ಸಾರಾಂಶ
ಕಳೆದ ಐದೂವರೆ ದಶಕದಿಂದ ಜನದನಿಯಂತೆ ಕಾರ್ಯನಿರ್ವಹಿಸುತ್ತಿರುವ ನಾಡಿನ ಪ್ರತಿಷ್ಠಿತ ಕನ್ನಡಪ್ರಭ- ಏಷ್ಯಾನೆಟ್ ಸುವರ್ಣ ನ್ಯೂಸ್ ಚಿತ್ರಕಲಾ ಸ್ಪರ್ಧೆ-2023 ನ. 29ರಂದು ಇಂದಿರಾಗಾಜಿನ ಮನೆಯಲ್ಲಿ ಬೆಳಗ್ಗೆ ನಡೆಯಲಿದೆ.ಬೆಳಗ್ಗೆ 9.30ರಿಂದ 11.30ರ ವರೆಗೆ 8, 9 ಮತ್ತು 10ನೇ ತರಗತಿ ವಿದ್ಯಾರ್ಥಿಗಳಿಗೆ ಚಿತ್ರಕಲಾ ಸ್ಪರ್ಧೆ ನಡೆಯಲಿದೆ. ಸರಿಸುಮಾರು 3000 ಮಕ್ಕಳು ಪಾಲ್ಗೊಳ್ಳಲಿದ್ದಾರೆ.
ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ

11.30ರಿಂದ ಸಭಾ ಕಾರ್ಯಕ್ರಮ ನಡೆಯಲಿದೆ. ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಿದ್ದಾರೆ. ಕನ್ನಡಪ್ರಭ- ಏಷ್ಯಾನೆಟ್ ಸುವರ್ಣ ನ್ಯೂಸ್ ಪ್ರಧಾನ ಸಂಪಾದಕ ರವಿ ಹೆಗಡೆ ಅಧ್ಯಕ್ಷತೆ ವಹಿಸುವರು.ಅತಿಥಿಗಳಾಗಿ ಶಾಸಕ ಮಹೇಶ ಟೆಂಗಿನಕಾಯಿ, ಸ್ವರ್ಣ ಗ್ರೂಪ್ ಆಫ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಡಾ. ಸಿಎಚ್. ವಿ.ಎಸ್.ವಿ. ಪ್ರಸಾದ, ಮಜೇಥಿಯಾ ಫೌಂಡೇಶನ್ ಅಧ್ಯಕ್ಷೆ ನಂದಿನಿ ಕಶ್ಯಪ ಮಜೇಥಿಯಾ, ಕನ್ನಡಪ್ರಭ ಪುರವಣಿ ಸಂಪಾದಕ ಗಿರೀಶರಾವ್ ಹತ್ವಾರ (ಜೋಗಿ) ಪಾಲ್ಗೊಳ್ಳುವರು. ವಿಶೇಷ ಅತಿಥಿಯಾಗಿ ಖ್ಯಾತ ಸಿನಿಮಾ ತಾರೆ ಅಂಕಿತಾ ಅಮರ ಭಾಗವಹಿಸುವರು.
ಈ ವರ್ಷ ಕಾರ್ಯಕ್ರಮಕ್ಕೆ ಸ್ವರ್ಣ ಗ್ರೂಪ್ ಆಫ್ ಕಂಪನಿ, ಮಜೇಥಿಯಾ ಫೌಂಡೇಶನ್, ಟ್ರ್ಯಾಕ್ ಆ್ಯಂಡ್ ಟ್ರೈಲ್, ಟಿಐ ಸೈಕಲ್ಸ್, ಹ್ಯಾಂಗೋ ಐಸ್ಕ್ರಿಂ, ಪ್ರೀತಿ ಸಿಲ್ಕ್ಸ್, ಬಿ.ಎಸ್. ಚನ್ನಬಸಪ್ಪ ಆ್ಯಂಡ್ ಸನ್ಸ್ ದಾವಣಗೆರೆ, ಎಲ್‌ಐಸಿ, ಜೆಮ್‌ಸಿಪ್, ಕ್ಯಾಂಪ್ಕೋ ಪ್ರಮುಖ ಪ್ರಾಯೋಜಕತ್ವ ವಹಿಸಿವೆ. ಪ್ರತಿವರ್ಷ ನಡೆಯುವ ಚಿತ್ರಕಲಾ ಸ್ಪರ್ಧೆ ಇದು 5ನೇ ವರ್ಷದ್ದಾಗಿದೆ.