ದೇಶ ಕಾಯುವ ಸೈನಿಕರಾದ್ರೆ ಕಾರ್ಯಕ್ರಮ ಸಾರ್ಥಕ

| Published : Jul 28 2024, 02:06 AM IST

ಸಾರಾಂಶ

ರೋಟರಿ ಸುವರ್ಣ ಭವನದಲ್ಲಿ ಇನ್ನರ್‌ವ್ಹೀಲ್ ಕ್ಲಬ್ ಆಫ್ ಹಾಸನ ಗೋಲ್ಡ್ ಇವರ ಸಂಯುಕ್ತಾಶ್ರಯದಲ್ಲಿ ೨೫ನೇ ವರ್ಷದ ಕಾರ್ಗಿಲ್ ವಿಜಯೋತ್ಸವ ಆಚರಣೆ ಕಾರ್ಯಕ್ರಮ ಆಯೋಜಿಸಲಾಗಿತ್ತು.ಇಷ್ಟೊಂದು ಜನ ವಿದ್ಯಾರ್ಥಿಗಳಲ್ಲಿ ಕನಿಷ್ಠ ೧೦ ಜನರು ನಮ್ಮ ದೇಶ ಕಾಯುವ ಸೈನಿಕನಾದರೇ ಈ ಕಾರ್ಯಕ್ರಮ ಆಯೋಜಿಸಿರುವುದಕ್ಕೆ ಸಾರ್ಥಕತೆ ಆಗುತ್ತದೆ ಎಂದು ಇನ್ನರ್‌ವ್ಹೀಲ್ ಕ್ಲಬ್ ಆಫ್ ಹಾಸನ ಗೋಲ್ಡ್ ಅಧ್ಯಕ್ಷೆ ಡಾ. ತನುಜಾ ಅಭಿಪ್ರಾಯಪಟ್ಟರು.

ಹಾಸನ: ನನ್ನ ಮಗನನ್ನು ಎಂಜಿನಿಯರ್, ದೊಡ್ಡ ಆಡಿಟರ್ ಸೇರಿದಂತೆ ವಿವಿಧ ಅಸೆಗಳಿದ್ದರೂ ಇವುಗಳ ಮಧ್ಯೆ ಒಬ್ಬ ಯೋಧನಾಗಿ ನೋಡಬೇಕು ಎನ್ನುವ ಕನಸುಗಳಿದೆ. ಇಷ್ಟೊಂದು ಜನ ವಿದ್ಯಾರ್ಥಿಗಳಲ್ಲಿ ಕನಿಷ್ಠ ೧೦ ಜನರು ನಮ್ಮ ದೇಶ ಕಾಯುವ ಸೈನಿಕನಾದರೇ ಈ ಕಾರ್ಯಕ್ರಮ ಆಯೋಜಿಸಿರುವುದಕ್ಕೆ ಸಾರ್ಥಕತೆ ಆಗುತ್ತದೆ ಎಂದು ಇನ್ನರ್‌ವ್ಹೀಲ್ ಕ್ಲಬ್ ಆಫ್ ಹಾಸನ ಗೋಲ್ಡ್ ಅಧ್ಯಕ್ಷೆ ಡಾ. ತನುಜಾ ಅಭಿಪ್ರಾಯಪಟ್ಟರು. ನಗರದ ಬಿ.ಎಂ. ರಸ್ತೆ ಬಳಿ ಇರುವ ರೋಟರಿ ಸುವರ್ಣ ಭವನದಲ್ಲಿ ಇನ್ನರ್‌ವ್ಹೀಲ್ ಕ್ಲಬ್ ಆಫ್ ಹಾಸನ ಗೋಲ್ಡ್ ಇವರ ಸಂಯುಕ್ತಾಶ್ರಯದಲ್ಲಿ ಶನಿವಾರದಂದು ಬೆಳಿಗ್ಗೆ ಹಮ್ಮಿಕೊಳ್ಳಲಾಗಿದ್ದ ೨೫ನೇ ವರ್ಷದ ಕಾರ್ಗಿಲ್ ವಿಜಯೋತ್ಸವ ಆಚರಣೆಯಲ್ಲಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನಮ್ಮ ಮಗ ಎಂಜಿನಿಯರ್, ದೊಡ್ಡ ಆಡಿಟರ್ ಆಗಬೇಕೆಂದು ನಮಗೂ ಆಸೆಗಳಿದ್ದು, ಆದರೇ ಅದರ ಮಧ್ಯದಲ್ಲಿ ಒಬ್ಬ ಯೋಧನಾಗಿ ನಾನು ನೋಡಬೇಕು ಎನ್ನುವ ಬಹಳ ಕನಸ್ಸನ್ನು ಇಟ್ಟುಕೊಂಡಿದ್ದೇನೆ. ಅವಕಾಶ ಸಿಕ್ಕರೆ ಖಂಡಿತವಾಗಿಯೂ ಸೇನೆಗೆ ಸೇರಿಸುತ್ತೇನೆ ಅದಕ್ಕೂ ಮೊದಲು ನನ್ನ ಮಗನಿಗೆ ಇಷ್ಟವಿದ್ದರೇ ಮಾತ್ರ ಅದಕ್ಕೆ ಪ್ರೋತ್ಸಾಹ ಕೊಡಲಾಗುವುದು ಎಂದರು.

ಇಷ್ಟೊಂದು ಜನ ಕಾಲೇಜು ಮಕ್ಕಳು ಈ ಕಾರ್ಯಕ್ರಮದಲ್ಲಿ ಇದ್ದು, ಇವರಲ್ಲಿ ಐದರಿಂದ ಹತ್ತು ಜನರು ನಮ್ಮ ದೇಶ ಕಾಯುವ ಸೈನಿಕನಾಗಿ ನಿಂತರೇ ಈ ಕಾರ್ಯಕ್ರಮ ಆಯೋಜಿಸಿರುವುದಕ್ಕೆ ಸಾರ್ಥಕತೆ ಸಿಗುತ್ತದೆ ಎಂದು ಕಿವಿಮಾತು ಹೇಳಿದರು. ವಿದ್ಯಾರ್ಥಿಗಳು ಪೋಷಕರಿಗೆ ಒಳ್ಳೆ ಮಕ್ಕಳಾಗಿ ದೇಶಕ್ಕೆ ಉತ್ತಮ ಪ್ರಜೆ ಆಗಬೇಕು. ಎಲ್ಲಾ ಅಪ್ಪ ಅಮ್ಮಂದಿರಿಗೆ ಒಂದು ಕನಸು ಇದ್ದು, ಮಕ್ಕಳು ನೆರವೇರಿಸುತ್ತೀರಿ ಎಂದು ವಿಶ್ವಾಸ ವ್ಯಕ್ತಪಡಿಸಿ ಹಾರೈಸಿದರು. ಕಾರ್ಯಕ್ರಮದಲ್ಲಿ ಯೋಧರ ಸ್ಮಾರಕಕ್ಕೆ ಪುಷ್ಪಾರ್ಚನೆ ಮಾಡಿ ಗೌರವಿಸಿದರು. ಭಾಗವಹಿಸಿದ್ದ ಸ್ಟೂಡೆಂಟ್ ಕಾಮರ್ಸ್ ಕಾಲೇಜಿನಲ್ಲಿ ಶಿಕ್ಷಣ ಪಡೆಯುತ್ತಿರುವ ಯೋಧರ ಮಕ್ಕಳನ್ನು ಗುರುತಿಸಿ ಅವರಿಗೆ ಆರ್ಮಿ ಪುಸ್ತಕವನ್ನು ನೀಡಿದಲ್ಲದೇ ಅವರಿಂದ ಅನಿಸಿಕೆ ಮಾತುಗಳನ್ನು ತಿಳಿಸಲಾಯಿತು. ಇನ್ನು ಗಡಿಯಲ್ಲಿ ಯುದ್ಧ ಮಾಡಿ ಸೈನಿಕರು ಶ್ರಮಿಸುತ್ತಿರುವ ಬಗ್ಗೆ ಒಂದು ನಾಟಕ ರೂಪಕವನ್ನು ವಿದ್ಯಾರ್ಥಿಗಳು ಪ್ರದರ್ಶಿಸಿದರು. ಇದೆ ವೇಳೆ ಮಾಜಿ ಸೈನಿಕ ಕ್ಯಾಪ್ಟನ್ ಜಯರಾಂ, ಸ್ಟೂಡೆಂಟ್ ಕಾಮರ್ಸ್ ಕಾಲೇಜಿನ ಎಚ್.ಒ.ಡಿ. ಗಿರೀಶ್, ಇನ್ನರ್‌ವ್ಹೀಲ್ ಕ್ಲಬ್ ಆಫ್ ಹಾಸನ ಗೋಲ್ಡ್ ಕಾರ್ಯದರ್ಶಿ ವನಿತಾ, ಚಾರಿಟರ್ ಪ್ರೆಸಿಡೆಂಟ್ ರತೀ, ಪೂಜಾ ರಘು ನಂದನ್, ಯಶೋಧ, ಅರ್ಚನಾ, ವಾಣಿನಾಗೇಂದ್ರ, ದೀಪು, ನಮ್ಯ, ಚಂದ್ರಕಲಾ ಸೇರಿದಂತೆ ಇತರರು ಉಪಸ್ಥಿತರಿದ್ದರು.