ಕಿಕ್ಕೇರಿ: ಗ್ರಾಮದ ಬಲುದೊಡ್ಡ ಹಬ್ಬ ಕನ್ನಂಬಾಡಮ್ಮನ ಹಬ್ಬವನ್ನು ವಿಜೃಂಭಣೆಯಿಂದ ಮಂಗಳವಾರ ಆಚರಿಸಿದರು.
ರೈತ ಮುಖಂಡರು ಭಕ್ತರು, ಸಾರ್ವಜನಿಕರಿಂದ ದೇವಿಗೆ ಮುಡಿಪಿನ ಕಾಣಿಕೆ ಸಂಗ್ರಹಿಸಿ ಮಂಗಳವಾರ ಮುಂಜಾನೆ ಕನ್ನಂಬಾಡಿ ಗ್ರಾಮಕ್ಕೆ ತೆರಳಿದರು.ಮುಡಿಪಿನ ಕಾಣಿಕೆಯಿಂದ ದೇವಿಗೆ ಸೀರೆ, ರವಿಕೆ, ಮಡಿಲಕ್ಕಿ, ಬಿಚ್ಚೋಲೆ, ಅರಿಷಿಣ, ಕುಂಕುಮ, ಕಾಯಿ ಮತ್ತಿತರ ಅಷ್ಟದ್ರವ್ಯ ವಸ್ತುಗಳನ್ನು ಖರೀದಿಸಿ ದೇವಿಗೆ ಪೂಜೆ, ಆರತಿ ಬೆಳಗಿ ಕಾಣಿಕೆ ಒಪ್ಪಿಸಿದರು.
ದೇವಿ ಗುಡಿಯಿಂದ ಪ್ರಸಾದ ತಂದು ಗ್ರಾಮದ ಮಾರುಕಟ್ಟೆಗೆ ಆಗಮಿಸಿದರು. ಗ್ರಾಮಸ್ಥ ರುಒಂದೆಡೆ ಸೇರಿದೇವಿ ಗದ್ದುಗೆ ನಿರ್ಮಿಸಿದರು. ಪುಷ್ಪಗಳಿಂದ ಅಲಂಕರಿಸಿ ಮಂಗಳದ್ರವ್ಯದೊಂದಿಗೆ ಪೂಜಿಸಿದರು. ದೇವಿಗೆ ಮಾಂಸದಅಡುಗೆ ತಯಾರಿಸಿ ನೈವೇದ್ಯ ಸಮರ್ಪಿಸಿದರು.ಭಕ್ತರಿಗೆ ಸಾಮೂಹಿಕ ದೇವಿ ಪ್ರಸಾದವಾಗಿ ಮಾಂಸದೂಟ ಉಣಬಡಿಸಲಾಯಿತು. ಈ ವೇಳೆ ಗ್ರಾಮ ಮುಖಂಡರು, ವಿವಿಧ ಪಕ್ಷಗಳ ಮುಖಂಡರು ಪಕ್ಷಬೇಧ ಮರೆತು ಹಬ್ಬದಲ್ಲಿ ಭಾಗಿಯಾಗಿದ್ದರು.ಇಂದು ಗುರುಪೂರ್ಣಿಮೆ ಪ್ರಯುಕ್ತ ಗುರುಪೂಜೆ
ಮಂಡ್ಯ: ಗುರುಪೂರ್ಣಿಮೆ ಅಂಗವಾಗಿ ಜು.೨೯ರಂದು ತಾಲೂಕಿನ ಮೊತ್ತಹಳ್ಳಿ ಸಮೀಪದಲ್ಲಿರುವ ಪುರಾತನ ಕಾಲದ ಗವಿಕಟ್ಟೆ ಮಠದಲ್ಲಿ ಗುರುಪೂಜಾ ಕಾರ್ಯಕ್ರಮ ನಡೆಯಲಿದೆ. ಬೆಳಗ್ಗೆ ೧೧ ಗಂಟೆಗೆ ಗುರುಪಾದುಕಾ ಪೂಜೆ, ಮಹಾ ಮಂಗಳಾರತಿ, ಪ್ರಸಾದ ವಿನಿಯೋಗ ಹಾಗೂ ಅನ್ನಸಂತರ್ಪಣೆ ಕಾರ್ಯಕ್ರಮ ನಡೆಯಲಿದೆ ಎಂದು ಕೊತ್ತತ್ತಿಯ ಎಲೆತೋಟದ ಕ್ಯಾತಮ್ಮ ದೇವಾಲಯದ ಅರ್ಚಕ ಪುಟ್ಟಸ್ವಾಮಿ ತಿಳಿಸಿದ್ದಾರೆ.ಕಲಾತಂಡಗಳ ಒಕ್ಕೂಟಕ್ಕೆ ನಾಗರಾಜು, ಶೇಖರ್ ಆಯ್ಕೆ
ಮಂಡ್ಯ: ಜನಪದ ಮತ್ತು ಬೀದಿ ನಾಟಕ ಕಲಾತಂಡಗಳ ಒಕ್ಕೂಟದ ಮಂಡ್ಯ ಜಿಲ್ಲಾ ಅಧ್ಯಕ್ಷರಾಗಿ ತಡಗವಾಡಿ ಟಿ.ಎಂ. ನಾಗರಾಜು, ಪ್ರಧಾನ ಕಾರ್ಯದರ್ಶಿಯಾಗಿ ಎನ್.ಶೇಖರ್ ಹನಿಯಂಬಾಡಿ ಅವರು ಆಯ್ಕೆಯಾಗಿದ್ದಾರೆ.ಉಪಾಧ್ಯಕ್ಷರಾಗಿ ಡಿ. ಉಮಾಪತಿ ಮಂಗಲ, ಖಜಾಂಚಿಯಾಗಿ ವೈರಮುಡಿ, ನಿರ್ದೇಶಕರಾಗಿ ಎಸ್. ರಾಜಣ್ಣ ಸಂತೆಕಸಲಗೆರೆ, ಬಂದೇಶ ಕೊಡಿಯಾಲ, ಎಚ್.ಬಿ.ರಾಮಕೃಷ್ಣ ಹನಿಯಂಬಾಡಿ, ಕೃಷ್ಣ ವೈ.ಸಿ. ವೈ.ಯರಹಳ್ಳಿ, ಹೊನ್ನೇಶ, ವೈ.ಯರಹಳ್ಳಿ, ಜಯಮ್ಮ ಕಾಗೇಹಳ್ಳದದೊಡ್ಡಿ, ಶ್ವೇತಾ ಸಿ.ಎಂ. ತಡಗವಾಡಿ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಕಾರ್ಯದರ್ಶಿ ಎನ್. ಶೇಖರ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಸಲಹಾ ಸಮಿತಿ ಸದಸ್ಯರಾಗಿ ಎನ್.ಪರಮೇಶ್ ಚಿಕ್ಕಗಾಡಿಗನಹಳ್ಳಿ, ಈ ಮುನಿಸ್ವಾಮಿ ಅರಕೆರೆ, ವೈ.ಸಿ. ಪರಮೇಶ್ ವೈ.ಯರಹಳ್ಳಿ, ರಂಗನಾಥ್ ಹೆಮ್ಮನಹಳ್ಳಿ, ಭಗತ್‌ಕುಮಾರ್ ಕೆ.ಎಸ್ ಕೊಡಿಯಾಲ, ಎಸ್.ಎನ್. ಕುಮಾರ್ ಸಬ್ಬನಹಳ್ಳಿ, ಸುವರ್ಣ ಎಸ್.ಎಸ್. ಸಂತೆಕಲಸಕೆರೆ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.