ಸಾರಾಂಶ
ಕಾರ್ಗಿಲ್ ವಿಜಯವು ಭಾರತಕ್ಕೆ ಆತ್ಮವಿಶ್ವಾಸವನ್ನು ಮೂಡಿಸಿದ ಹೆಮ್ಮೆಯ ವಿಷಯವಾಗಿದೆ ಎಂದು ನಿವೃತ್ತ ಸಬ್ ಇನ್ಸ್‌ಪೆಕ್ಟರ್ ಶಿವಕುಮಾರ್ ತಿಳಿಸಿದರು.
ಕನ್ನಡಪ್ರಭ ವಾರ್ತೆ ತಿಪಟೂರು
ಕಾರ್ಗಿಲ್ ವಿಜಯವು ಭಾರತಕ್ಕೆ ಆತ್ಮವಿಶ್ವಾಸವನ್ನು ಮೂಡಿಸಿದ ಹೆಮ್ಮೆಯ ವಿಷಯವಾಗಿದೆ ಎಂದು ನಿವೃತ್ತ ಸಬ್ ಇನ್ಸ್‌ಪೆಕ್ಟರ್ ಶಿವಕುಮಾರ್ ತಿಳಿಸಿದರು. ನಗರದ ನಿವೃತ್ತ ನೌಕರರ ಸಂಘದ ಮಾಸಿಕ ಸಭೆಯ ಅಂಗವಾಗಿ ನಡೆದ ಕಾರ್ಗಿಲ್ ವಿಜಯೋತ್ಸವದ ನೆನಪುಗಳು ವಿಷಯದ ಬಗ್ಗೆ ಉಪನ್ಯಾಸ ನೀಡಿದ ಅವರು, ಭಾರತ ಶಾಂತಿ ಪ್ರಿಯ ದೇಶವಾಗಿದ್ದು ನಮಗೆ ಯುದ್ಧ ಮೊದಲ ಆಯ್ಕೆಯಲ್ಲ. ಅನಿವಾರ್ಯವೇ ಆದಲ್ಲಿ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಯುದ್ಧದ ಸಂದರ್ಭದಲ್ಲಿ ಶತ್ರು ದೇಶದ ಎಷ್ಟು ಸೈನಿಕರನ್ನು, ವಿಮಾನಗಳನ್ನು ಒಡೆದೆವು, ಆಸ್ತಿ ಪಾಸ್ತಿಗಳನ್ನು ನಾಶ ಮಾಡಿದೆವು ಎಂಬುದು ಮುಖ್ಯವಾಗದೆ ನಮಗಾದ ಲಾಭ ಅಥವಾ ನಷ್ಟವೇನು ಎಂಬುದರ ಮೇಲೆ ಗೆಲುವು, ಸೋಲು ನಿರ್ಧಾರವಾಗುತ್ತದೆ. ಆದರೆ ಯುದ್ಧದ ಭೀಕರ ಪರಿಣಾಮಗಳು ಊಹಾತೀತ. ದುರದೃಷ್ಟವಶಾತ್ ನಮ್ಮ ಕೆಲವು ನಾಯಕರೇ ನಮ್ಮ ಸೇನಾ ಸಾಮರ್ಥ್ಯವನ್ನೇ ಅನುಮಾನಿಸುವ, ಪ್ರಶ್ನಿಸುವ ಸ್ವಭಾವ ದೇಶದ್ರೋಹವೆನಿಸುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಗಂಗನಘಟ್ಟದ ವೀರ ಯೋಧ ನಾಯಕ್ ಜಿ. ಆರ್.ರಘು ಸನ್ಮಾನ ಸ್ವೀಕರಿಸಿದರು. ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಕೆ.ಎಂ. ರಾಜಣ್ಣ ಮಾತನಾಡಿದೆ. ಎಂದರು. ಈ ಸಂದರ್ಭದಲ್ಲಿ ಚಿತ್ರನಟಿ ದಿ. ಬಿ. ಸರೋಜಾದೇವಿಗೆ ನುಡಿ ನಮನ ಸಲ್ಲಿಸಲಾಯಿತು. ಸೈನಿಕ ರಘುರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಸಹಕಾರ ಸಂಘದ ಅಧ್ಯಕ್ಷರಾದ ವಿ.ಎಸ್.ಮಹದೇವಯ್ಯ, ಸಂಘದ ಪ್ರಧಾನ ಕಾರ್ಯದರ್ಶಿ ಪಿ.ಆರ್.ಗುರುಸ್ವಾಮಿ, ಖಜಾಂಚಿ ಸಿ.ಕುಮಾರ್, ಸದಸ್ಯರುಗಳಾದ ಜಿ. ನರಸಿಂಹ ಮೂರ್ತಿ, ಕಾತ್ಯಾಯಿನಿ ಶಿವಗಂಗಪ್ಪ, ಎಂ.ಅರ್. ಸೋಮಶೇಖರ್, ಡಿ.ಎಸ್.ಮರುಳಪ್ಪ, ರುಕ್ಮಿಣಿ, ವಿ.ಆರ್. ಅಂಗಡಿ, ಪುಷ್ಪಮೂರ್ತಿ, ಸುಮ ಮತ್ತಿತರರಿದ್ದರು.