ಬೆಳ್ತಂಗಡಿ: ಧರ್ಮಸ್ಥಳ ಗ್ರಾಮದ ನಿತ್ಯಾನಂದ ನಗರದ ಶ್ರೀ ರಾಮ ಕ್ಷೇತ್ರದಲ್ಲಿ ಕನ್ಯಾಡಿ ಶ್ರೀ ರಾಮ ಕ್ಷೇತ್ರ ಮಹಾಸಂಸ್ಥಾನದಲ್ಲಿ ಕ್ಷೇತ್ರದ ಪೀಠಾಧೀಶ ಮಹಾಮಂಡಲೇಶ್ವರ 1008 ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಮಹಾರಾಜ್ ಇವರ ದಿವ್ಯ ಸಾನಿಧ್ಯದಲ್ಲಿ ಪಂಡರಾಪುರ ಶ್ರೀ ಚೈತನ್ಯ ಸದ್ಗುರು ಹರಿಪ್ರಸಾದ ಶರದಸ್ವಾಮಿ ಶಿವೂರಕರ ಅವರ ನೇತೃತ್ವದಲ್ಲಿ ಅಧಿಕ ಮಾಸದ ನಿಮಿತ್ತ ಜೂ. 7ರಿಂದ ಪ್ರಾರಂಭಗೊಂಡ 7 ದಿನಗಳ ಶ್ರೀ ಗ್ರಂಥರಾಜ ಜ್ಞಾನೇಶ್ವರಿಯ ಸಾಮೂಹಿಕ ಪಾರಾಯಣ ಹಾಗೂ ಅಖಂಡ ಹರಿನಾಮ ಸಪ್ತಾಹದ ಸಮಾರೋಪ ಜೂ. 13ರಂದು ಜರುಗಿತು.
ಭಜನಾ ಸಂಕೀರ್ತನೆಯೊಂದಿಗೆ ಭವ್ಯ ಮೆರವಣಿಗೆಯಲ್ಲಿ ನೇತ್ರಾವತಿ ನದಿವರೆಗೆ ಸಾಗಿ ನದಿಯಲ್ಲಿ ಮಹಾಮಂಗಳಾರತಿ ನಡೆದು ಬಳಿಕ ಶ್ರೀ ರಾಮ ಕ್ಷೇತ್ರದಲ್ಲಿ ಶ್ರೀ ರಾಮ ದೇವರಿಗೆ ಮಹಾಪೂಜೆಯೊಂದಿಗೆ ಸಮಾಪ್ತಿಗೊಂಡಿತು. ಪಂಡರಾಪುರ ಶಿವೂರಕರ ಸಾವಿರಾರು ಭಕ್ತರು ಆಗಮಿಸಿ ಶ್ರೀ ರಾಮ ಕ್ಷೇತ್ರದಲ್ಲಿ 7 ದಿನಗಳ ಕಾಲ ಶ್ರೀ ಗ್ರಂಥರಾಜ ಸಾಮೂಹಿಕ ಪಾರಾಯಣ, ಅಖಂಡ ಹರಿನಾಮ ಸಪ್ತಾಹ ನೆರವೇರಿತು.ಸಮಾರೋಪ ಸಂದರ್ಭದಲ್ಲಿ ಶ್ರೀ ರಾಮ ಕ್ಷೇತ್ರ ಮಹಾ ಸಂಸ್ಥಾನದ ಟ್ರಸ್ಟಿ ನಿವೃತ್ತ ಎಸ್. ಪಿ. ಪೀತಾಂಬರ ಹೇರಾಜೆ, ಗುರುದೇವ ಮಠ ಮಠ ಟ್ರಸ್ಟ್ ನ ಕಾರ್ಯದರ್ಶಿ ತುಕಾರಾಮ ಸಾಲಿಯಾನ್, ಟ್ರಸ್ಟಿ ಕೃಷ್ಣಪ್ಪ ಗುಡಿಗಾರ, ರವೀಂದ್ರ ಪೂಜಾರಿ ಆರ್ಲ, ಭಕ್ತ ವೃಂದದವವರು ಉಪಸ್ಥಿತರಿದ್ದರು.