ಸಾರಾಂಶ
ನಿರುದ್ಯೋಗದ ಸಮಸ್ಯೆಯಿಂದ ಬಳಲಿ, ಹೊಟ್ಟೆಪಾಡಿಗಾಗಿ ಉದ್ಯೋಗ ಅರಸಿ ವಿದೇಶಕ್ಕೆ ತೆರಳಿ ಊಟ ನೀರಿಗೂ ಪರದಾಡುತ್ತಿದ್ದ ಕನ್ನಡಿಗರ ರಕ್ಷಣೆಗೆ ಕರ್ನಾಟಕ ಸರ್ಕಾರ ಮುಂದಾಗಿದೆ. ಬೀದರ್ ಜಿಲ್ಲಾಡಳಿತ ಉಜ್ಬೇಕಿಸ್ತಾನದಲ್ಲಿರುವ ಕನ್ನಡಿಗರಿಗೆ ಮಾತನಾಡಿ ಅಭಯ ನೀಡಿದೆ. ಶೀಘ್ರದಲ್ಲಿ ಸ್ವದೇಶಕ್ಕೆ ಸುರಕ್ಷಿತವಾಗಿ ವಾಪಸ್ ಕರೆತರುವ ಭರವಸೆ ನೀಡಿದೆ.
ಕನ್ನಡಪ್ರಭ ವಾರ್ತೆ ಬೀದರ್
ನಿರುದ್ಯೋಗದ ಸಮಸ್ಯೆಯಿಂದ ಬಳಲಿ, ಹೊಟ್ಟೆಪಾಡಿಗಾಗಿ ಉದ್ಯೋಗ ಅರಸಿ ವಿದೇಶಕ್ಕೆ ತೆರಳಿ ಊಟ ನೀರಿಗೂ ಪರದಾಡುತ್ತಿದ್ದ ಕನ್ನಡಿಗರ ರಕ್ಷಣೆಗೆ ಕರ್ನಾಟಕ ಸರ್ಕಾರ ಮುಂದಾಗಿದೆ. ಬೀದರ್ ಜಿಲ್ಲಾಡಳಿತ ಉಜ್ಬೇಕಿಸ್ತಾನದಲ್ಲಿರುವ ಕನ್ನಡಿಗರಿಗೆ ಮಾತನಾಡಿ ಅಭಯ ನೀಡಿದೆ. ಶೀಘ್ರದಲ್ಲಿ ಸ್ವದೇಶಕ್ಕೆ ಸುರಕ್ಷಿತವಾಗಿ ವಾಪಸ್ ಕರೆತರುವ ಭರವಸೆ ನೀಡಿದೆ. ಉಜ್ಬೇಕಿಸ್ತಾನದಲ್ಲಿನ ಕನ್ನಡಿಗರ ನರಕಯಾತನೆಯನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದ ಕನ್ನಡಪ್ರಭ ವರದಿಯನ್ನಾದರಿಸಿ ಅಲ್ಲಿನ ಸಿಲುಕಿರುವ ಯುವಕರುಗಳನ್ನು ವಾಪಸ್ ಕರೆಯಿಸಿಕೊಳ್ಳಲು ಮುಖ್ಯಮಂತ್ರಿಗಳ ಕಾರ್ಯಾಲಯ ಬೀದರ್ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದಂತೆ, ಜಿಲ್ಲಾಧಿಕಾರಿಗಳು ಶುಕ್ರವಾರ ಉಜ್ಬೇಕಿಸ್ತಾನದಲ್ಲಿರುವ ಯುವಕರೊಂದಿಗೆ ಸಂಪರ್ಕ ಸಾಧಿಸಿ ಅಭಯ ನೀಡಿದ್ದಾಗಿ ಎಡೀಸಿ ಶಿವಕುಮಾರ ಶೀಲವಂತ ತಿಳಿಸಿದ್ದಾರೆ.ಕನ್ನಡಪ್ರಭ ವಿಶೇಷ ವರದಿ ಮೂಲಕ ನಮ್ಮ ಸಮಸ್ಯೆಯನ್ನು ಸರ್ಕಾರಕ್ಕೆ ತಲುಪಿಸಿದ್ದು ಅಭಿನಂದನಾರ್ಹವಾಗಿದೆ, ನಾವು ಆ. 5ರಂದು ಸ್ವದೇಶಕ್ಕೆ ವಾಪಸ್ ಆಗುವ ಸಂಭವವಿದೆ ಎಂದು ಉಜ್ಬೇಕಿಸ್ತಾನದಲ್ಲಿ ಸಿಲುಕಿರುವ ಯುವಕ ಚಂದ್ರಕಾಂತ ಸಂತಸ ವ್ಯಕ್ತಪಡಿಸಿದ್ದಾರೆ.