ಕಾರ್ಕಳ: ಯುವ ಕಾಂಗ್ರೆಸ್‌ನಿಂದ ಸೋಶಿಯಲ್ ಮೀಡಿಯಾ ಕಾರ್ಯಾಗಾರ

| Published : Oct 16 2025, 02:01 AM IST

ಸಾರಾಂಶ

ಕಾರ್ಕಳ ಬ್ಲಾಕ್ ಕಾಂಗ್ರೆಸ್ ಆಶ್ರಯದಲ್ಲಿ ಯುವ ಕಾಂಗ್ರೆಸ್ ಪದಾಧಿಕಾರಿಗಳಿಗೆ ಮತ್ತು ಬೂತ್ ಮಟ್ಟದ ನಾಯಕರಿಗೆ ‘ಸೋಶಿಯಲ್ ಮೀಡಿಯಾ ಬಳಕೆಯ ಅನಿವಾರ್ಯತೆ ಹಾಗೂ ಕಾಂಗ್ರೆಸ್ ಸಿದ್ಧಾಂತ ಮತ್ತು ಸಂವಿಧಾನದ ಆಶಯಗಳಿಗೆ ಇರುವ ಆಪತ್ತು’ ಎಂಬ ವಿಷಯದ ಕುರಿತು ಎರಡು ಹಂತಗಳ ಕಾರ್ಯಾಗಾರ ನಡೆಯಿತು.

ಕನ್ನಡಪ್ರಭ ವಾರ್ತೆ ಕಾರ್ಕಳ

ಕಾರ್ಕಳ ಬ್ಲಾಕ್ ಕಾಂಗ್ರೆಸ್ ಆಶ್ರಯದಲ್ಲಿ ಯುವ ಕಾಂಗ್ರೆಸ್ ಪದಾಧಿಕಾರಿಗಳಿಗೆ ಮತ್ತು ಬೂತ್ ಮಟ್ಟದ ನಾಯಕರಿಗೆ ‘ಸೋಶಿಯಲ್ ಮೀಡಿಯಾ ಬಳಕೆಯ ಅನಿವಾರ್ಯತೆ ಹಾಗೂ ಕಾಂಗ್ರೆಸ್ ಸಿದ್ಧಾಂತ ಮತ್ತು ಸಂವಿಧಾನದ ಆಶಯಗಳಿಗೆ ಇರುವ ಆಪತ್ತು’ ಎಂಬ ವಿಷಯದ ಕುರಿತು ಎರಡು ಹಂತಗಳ ಕಾರ್ಯಾಗಾರ ನಡೆಯಿತು.ಈ ಕಾರ್ಯಾಗಾರದಲ್ಲಿ ಕಾಂಗ್ರೆಸ್ ಸೋಶಿಯಲ್ ಮೀಡಿಯಾ ರಾಜ್ಯ ಉಪಾಧ್ಯಕ್ಷ ಚಂದ್ರಶೇಖರ ಶೆಟ್ಟಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ, ಪಕ್ಷದ ಪದಾಧಿಕಾರಿಗಳು, ಜನಪ್ರತಿನಿಧಿಗಳು ಹಾಗೂ ಕಾರ್ಯಕರ್ತರಿಗೆ ಅಂಕಿಸಂಖ್ಯೆಯ ಸಮೇತ ವಿಚಾರ ಮಂಡನೆ ಮಾಡಿದರು.ಇಂದಿನ ರಾಜಕೀಯ, ಸಾಮಾಜಿಕ ಪರಿಸ್ಥಿತಿಯಲ್ಲಿ ಸೋಶಿಯಲ್ ಮೀಡಿಯಾ ಶಕ್ತಿಯು ಹೇಗೆ ಜನಮನಗಳನ್ನು ಪ್ರಭಾವಿಸುತ್ತದೆ ಎಂಬುದನ್ನು ವಿಶ್ಲೇಷಿಸಿದರು. ಕಾಂಗ್ರೆಸ್ ಸಿದ್ಧಾಂತಗಳು, ಅಂಬೇಡ್ಕರ್ ಸಂವಿಧಾನದ ಮೌಲ್ಯಗಳು ಮತ್ತು ಸಾಮಾಜಿಕ ನ್ಯಾಯದ ಪರಿಕಲ್ಪನೆಗಳನ್ನು ರಕ್ಷಿಸಲು ಪ್ರಬುದ್ಧ ಸಾಮಾಜಿಕ ಮಾಧ್ಯಮ ಹೋರಾಟ ಅಗತ್ಯವಿದೆ ಎಂದರು.ಕಾರ್ಯಾಗಾರದಲ್ಲಿ ಕಾರ್ಕಳ ವಿಧಾನಸಭಾ ಕ್ಷೇತ್ರ ಕಾಂಗ್ರೆಸ್ ಮುಖಂಡರಾದ ಉದಯಕುಮಾರ್ ಶೆಟ್ಟಿ ಮುನಿಯಾಲ್, ಕಾರ್ಕಳ ಹಾಗೂ ಹೆಬ್ರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶುಭದ್ ರಾವ್, ಗೋಪಿನಾಥ್ ಭಟ್, ಮಾಜಿ ಬ್ಲಾಕ್ ಅಧ್ಯಕ್ಷರಾದ ಸದಾಶಿವ ದೇವಾಡಿಗ, ರಮೇಶ್ ದೇವಾಡಿಗ ಕಡ್ತಲ, ಉಡುಪಿ ಜಿಲ್ಲಾ ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಅಧ್ಯಕ್ಷ ರೋಷನ್ ಶೆಟ್ಟಿ ಕುಂದಾಪುರ, ಜೇಸಿ ರಾಷ್ಟ್ರೀಯ ತರಬೇತುದಾರ ಸುಧಾಕರ ಪೂಜಾರಿ, ಗ್ಯಾರಂಟಿ ಸಮಿತಿ ಅಧ್ಯಕ್ಷ ಅಜಿತ್ ಹೆಗ್ಡೆ ಮಾಳ, ಸುಭಿತ್ ಎನ್.ಆರ್., ದಿನಕರ ಶೆಟ್ಟಿ ಪಳ್ಳಿ, ವಿವೇಕಾನಂದ ಶೆಣೈ, ಸುಧಾಕರ ಶೆಟ್ಟಿ ಮುಡಾರು, ಯುವ ಕಾಂಗ್ರೆಸಿನ ಸೂರಜ್ ಶೆಟ್ಟಿ ನಕ್ರೆ, ಮಲಿಕ್ ಅತ್ತೂರು, ಪರೀಕ್ಷಿತ್ ಪೂಜಾರಿ, ಯೋಗೀಶ್ ಆಚಾರ್ಯ ಇನ್ನಾ, ಮಂಜುನಾಥ ಜೋಗಿ ಹಾಗೂ ಯುವ ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು.