ಕುಪ್ಪೂರು ಗದ್ದಿಗೆ ಮಠ ಶ್ರೀಗುರು ಮರುಳಸಿದ್ಧೇಶ್ವರನ ಪವಾಡ ಕ್ಷೇತ್ರವಾಗಿದೆ. ಲಿಂಗೈಕ್ಯ ಚಂದ್ರಶೇಖರ ಶಿವಾಚಾರ್ಯರು ತಮ್ಮ ತಪಸ್ಸಿನ ಫಲವನ್ನ ಮಠಕ್ಕೆ ಧಾರೆ ಎರೆದಿದ್ದಾರೆ ಎಂದು ಉಜ್ಜಯಿನಿ ಪೀಠದ ಜಗದ್ಗುರು ಸಿದ್ಧಲಿಂಗ ರಾಜದೇಶೀಕೇಂದ್ರ ಶಿವಾಚಾರ್ಯ ಭಗವತ್ಪಾದರು ನುಡಿದರು.

ಕನ್ನಡಪ್ರಭ ವಾರ್ತೆ ಚಿಕ್ಕನಾಯಕನಹಳ್ಳಿ

ಕುಪ್ಪೂರು ಗದ್ದಿಗೆ ಮಠ ಶ್ರೀಗುರು ಮರುಳಸಿದ್ಧೇಶ್ವರನ ಪವಾಡ ಕ್ಷೇತ್ರವಾಗಿದೆ. ಲಿಂಗೈಕ್ಯ ಚಂದ್ರಶೇಖರ ಶಿವಾಚಾರ್ಯರು ತಮ್ಮ ತಪಸ್ಸಿನ ಫಲವನ್ನ ಮಠಕ್ಕೆ ಧಾರೆ ಎರೆದಿದ್ದಾರೆ ಎಂದು ಉಜ್ಜಯಿನಿ ಪೀಠದ ಜಗದ್ಗುರು ಸಿದ್ಧಲಿಂಗ ರಾಜದೇಶೀಕೇಂದ್ರ ಶಿವಾಚಾರ್ಯ ಭಗವತ್ಪಾದರು ನುಡಿದರು.

ತಾಲೂಕಿನ ಕುಪ್ಪೂರು ಗದ್ದಿಗೆ ಶ್ರೀ ಮರೀಳಸಿದ್ಧೇಶ್ವರಸ್ವಾಮಿ ಜಾತ್ರಾ ಮಹೋತ್ಸವದ ಭಾವೈಕ್ಯ ಧಾರ್ಮಿಕ ಸಮಾರಂಭದ ದಿವ್ಯ ಸಾನಿದ್ಯ ವಹಿಸಿ ಮಾತನಾಡಿದರು. ಗದ್ದಿಗೆ ಮಠದಲ್ಲಿ ಮರುಳಸಿದ್ಧರು ನಂಬಿದವರನ್ನುಕೈ ಹಿಡಿದಿದ್ದಾರೆ. ತತ್ವಜ್ಞಾನ ಮತ್ತು ವಿಜ್ಞಾನವನ್ನು ಅಳವಡಿಸಿಕೊಂಡು ಲಿಂಗೈಕ್ಯ ಹಿರಿಯ ಶ್ರೀಗಳು ಮಠದ ತಮ್ಮ ಬದುಕನ್ನು ಮುಡಿಪಾಗಿಟ್ಟಿದ್ದರು. ಲಿಂಗೈಕ್ಯ ಯತೀಶ್ವರರು ಸಾಮಾಜಿಕˌಶೈಕ್ಷಣಿಕವಾಗಿ ಹೋರಾಟಗಾರರಾಗಿದ್ದರು. ಮಠದ ಅಭಿವೃದ್ದಿಗೆ ಭಕ್ತರನ್ನು ಪ್ರೀತಿಯ ಸೆಳೆತದಲ್ಲಿ ಆಕರ್ಷಿತರಾಗಿದ್ದರು. ಈಗಿನ ತೇಜೇಶ್ವರಶಿವಾಚಾರ್ಯರು ವೀರಾಪುರದಲ್ಲಿ ಅಧ್ಯಾಯನ ಮಾಡುತ್ತಿದ್ದಾರೆ. ಯೋಗ್ಯ ಉತ್ತಾರಿಧಿಕಾರಿಯಾಗಿ ಮಠದ ಪೀಠವನ್ನು ಅಲಂಕರಿಸಿದ್ದಾರೆ ಎಂದರು.

ಮಾಜಿ ಸಚಿವ ಜೆ.ಸಿ.ಮಾಧುಸ್ವಾಮಿ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ ಲಿಂ. ಚಂದ್ರಶೇಖರ ಶಿವಾಚಾರ್ಯರು ಭಕ್ತರಿಂದ ಏನನ್ನೂ ಬಯಸುತ್ತಿರಲಿಲ್ಲಾˌಯಾರನ್ನೂ ಪೀಡಿಸುತ್ತಿರಲಿಲ್ಲಾ ಮನಸ್ಸಿನ ಸಂಕಲ್ಪದಂತೆ ಚೊಕ್ಕವಾದ ಕೆಲಸದಲ್ಲಿ ಭಕ್ತರ ಮನಸ್ಸಿನಲ್ಲಿ ಇಂದಿಗೂ ಮನೆಮಾಡಿದ್ದಾರೆ ಎಂದು ಶ್ಲಾಘಿಸಿದರು.

ಯತೀಶ್ವರರು ಮಠವನ್ನ ಬೆಳೆಸಲು ಹುಮ್ಮಸ್ಸಿನಿಂದ ಕೆಲಸಮಾಡಿ ಸಫಲರಾಗಿದ್ದರು. ಮಠದ ಕಟ್ಟಡಕಿಂತ ಭಕ್ತರ ಮನಸ್ಸಿನ ಕಟ್ಟಡ ಶ್ರೇಷ್ಠವಾಗಿದೆ ಭಕ್ತರಿಗೆ ಒಳ್ಳೆದಾಗುವ ಸ್ಥಿತಿಯನ್ನ ಮನದಲ್ಲಿಟ್ಟುಕೊಂಡು ಧಾರ್ಮಿಕವಾಗಿ ಭಗವಂತನ ಮೇಲೆ ಭಕ್ತಿ ತರುವಂತಹ ಕೆಲಸವನ್ನು ತೇಜೇಶ್ವರಶಿವಾಚಾರ್ಯರು ಮಾಡಬೇಕು ಎಂದರು.

ಕೆಪಿಸಿಸಿ ರಾಜ್ಯ ಉಪಾಧ್ಯಕ್ಷ ಮುರಳಿಧರ ಹಾಲಪ್ಪ ಮಾತನಾಡಿ, ಮಠದಲ್ಲಿ ಭಗವಂತನ ಶಕ್ತಿ ಅಡಗಿದೆ. ದೇವರಿಗೆ ಪೂಜೋಪಾಸನೆಯೊಂದಿಗೆ ಭಕ್ತರಿಗೆ ನಿತ್ಯ ದಾಸೋಹ ನಡೆಯುತ್ತಿದೆ. ಮಠ ಮಾನ್ಯಗಳಿಗೆ ಮಕ್ಕಳು ಯುವಕರು ಹೆಚ್ಚಿನದಾಗಿ ಬರುವಂತಾಗಬೇಕು. ಸಂಸ್ಕಾರ ಮನೆ ಬಿಟ್ಟರೆ ಮಠಗಳಲ್ಲಿ ಮಾತ್ರ ಸಿಗುತ್ತದೆ. ಶೈಕ್ಷಣಿಕ ಅನುಕೂಲಕ್ಕಾಗಿ ಮಠದ ಭಕ್ತರ ಮಕ್ಕಳಿಗೆ ಹಾಲಪ್ಪ ಪ್ರತಿಷ್ಠಾನದಿಂದ ಪ್ರತಿ ವರ್ಷ ಧನ ಸಹಾಯ ನೀಡಲಿದೆ ಎಂದರು.

ಶ್ರೀ ಮಠದ ತೇಜೇಶ್ವರ ಶಿಚಾಚಾರ್ಯರು, ಶಿವಗಂಗೆ ಮಠದ ಡಾ.ಮಲಯ ಶಾಂತಮುನಿ ಶಿವಾಚಾರ್ಯರುˌಬೀರೂರು ಮಠದ ರುದ್ರಮುನಿ ಶಿವಾಚಾರ್ಯರು, ಗದ್ದಿಗೆ ಮಠದ ವಾಗೀಶ್ ಪಂಡಿತಾರಾಧ್ಯರು, ತಿಪಟೂರು ಕುಮಾರ್ ಆಸ್ಪತ್ರೆ ಡಾ.ಶ್ರೀಧರ್ˌಹರಿಸಮುದ್ರ ಗಂಗಾಧರ್ ಮಾತನಾಡಿದರು.

ಮಾದಿಹಳ್ಳಿ ಮಠದ ಚನ್ನ ಮಲ್ಲಿಕಾರ್ಜುನ ಶಿವಾಚಾರ್ಯರು ಹಣ್ಣೇಮಠದ ಮರುಳಸಿದ್ಧೇಶ್ವರ ಶಿವಾಚಾರ್ಯರು. ನಂದಿಪುರ ಮಠದ ನಂದೀಶ್ವರ ಶಿವಾಚಾರ್ಯರುˌ ಗಾಯಕ ನಟರಾಜ್ ಶೆಟ್ಟೀಕೆರೆˌಕಿರುತೆರೆ ನಟ ದಯಾನಂದಸಾಗರ್ ಸೇರಿದಂತೆಮುಂತಾದವರಿದ್ದರು.