ಕರಾಟೆಯಿಂದ ದೈಹಿಕ ಶಕ್ತಿ ಹಾಗೂ ಮಾನಸಿಕ ಶಕ್ತಿ ವೃದ್ಧಿ

| Published : Jan 06 2025, 01:01 AM IST

ಕರಾಟೆಯಿಂದ ದೈಹಿಕ ಶಕ್ತಿ ಹಾಗೂ ಮಾನಸಿಕ ಶಕ್ತಿ ವೃದ್ಧಿ
Share this Article
  • FB
  • TW
  • Linkdin
  • Email

ಸಾರಾಂಶ

ಕರಾಟೆ ಆಗಿರಬಹುದು, ಕ್ರೀಡೆ ಆಗಿರಬಹುದು, ಇಂತಹ ಕ್ರೀಡೆಯು ಸ್ವಯಂ ರಕ್ಷಣೆ ಅಲ್ಲದೇ ದೈಹಿಕ ಶಕ್ತಿ, ಮಾನಸಿಕ ಶಕ್ತಿ ವೃದ್ಧಿಸುವುದರ ಜೊತೆಗೆ ಒಳ್ಳೆಯ ಆರೋಗ್ಯ ಲಭಿಸುತ್ತದೆ ಎಂದರು. ಶಾಲೆಯಲ್ಲಿ ಶಿಕ್ಷಣ ಪಡೆಯುತ್ತಿರಬಹುದು ಜೊತೆಯಲ್ಲಿ ಇಂತಹ ಕ್ರೀಡೆಯಲ್ಲಿ ತೊಡಗಿಸಿಕೊಂಡಿರಬೇಕು ಎಂದು ನಗರದ ಅಂಬೇಡ್ಕರ್ ಭವನದಲ್ಲಿ ಭಾನುವಾರ ಬೆಳಿಗ್ಗೆ ಹಮ್ಮಿಕೊಳ್ಳಲಾಗಿದ್ದ ಓಪನ್ ೪ನೇ ರಾಷ್ಟ್ರೀಯ ಕರಾಟೆ ಪಂದ್ಯಾವಳಿಯನ್ನು ಉದ್ಘಾಟಿಸಿ ಜನಪ್ರಿಯ ಆಸ್ಪತ್ರೆಯ ಛೇರ್‍ಮನ್ ಡಾ. ಅಬ್ದುಲ್ ಬಶೀರ್‌ ತಿಳಿಸಿದರು.

ಕನ್ನಡಪ್ರಭ ವಾರ್ತೆ ಹಾಸನ

ನಗರದ ಅಂಬೇಡ್ಕರ್ ಭವನದಲ್ಲಿ ಭಾನುವಾರ ಬೆಳಿಗ್ಗೆ ಹಮ್ಮಿಕೊಳ್ಳಲಾಗಿದ್ದ ಓಪನ್ ೪ನೇ ರಾಷ್ಟ್ರೀಯ ಕರಾಟೆ ಪಂದ್ಯಾವಳಿಯನ್ನು ಜನಪ್ರಿಯ ಆಸ್ಪತ್ರೆಯ ಛೇರ್‍ಮನ್ ಡಾ. ಅಬ್ದುಲ್ ಬಶೀರ್‌ ಜ್ಯೋತಿ ಬೆಳಗುವುದರ ಮೂಲಕ ಉದ್ಘಾಟಿಸಿ ಚಾಲನೆ ನೀಡಿದರು.

ನಂತರ ಉದ್ದೇಶಿಸಿ ಮಾತನಾಡಿದ ಬಶೀರ್ ಅವರು, ಕರಾಟೆ ಮಾಸ್ಟರ್ ಆರೀಫ್ ಅವರು ತಮ್ಮ ಸಾಧನೆ ಮೂಲಕ ಹಾಸನ ಜಿಲ್ಲೆ, ರಾಜ್ಯವಲ್ಲ ರಾಷ್ಟ್ರದಲ್ಲೆ ಹೆಸರು ಪಡೆದಿದ್ದಾರೆ. ಕರಾಟೆ ಪಟುಗಳನ್ನು ಚಿಕ್ಕವಯಸ್ಸಿನಿಂದಲೇ ಬೆಳೆಸಬೇಕೆಂದು ಕರಾಟೆ ಶಾಲೆ ಪ್ರಾರಂಭಿಸಿದ್ದಾರೆ. ಅವರ ಶ್ರಮದಿಂದಲೇ ಇಂದು ಕರಾಟೆ ಕಲಿಯಲು ನೂರಾರು ಮಕ್ಕಳು ಸೇರಿದ್ದಾರೆ. ಕರಾಟೆಯಿಂದ ಜನರಿಗೆ ಹೆಚ್ಚು ಅನುಕೂಲವಾಗುತ್ತಿದ್ದು, ಕರಾಟೆ ಆಗಿರಬಹುದು, ಕ್ರೀಡೆ ಆಗಿರಬಹುದು, ಇಂತಹ ಕ್ರೀಡೆಯು ಸ್ವಯಂ ರಕ್ಷಣೆ ಅಲ್ಲದೇ ದೈಹಿಕ ಶಕ್ತಿ, ಮಾನಸಿಕ ಶಕ್ತಿ ವೃದ್ಧಿಸುವುದರ ಜೊತೆಗೆ ಒಳ್ಳೆಯ ಆರೋಗ್ಯ ಲಭಿಸುತ್ತದೆ ಎಂದರು. ಶಾಲೆಯಲ್ಲಿ ಶಿಕ್ಷಣ ಪಡೆಯುತ್ತಿರಬಹುದು ಜೊತೆಯಲ್ಲಿ ಇಂತಹ ಕ್ರೀಡೆಯಲ್ಲಿ ತೊಡಗಿಸಿಕೊಂಡಿರಬೇಕು ಎಂದು ಸಲಹೆ ನೀಡಿದರು.

ವೈದ್ಯ ಡಾ. ಅನೂಪ್ ಮಾತನಾಡಿ, ಪ್ರಸ್ತುತದಲ್ಲಿ ಚಿಕ್ಕ ಚಿಕ್ಕ ಮಕ್ಕಳಲ್ಲಿ ಹೃದಯಕ್ಕೆ ಸಂಬಂಧಿಸಿದ ಕಾಯಿಲೆಗಳನ್ನು ಕಾಣುತ್ತಿದ್ದೇವೆ. ಇದಕ್ಕೆ ಮುಖ್ಯ ಕಾರಣ ನಮ್ಮ ಸುತ್ತ ಮುತ್ತಲಿನ ವಾತವರಣ. ಜನರು ಮಾತ್ರ ಆರೋಗ್ಯದಿಂದ ಇದ್ದರೇ ಸಾಲದು. ಪರಿಸರ ಒಳ್ಳೆಯ ಗಾಳಿ, ಉತ್ತಮ ನೀರು, ಒಳ್ಳೆಯ ಆಹಾರ ಮುಖ್ಯ. ಉತ್ತಮ ವ್ಯಕ್ತಿಗಳಾಗಲಿ ಇನ್ನು ಒಳ್ಳೆ ನಡೆಯಾಗಲಿ ಎಲ್ಲವೂ ಈಗ ಬದಲಾಗಿದೆ. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಫಿಸಿಕಲ್ ಆಕ್ಟಿವಿಟಿಸನ್ನು ೮ನೇ ತರಗತಿಯವರೆಗೂ ಮಾಡಬೇಕು ಎಂದರು. ಚಿಕ್ಕ ವಯಸ್ಸಿನಲ್ಲಿಯೇ ಇಂತಹ ಕ್ರೀಡೆಯಲ್ಲಿ ಪಾಲ್ಗೊಳ್ಳಲು ಅವಕಾಶ ಕೊಟ್ಟರೇ ಮುಂದೆ ಡಯಾಬಿಟಿಸ್, ಬಿಪಿ, ತೂಕದ ಒತ್ತಡ, ಥೈರಾಯ್ಡ್ ಕಾಯಿಲೆ ಆಗಲಿ ನಿದ್ರಾಹೀನತೆ ಕಾಯಿಲೆ ಆಗಲಿ, ಮಾನಸಿಕ ಕಾಯಿಲೆ ಆಗಲಿ ಯಾವುದು ಸುಳಿಯುವುದಿಲ್ಲ, ಸಮತೋಲನದಲ್ಲಿರುತ್ತದೆ ಎಂದು ಕಿವಿಮಾತು ಹೇಳಿದರು. ಆಟ ಸಮಯದಲ್ಲಿ ಚನ್ನಾಗಿ ಆಟವಾಡಬೇಕು. ಓದುವ ಸಮಯದಲ್ಲಿ ಆಸಕ್ತಿಯಿಂದ ಓದಬೇಕು ಎಂದು ಸಲಹೆ ನೀಡಿದರು. ಮಕ್ಕಳ ಮೇಲೆ ಪೋಷಕರು ಒತ್ತಡ ಹಾಕಲಾಗುತ್ತಿದ್ದು, ಯಾವುದೇ ಒತ್ತಡವನ್ನು ಹೇರದೇ ಅದನ್ನು ವಿವರಿಸಿ ತಾಳ್ಮೆಯಿಂದ ಹೇಳುವ ಮೂಲಕ ಮಕ್ಕಳನ್ನು ಉತ್ತಮ ದಾರಿಗೆ ತರಬಹುದು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಕರ್ನಾಟಕ, ಶಿವಮೊಗ್ಗ, ಬೆಂಗಳೂರು, ಮೈಸೂರು, ಬಳ್ಳಾರಿ ಹಾಗೂ ಹೊರ ರಾಜ್ಯದಿಂದ ಕೇರಳ, ತಮಿಳುನಾಡು ಸೇರಿದಂತೆ ಕರ್ನಾಟಕದ ೧೨ ಜಿಲ್ಲೆಗಳಿಂದ ನೂರಾರು ಕರಾಟೆ ಪಟುಗಳು ಆಗಮಿಸಿ ಸ್ಪರ್ಧೆಗಳಲ್ಲಿ ಭಾಗವಹಿಸಿ ಗಮನ ಸೆಳೆದರು. ಹಾಸನ ಜಿಲ್ಲಾ ಕರಾಟೆ ಸಂಸ್ಥೆಯ ಅಧ್ಯಕ್ಷ ಮೊಹಮ್ಮದ್ ಆರೀಫ್ ನೇತೃತ್ವದಲ್ಲಿ ಓಪನ್ ೪ನೇ ರಾಷ್ಟ್ರೀಯ ಕರಾಟೆ ಪಂದ್ಯಾವಳಿ ಜರುಗಿತು. ಇದೇ ವೇಳೆ ಜಿಲ್ಲಾ ಕರಾಟೆ ಸಂಸ್ಥೆಯ ಅಧ್ಯಕ್ಷ ಮೊಹಮ್ಮದ್ ಆರೀಫ್, ಸಮಾಜ ಸೇವಕಿ ಮತ್ತು ಲೇಖಕಿ ಎಚ್.ಎಸ್. ಪ್ರತಿಮಾ, ಸರ್ದಾರ್ ಪಾಷಾ, ನಿವೃತ್ತ ಜೈಲರ್‌ ಸತ್ಯಗೌಡ, ನೂರ್ ಅಹಮದ್, ನಗರಸಭೆ ಸದಸ್ಯರಾದ ನಸೀಮಾ ಭಾನು ಇರ್ಷಾದ್, ಪವನ್, ಹಾಸನ ಜಿಲ್ಲಾ ಕರಾಟೆ ಸಂಸ್ಥೆಯ ಸುಸೈನ್, ಸರ್ಪಾಸ್, ಶೇಹನ್, ಶಮಂತ್, ಇತರರು ಉಪಸ್ಥಿತರಿದ್ದರು.