ಸಾರಾಂಶ
ಕರವೇ ಸ್ವಾಭಿಮಾನಿ ಸೇನೆ ಖಾನಾಪುರ ತಾಲೂಕು ಸಮಿತಿಯ ಪದಾಧಿಕಾರಿಗಳು ಬುಧವಾರ ಬೆಳಗಾವಿ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ, ಇತ್ತೀಚಿಗೆ ಹಲ್ಲೆಗೊಳಗಾದ ಬೆಳಗಾವಿ ನಗರ ಸಾರಿಗೆ ನಿರ್ವಾಹಕರಾದ ಮಹದೇವಪ್ಪ ಹಾಗೂ ಬಸ್ ಚಾಲಕರನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿದರು.
ಖಾನಾಪುರ : ಕರವೇ ಸ್ವಾಭಿಮಾನಿ ಸೇನೆ ಖಾನಾಪುರ ತಾಲೂಕು ಸಮಿತಿಯ ಪದಾಧಿಕಾರಿಗಳು ಬುಧವಾರ ಬೆಳಗಾವಿ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ, ಇತ್ತೀಚಿಗೆ ಹಲ್ಲೆಗೊಳಗಾದ ಬೆಳಗಾವಿ ನಗರ ಸಾರಿಗೆ ನಿರ್ವಾಹಕರಾದ ಮಹದೇವಪ್ಪ ಹಾಗೂ ಬಸ್ ಚಾಲಕರನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿದರು. ಸಂಘಟನೆಯ ತಾಲೂಕು ಸಮಿತಿಯ ಅಧ್ಯಕ್ಷ ಶ್ರವಣ ಲಮಾಣಿ ಹಾಗೂ ಕಾರ್ಯಕರ್ತರು ಬಸ್ ನಿರ್ವಾಹಕ ಮಹಾದೇವಪ್ಪ ಬೇಗ ಚೇತರಿಸಿಕೊಳ್ಳುವಂತೆ ಕನ್ನಡಾಂಬೆಯಲ್ಲಿ ಪ್ರಾರ್ಥಿಸಿದರು.
ಶ್ರವಣ ಲಮಾಣಿ ಮಾತನಾಡಿ, ಕನ್ನಡದಲ್ಲಿ ಮಾತನಾಡಿದ್ದಕ್ಕೆ ನಿರ್ವಾಹಕರ ಮೇಲೆ ಹಲ್ಲೆ ಮಾಡಿರುವುದು ಖಂಡನೀಯ, ಬೆಳಗಾವಿ ಜಿಲ್ಲೆ ಸೇರಿದಂತೆ ರಾಜ್ಯದ ಗಡಿಯುದ್ದಕ್ಕೂ ಮರಾಠಿ ಭಾಷಿಕರೊಂದಿಗೆ ಕನ್ನಡಿಗರು ಸೌಹಾರ್ದ ಮನೋಭಾವನೆಯಿಂದ ಬಾಳುತ್ತಿದ್ದಾರೆ. ಆದರೆ, ಕೆಲವು ಕಿಡಿಗೇಡಿಗಳು ಅನವಶ್ಯಕವಾಗಿ ಗೊಂದಲ ಸೃಷ್ಟಿ ಮಾಡಿ, ಮಹಾರಾಷ್ಟ್ರ ಹಾಗೂ ಕರ್ನಾಟಕ ರಾಜ್ಯದ ಗಡಿ ವಿವಾದವನ್ನು ಜೀವಂತವಾಗಿಟ್ಟುಕೊಳ್ಳಲು ನೋಡುತ್ತಿದ್ದಾರೆ ಎಂದು ಕಿಡಿಕಾರಿದರು.
ಈ ಸಂದರ್ಭದಲ್ಲಿ ಮಂಜುನಾಥ ಉಪಾಸಿ, ಡಿಲಾವರ್ ಗೋರಿ, ರಿಯಾನ ತೇಲಗಿ, ಸುನಿಲ್ ಗಾಡಗಿಕೊಪ್ಪ ಉಪಸ್ಥಿತರಿದ್ದರು.