ಕಾರ್ಕಳ: ವಿಜೇತ ವಿಶೇಷ ಶಾಲೆಯ ಅಷ್ಟಮ ವಾರ್ಷಿಕೋತ್ಸವ

| Published : Apr 16 2024, 01:03 AM IST

ಸಾರಾಂಶ

ಕಾರ್ಕಳ ತಾಲೂಕಿನ ತಹಸೀಲ್ದಾರ್‌ ನರಸಪ್ಪ ಕೆ.ಎ.ಎಸ್ ಅವರು ಧ್ವಜಾರೋಹಣ ನೆರವೇರಿಸಿ ವಿಶೇಷ ಮಕ್ಕಳಿಂದ ಗೌರವ ವಂದನೆ ಸ್ವೀಕರಿಸಿದರು. ಪೋಷಕರಿಗೆ ಹಾಗೂ ಮಕ್ಕಳಿಗಾಗಿ ನಡೆದ ವಿವಿಧ ಆಟೋಟ ಸ್ಪರ್ಧೆಗಳ ವಿಜೇತರಿಗೆ ಅತಿಥಿಗಳು ಬಹುಮಾನ ವಿತರಿಸಿದರು.

ಕನ್ನಡಪ್ರಭ ವಾರ್ತೆ ಕಾರ್ಕಳ

ಇಲ್ಲಿನ ಕುಕ್ಕುಂದೂರು ಅಯ್ಯಪ್ಪ ನಗರದ ವಿಜೇತ ವಿಶೇಷ ಶಾಲೆಯ ಅಷ್ಟಮ ವರ್ಷದ ವಾರ್ಷಿಕೋತ್ಸವ - ಬಹುಮಾನ ವಿತರಣಾ ಸಮಾರಂಭ ವಿಜೃಂಭಣೆಯಿಂದ ನೆರವೇರಿತು. ಕಾರ್ಕಳ ತಾಲೂಕಿನ ತಹಸೀಲ್ದಾರ್‌ ನರಸಪ್ಪ ಕೆ.ಎ.ಎಸ್ ಅವರು ಧ್ವಜಾರೋಹಣ ನೆರವೇರಿಸಿ ವಿಶೇಷ ಮಕ್ಕಳಿಂದ ಗೌರವ ವಂದನೆ ಸ್ವೀಕರಿಸಿದರು.

ನಿವೃತ್ತ ಅಂಚೆ ಇಲಾಖೆ ಅಧಿಕಾರಿ ಶಾಂತ ಎಲ್. ಎನ್. ಅಡಿಗ ಅವರು ದೀಪ ಪ್ರಜ್ವಲನದೊಂದಿಗೆ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ, ವಿಶೇಷ ಮಕ್ಕಳ ಪ್ರತಿಭೆಯನ್ನು ಮತ್ತು ಅವರಿಗೆ ತರಬೇತಿ ನೀಡುತ್ತಿರುವ ವಿಶೇಷ ಶಿಕ್ಷಕರನ್ನು ಶ್ಲಾಘಿಸಿದರು.

ಮುಖ್ಯ ಅತಿಥಿಗಳಾಗಿ ಕಾರ್ಕಳ ಬಂಟರ ಮಹಿಳಾ ಸಂಘದ ಅಧ್ಯಕ್ಷರಾದ ಸವಿತಾ ವಿಜಯ ಶೆಟ್ಟಿ, ಕೆಮ್ಮಂಜ ಆ್ಯಂಡ್ ಮಿಲನ್ ಮಲ್ಟಿ ಪರ್ಪಸ್ ಎ.ಸಿ. ಹಾಲ್ ಅಜೆಕಾರು ಇದರ ಮಾಲೀಕರಾದ ಲಯನ್ ಗುರುಪ್ರಸಾದ್ ಶೆಟ್ಟಿ ಆಗಮಿಸಿದ್ದರು.

ಈ ವಿಶೇಷ ಶಾಲೆಯನ್ನು ನಡೆಸುತ್ತಿರುವ ಶ್ರೀ ದುರ್ಗಾ ವಿದ್ಯಾ ಸಂಘ ಟ್ರಸ್ಟ್ ನ ಅಧ್ಯಕ್ಷ ಕೆ. ರಾಧಾಕೃಷ್ಣ ಶೆಟ್ಟಿ, ಶಾಲಾಡ‍ಳಿತ ಮಂಡಳಿ ಅಧ್ಯಕ್ಷ ರತ್ನಾಕರ್ ಅಮೀನ್, ಶಾಲೆಯ ಸಂಸ್ಥಾಪಕಿ ಡಾ. ಕಾಂತಿ ಹರೀಶ್, ಆಡಳಿತ ವಿಶ್ವಸ್ಥ ಹರೀಶ್, ವಿಶ್ವಸ್ಥರಾದ ಕಿರಣ್ ಶೆಟ್ಟಿ ಉಪಸ್ಥಿತರಿದ್ದರು.

ಈ ಕಾರ್ಯಕ್ರಮದಂಗವಾಗಿ ಪೋಷಕರಿಗೆ ಹಾಗೂ ಮಕ್ಕಳಿಗಾಗಿ ನಡೆದ ವಿವಿಧ ಆಟೋಟ ಸ್ಪರ್ಧೆಗಳ ವಿಜೇತರಿಗೆ ಅತಿಥಿಗಳು ಬಹುಮಾನ ವಿತರಿಸಿದರು. ವಿಶೇಷ ಶಿಕ್ಷಕಿ ಹರ್ಷಿತಾ ಕಿರಣ್ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಡಾ. ಕಾಂತಿ ಹರೀಶ್ ಸ್ವಾಗತಿಸಿದರು. ವಿಶೇಷ ಶಿಕ್ಷಕಿ ಶ್ರೀನಿಧಿ ವಂದಿಸಿದರು.