುತ್ತಾ, ಕಿರಿಯರನ್ನು ಪ್ರೋತ್ಸಾಹಿಸುತ್ತಾ ಭಾಷೆಯ ಬೆಳವಣಿಗೆಗೆ ಒಟ್ಟಾಗಿ ದುಡಿಯೋಣ ಎಂದರು.ಆಶಯ ನುಡಿಗಳನ್ನಾಡಿದ ಜಿಲ್ಲಾ ಕಸಾಪ ಅಧ್ಯಕ್ಷ ಕೆ.ಎಸ್.ಸಿದ್ದಲಿಂಗಪ್ಪ ಮಾತನಾಡಿ,ಜಿಲ್ಲಾಡಳಿತದ ಒತ್ತಾಸೆಯಿಂದ 2 ದಿನಗಳ ಈ ಕನ್ನಡ ನುಡಿ ಹಬ್ಬವನ್ನು ಕಸಾಪ ಹಮ್ಮಿಕೊಂಡಿದೆ.ಎರಡು ದಿನದ ಈ ಕಾರ್ಯಕ್ರಮದಲ್ಲಿ 8 ವಿವಿಧ ಗೋಷ್ಠಿಯನ್ನು ಹಮ್ಮಿಕೊಳ್ಳಲಾಗಿದೆ ಎಂದರು.ಕಾರ್ಯಕ್ರಮಕ್ಕೂ ಪರಿಷತ್ತಿನ ದ್ವಜಾರೋಹಣವನ್ನು ಎಡಿಸಿ ಡಾ.ಎನ್.ತಿಪ್ಪೇಸ್ವಾಮಿ ನೆರವೇರಿಸಿದರು. .ಕಾರ್ಯಕ್ರಮದಲ್ಲಿ ಸಿಇಓ ಜಿ.ಪ್ರಭು ಮತ್ತು ಪಾಲಿಕೆ ಆಯುಕ್ತರಾದ ಅಶ್ವಿಜ ಅವರು ಮಾತನಾಡಿದರು. ಕಾರ್ಯಕ್ರಮದಲ್ಲಿ , ಗೌರವ ಕಾರ್ಯದರ್ಶಿ ಡಾ.ಡಿ.ಎನ್.ಯೋಗೀಶ್ವರಪ್ಪ, ಡಾ.ಕಂಟಲಗೆರೆ ಸಣ್ಣಹೊನ್ನಯ್ಯ,ಮುರುಳಿಕೃಷ್ಣಪ್ಪ, ಡಾ.ಅಸ್ಗರ್ ಬೇಗ್, ಡಾ.ಚೇತನ್, ಸಾಹಿತ್ಯ ಪರಿಷತ್ ಪದಾಧಿಕಾರಿಗಳಾದ ಚಾಂದು, ರಾಜಶೇಖರ್ ಮತ್ತಿತರರು ಉಪಸ್ಥಿತರಿದ್ದರು.