ಕರಾವಳಿ ಉತ್ಸವ- 2025ರ ಅಂಗವಾಗಿ ಆಯೋಜಿಸಲಾದ ಹೆಲಿಕಾಪ್ಟರ್ ಪ್ರಯಾಣ ‘ಹೆಲಿ ರೈಡ್’ಗೆ ಚಾಲನೆ ದೊರೆತಿದೆ. ಪ್ರತಿ ವ್ಯಕ್ತಿಗೆ 3500 ರು. ದರ ನಿಗದಿಯಾಗಿದ್ದು, ಪ್ರತಿ ಪ್ರಯಾಣದಲ್ಲಿ ಐವರು ಸದಸ್ಯರಿಗೆ ಅವಕಾಶ ಕಲ್ಪಿಸಲಾಗುತ್ತದೆ. ಪ್ರತಿ ಹಾರಾಟದ ಅವಧಿ ಸುಮಾರು 7 ನಿಮಿಷ ಆಗಿದ್ದು, ಬೆಳಗ್ಗೆ 10:30ರಿಂದ ಮಧ್ಯಾಹ್ನ 1 ಗಂಟೆವರೆಗೆ, ಮಧ್ಯಾಹ್ನ 2:30ರಿಂದ ಸಂಜೆ 5 ಗಂಟೆವರೆಗೆ ಪ್ರಯಾಣಕ್ಕೆ ಲಭ್ಯವಿರುತ್ತದೆ.

ಮಂಗಳೂರು: ಕರಾವಳಿ ಉತ್ಸವ- 2025ರ ಅಂಗವಾಗಿ ಆಯೋಜಿಸಲಾದ ಹೆಲಿಕಾಪ್ಟರ್ ಪ್ರಯಾಣ ‘ಹೆಲಿ ರೈಡ್’ಗೆ ಚಾಲನೆ ದೊರೆತಿದೆ.ಪ್ರತಿ ವ್ಯಕ್ತಿಗೆ 3500 ರು. ದರ ನಿಗದಿಯಾಗಿದ್ದು, ಪ್ರತಿ ಪ್ರಯಾಣದಲ್ಲಿ ಐವರು ಸದಸ್ಯರಿಗೆ ಅವಕಾಶ ಕಲ್ಪಿಸಲಾಗುತ್ತದೆ. ಪ್ರತಿ ಹಾರಾಟದ ಅವಧಿ ಸುಮಾರು 7 ನಿಮಿಷ ಆಗಿದ್ದು, ಬೆಳಗ್ಗೆ 10:30ರಿಂದ ಮಧ್ಯಾಹ್ನ 1 ಗಂಟೆವರೆಗೆ, ಮಧ್ಯಾಹ್ನ 2:30ರಿಂದ ಸಂಜೆ 5 ಗಂಟೆವರೆಗೆ ಪ್ರಯಾಣಕ್ಕೆ ಲಭ್ಯವಿರುತ್ತದೆ.ದೈನಂದಿನ ಒತ್ತಡಕ್ಕೆ ಸಣ್ಣ ವಿರಾಮ ಕೊಟ್ಟು, ಹೆಲಿಕಾಪ್ಟರ್ ರೈಡ್‍ನಲ್ಲಿ ಕರಾವಳಿ ಸೌಂದರ್ಯದ ವಿಹಂಗಮ ಚಿತ್ರಣವನ್ನು ಕಣ್ತುಂಬಿಕೊಳ್ಳಬಹುದು. ಮಂಗಳೂರಿನ ಕಡಲ ಕಿನಾರೆ, ರಮಣೀಯ ತಾಣಗಳನ್ನು ಹಾಗೂ ಕರಾವಳಿಯ ಭೂದೃಶ್ಯದ ವಿಶಾಲ ನೋಟವನ್ನು ಆನಂದಿಸಬಹುದು. ಆಕಾಶದ ಎತ್ತರಕ್ಕೆ ಹಾರಿ ನಗರದ ಸೌಂದರ್ಯವನ್ನು ಆಸ್ವಾದಿಸುವ ಉತ್ತಮ ಅನುಭವ ಸಿಗಲಿದೆ.ಹೆಲಿಕಾಪ್ಟರ್ ರೈಡ್ ಕರಾವಳಿ ಉತ್ಸವದ ಪ್ರಮುಖ ಆಕರ್ಷಣೆಯಾಗಿದ್ದು, ಆಸಕ್ತರು ವೆಬ್‍ಸೈಟ್ https://heli.dakshinakannada.org ಮೂಲಕ ಬುಕ್ಕಿಂಗ್ ಮಾಡಿಕೊಳ್ಳಬಹುದು ಎಂದು ಪ್ರಕಟಣೆ ತಿಳಿಸಿದೆ.

28ರಂದು ಯಕ್ಷಗಾನ ಬೊಂಬೆಯಾಟ:

ಮಂಗಳೂರು: ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರ, ಸಂಸ್ಕೃತಿ ಗ್ರಾಮ ಪ್ರಾಯೋಜಕತ್ವದಲ್ಲಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಬೊಂಬೆಯಾಟ ಸಂಘದ ವತಿಯಿಂದ ಯಕ್ಷಗಾನ ಬೊಂಬೆಯಾಟ ಡಿ.28ರಂದು ಸಂಜೆ 6 ಗಂಟೆಗೆ ಅರ್ಬನ್ ಹಾಥ್‌ನಲ್ಲಿ ನಡೆಯಲಿದೆ. ಕಾಂಬೋ ಪ್ರವೇಶಾತಿ ಟಿಕೆಟ್‍ಗೆ ಶೇ.50 ರಿಯಾಯಿತಿ ನೀಡಲಾಗುತ್ತದೆ.

ಇಂದು, ನಾಳೆ ಕರಾವಳಿ ಕ್ರೀಡಾ ಉತ್ಸವ:

ಜಿಲ್ಲಾಡಳಿತ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ದ.ಕ. ಜಿಲ್ಲಾ ವಾಲಿಬಾಲ್ ಎಸೋಸಿಯೇಶನ್, ದಕ್ಷಿಣ ಕನ್ನಡ ಜಿಲ್ಲಾ ಫುಟ್‍ಬಾಲ್ ಎಸೋಸಿಯೇಶನ್ ಹಾಗೂ ರಾಜ್ಯ ದೈಹಿಕ ಶಿಕ್ಷಣ ಶಿಕ್ಷಕರ ಸಂಘ ಬೆಂಗಳೂರು, ದಕ್ಷಿಣ ಕನ್ನಡ ಜಿಲ್ಲಾ ಶಾಖೆ ವತಿಯಿಂದ ಮಂಗಳೂರು ಕರಾವಳಿ ಉತ್ಸವದ ಪ್ರಯುಕ್ತ ಉಳ್ಳಾಲ ಬೀಚ್‍ನಲ್ಲಿ ವಾಲಿಬಾಲ್ ಪಂದ್ಯಾಟ, ಫುಟ್‍ಬಾಲ್ ಪಂದ್ಯಾಟ, ಲಗೋರಿ ಆಟ ಮತ್ತು ಹಗ್ಗಜಗ್ಗಾಟ ಸ್ಪರ್ಧೆಯ ಕ್ರೀಡಾ ಉತ್ಸವ ಆಯೋಜಿಸಲಾಗಿದೆ.

ಡಿಸೆಂಬರ್ 27ರಂದು ಪ್ರೌಢಶಾಲಾ ವಿಭಾಗದ 17 ವಯೋಮಾನದ ಬಾಲಕ- ಬಾಲಕಿಯರಿಗೆ ಬೀಚ್‍ನಲ್ಲಿ ವಾಲಿಬಾಲ್ ಪಂದ್ಯಾಟ ನಡೆಯಲಿದೆ. ಡಿಸೆಂಬರ್ 28ರಂದು ಪುರುಷರು ಹಾಗೂ ಮಹಿಳೆಯರಿಗೆ ಬೀಚ್ ವಾಲಿಬಾಲ್ ಹಾಗೂ ಫುಟ್‍ಬಾಲ್ ಪಂದ್ಯಾಟ, ಲಗೋರಿ ಆಟ, ಹಗ್ಗ- ಜಗ್ಗಾಟ ಸ್ಪರ್ಧೆ ನಡೆಯಲಿದೆ.ಕರಾವಳಿ ಕ್ರೀಡಾ ಉತ್ಸವದ ವಿಜೇತರಿಗೆ ಆಕರ್ಷಕ ಟ್ರೋಫಿ ಹಾಗೂ ನಗದು ಬಹುಮಾನವನ್ನು ನೀಡಿ ಗೌರವಿಸಲಾಗುತ್ತದೆ. ಈ ಕರಾವಳಿ ಕ್ರೀಡಾ ಉತ್ಸವಕ್ಕೆ ಪ್ರೌಢಶಾಲಾ ವಿಭಾಗದ ಬಾಲಕ-ಬಾಲಕಿಯರು, ದಕ್ಷಿಣ ಕನ್ನಡ ಜಿಲ್ಲೆಯ ಪುರುಷರು ಹಾಗೂ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬಹುದು ಎಂದು ಕರಾವಳಿ ಕ್ರೀಡಾ ಉತ್ಸವ ಸಮಿತಿ ಪ್ರಕಟಣೆ ತಿಳಿಸಿದೆ.

------------

ಬಾಕ್ಸ್‌

ಕರಾವಳಿ ಉತ್ಸವದಲ್ಲಿ ಡಿ.27-29 ರವರೆಗೆಮಂಗಳೂರು: ಕರಾವಳಿ ಉತ್ಸವ ವಸ್ತು ಪ್ರದರ್ಶನ ವೇದಿಕೆಯಲ್ಲಿ ಡಿ.27ರಂದು ಸಂಜೆ 6ರಿಂದ 7 ಗಂಟೆವರೆಗೆ ಎಕ್ಸ್‌ಪರ್ಟ್ ಕಾಲೇಜು ವತಿಯಿಂದ ಎಕ್ಸ್‌ಪರ್ಟ್ ಕಲೋತ್ಸವ ಮತ್ತು ಸಂಜೆ 7 ರಿಂದ 9 ಗಂಟೆಯವರೆಗೆ ಪುಶ್ಕಲ ಕುಮಾರ್ ತಂಡದಿಂದ ಸುಗಮ ಸಂಗೀತ ಕಾರ್ಯಕ್ರಮ ನಡೆಯಲಿದೆ.

ಡಿ.28ರಂದು ಸಂಜೆ 6ರಿಂದ 7:30ರವರೆಗೆ ಹರಿದಾಸ್ ಮತ್ತು ತಂಡದಿಂದ ಸ್ಯಾಕ್ಸೋಫೋನ್ ಮತ್ತು 7:30ರಿಂದ 9:30ರವರೆಗೆ ನೃತ್ಯ ಸುಧಾ ತಂಡದಿಂದ ನೃತ್ಯಯಾನ ಕಾರ್ಯಕ್ರಮ ನಡೆಯಲಿದೆ. ಡಿ.29ರಂದು ಸಂಜೆ 6ರಿಂದ 9 ಗಂಟೆವರೆಗೆ ತುಳು ಕಾಮಿಡಿ ಡ್ರಾಮಾ ತಂಡದಿಂದ ‘ಆಣ್‌ ಮಗೆ’ ನಾಟಕ ನಡೆಯಲಿದೆ.

ಕದ್ರಿ ಪಾರ್ಕ್ ವೇದಿಕೆಯಲ್ಲಿ ಡಿ.28ರಂದು ಬೆಳಗ್ಗೆ 6 ರಿಂದ 7ರವರೆಗೆ ದೇಲಂಪಾಡಿ ತಂಡದಿಂದ ಯೋಗ, ಬೆಳಗ್ಗೆ 7ರಿಂದ 9 ಗಂಟೆಯವರೆಗೆ ಸ್ವರಾಲಯ ಸಂಗೀತ ವಿದ್ಯಾಲಯದ ತಂಡದಿಂದ ಭಕ್ತಿ ಗಾಯನ ಮತ್ತು ಸಂಜೆ 6ರಿಂದ 7:15ರವರೆಗೆ ಉಸ್ತಾದ್ ರೈಸ್ ಖಾನ್ ಮತ್ತು ಉಸ್ತಾದ್ ಹಫೀಝ್ ಖಾನ್ ಅವರಿಂದ ದಾಸವಾಣಿ, 7:15ರಿಂದ 8ರವರೆಗೆ ವಿದ್ವಾನ್ ಗಣೇಶ್ ಮತ್ತು ವಿದ್ವಾನ್ ಕುಮಾರೇಶ್ ಅವರಿಂದ ವಯೋಲಿನ್ ಡ್ಯುಯೆಟ್ ಕಾರ್ಯಕ್ರಮ ನಡೆಯಲಿದೆ.