ಸಾರಾಂಶ
ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಯಕ್ಷರಂಗಾಯಣ ಕಾರ್ಕಳ ಸಹಯೋಗದಲ್ಲಿ ಕೋಟಿ ಚೆನ್ನಯ್ಯ ಥೀಂ ಪಾರ್ಕ್ ಅವರಣದಲ್ಲಿ ಆಯೋಜಿಸಲಾದ ವಿಶ್ವ ರಂಗಭೂಮಿ ದಿನಾಚರಣೆ ರಂಗಾಯಣದ ರೆಪರ್ಟರಿ ಕಲಾವಿದರು ಕುಮಾರವ್ಯಾಸ ಭಾರತದ ವಿರಾಟ ವಾಚಿಕ ವಿನ್ಯಾಸ ಕಾರ್ಯಕ್ರಮ ಪ್ರಸ್ತುತ ಪಡಿಸಿದರು.
ಕನ್ನಡಪ್ರಭ ವಾರ್ತೆ ಕಾರ್ಕಳಪಂಪ ಭಾರತ ಹಾಗೂ ಗದುಗಿನ ಭಾರತಗಳು ವಿಶೇಷ ಭಕ್ತಿ ಪ್ರಧಾನ ಕಾವ್ಯಗಳಾಗಿವೆ ಎಂದು ನಿವೃತ್ತ ಪ್ರಾಂಶುಪಾಲ ಪದ್ಮನಾಭ ಗೌಡ ಹೇಳಿದರು.
ಅವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಯಕ್ಷರಂಗಾಯಣ ಕಾರ್ಕಳ ಸಹಯೋಗದಲ್ಲಿ ಕೋಟಿ ಚೆನ್ನಯ್ಯ ಥೀಂ ಪಾರ್ಕ್ ಅವರಣದಲ್ಲಿ ಆಯೋಜಿಸಲಾದ ವಿಶ್ವ ರಂಗಭೂಮಿ ದಿನಾಚರಣೆ ಪ್ರಯುಕ್ತ ರಂಗಾಯಣದ ರೆಪರ್ಟರಿ ಕಲಾವಿದರು ಪ್ರಸ್ತುತ ಪಡಿಸಿದ ಕುಮಾರವ್ಯಾಸ ಭಾರತದ ವಿರಾಟ ವಾಚಿಕ ವಿನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಕುಮಾರವ್ಯಾಸ ತನ್ನ ಗದುಗಿನ ಭಾರತದಲ್ಲಿ ಮಾನವೀಯ ಸಂಬಂಧಗಳು, ಪ್ರಬುದ್ಧತೆ ಸೇರಿದಂತೆ ಇಂದಿನ ಕಾಲಕ್ಕೆ ಪ್ರಾಪಂಚಿಕದ ರಾಜಕೀಯ ವಿಶ್ಲೇಷಿಸಿ ತೋರಿಸಿದಂತಿದೆ ಎಂದರು.
ಕಸಾಪ ಅಧ್ಯಕ್ಷ ಪ್ರಭಾಕರ ಶೆಟ್ಟಿ ಕೊಂಡಳ್ಳಿ ಮಾತನಾಡಿ, ಗ್ರೀಕ್ ಹಾಗೂ ಫ್ರಾನ್ಸ್‌ನಲ್ಲಿ ನೂರಾರು ವರ್ಷಗಳ ಹಿಂದೆಯೇ ನಾಟಕಗಳು ಹುಟ್ಟಿಕೊಂಡಿವೆ. ನಾಟಕಗಳು ಬದುಕಿಗೆ ಉತ್ತಮ ಸಾಮರಸ್ಯವನ್ನು ಸಾರುತ್ತವೆ ಎಂದರು.ಪತ್ರಕರ್ತ ದೇವರಾಯಪ್ರಭು, ಜ್ಯೋತಿಗುರುಪ್ರಸಾದ್, ಸುರೇಂದ್ರ ಪಣಿಯೂರು ಮೊದಲಾದರವರು ಉಪಸ್ಥಿತರಿದ್ದರು.
ಕನ್ನಡ ಸಂಸ್ಕೃತಿ ಇಲಾಖೆಯ ಕರ್ತವ್ಯಾಧಿಕಾರಿ ಪೂರ್ಣಿಮಾ ಸ್ವಾಗತಿಸಿದರು. ಚಂದ್ರನಾಥ ಬಜಗೋಳಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.ಸಭೆ ಬಳಿಕ ಕಾರ್ಕಳದ ಯಕ್ಷರಂಗಾಯಣ ರೆಪರ್ಟರಿ ಕಲಾವಿದರು ಪ್ರಸ್ತುತ ಪಡಿಸಿದ ಕುಮಾರವ್ಯಾಸ ಭಾರತದ ವಿರಾಟ ವಾಚಿಕ ವಿನ್ಯಾಸ ಕಾರ್ಯಕ್ರಮ ನಡೆಯಿತು.