ಸಾರಾಂಶ
- ಸಂವಿಧಾನ, ಪ್ರಜಾಪ್ರಭುತ್ವದ ಉಳಿಸುವ ಉದ್ದೇಶ
- ಕೋಮುದಳ್ಳುರಿ ಬದಲು ಶಾಂತಿ, ನೆಮ್ಮದಿ ಸ್ಥಾಪನೆ ಆಶಯ - - - ಕನ್ನಡಪ್ರಭ ವಾರ್ತೆ, ದಾವಣಗೆರೆಸಂವಿಧಾನ, ಪ್ರಜಾಪ್ರಭುತ್ವದ ಉಳಿವು ಮತ್ತು ದೇಶವನ್ನು ಕೋಮುದಳ್ಳುರಿಯಿಂದ ತಪ್ಪಿಸುವ, ಶಾಂತಿ, ನೆಮ್ಮದಿ ವಾತಾವರಣಕ್ಕಾಗಿ ಲೋಕಸಭಾ ಚುನಾವಣೆಯಲ್ಲಿ ದಾವಣಗೆರೆ ಸೇರಿದಂತೆ ಎಲ್ಲೆಡೆ ಕಾಂಗ್ರೆಸ್ ಬೆಂಬಲಿಸುತ್ತಿರುವುದಾಗಿ ಕರ್ನಾಟಕ ಶೋಷಿತ ಸಮುದಾಯಗಳ ಮಹಾಒಕ್ಕೂಟ ಪ್ರಧಾನ ಸಂಚಾಲಕ ಕೆ.ಎಂ. ರಾಮಚಂದ್ರಪ್ಪ ಹೇಳಿದರು.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ನಿಂದ ಸಾಮಾಜಿಕ ನ್ಯಾಯ, ಸಮಾನತೆ ಮತ್ತು ಸಂವಿಧಾನ ಉಳಿವು ಸಾಧ್ಯ ಎಂಬುದನ್ನು ಮನಗಂಡು ಮಹಾಒಕ್ಕೂಟ ಕಾಂಗ್ರೆಸ್ ಬೆಂಬಲಿಸುವ ನಿರ್ಧಾರ ಕೈ ಗೊಂಡಿದೆ ಎಂದರು.2024ರ ಸಾರ್ವತ್ರಿಕ ಚುನಾವಣೆ ಧರ್ಮ ಮತ್ತು ಅಧರ್ಮದ ನಡುವಿನ ನಡೆಯುತ್ತಿರುವ ಚುನಾವಣೆ. 2014ರ ಬಿಜೆಪಿಯ ಪ್ರಣಾಳಿಕೆ ನೋಡಿದರೆ ದೇಶದ ಎಲ್ಲ ಕಷ್ಟಗಳು ದೂರವಾಗುತ್ತವೆ ಎನ್ನುವಂತಿತ್ತು. ಆದರೆ, 10 ವರ್ಷಗಳಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಪರಿಶಿಷ್ಟ ಜಾತಿ, ಪಂಗಡ, ಹಿಂದುಳಿದ ವರ್ಗಗಳ ಮೀಸಲು ದುರ್ಬಲಗೊಳಿಸುವ, ಮನುಸ್ಮೃತಿ ಇಲ್ಲವೇ ಚಾರ್ತುವರ್ಣದ ಅಲಿಖಿತ ಸಂವಿಧಾನ ಜಾರಿಗೆ ತರುವ ಪ್ರಯತ್ನ ಕಂಡುಬರುತ್ತಿದೆ. ಹಾಗಾಗಿ, ಸಾಮಾಜಿಕ ನ್ಯಾಯಕ್ಕೆ ಬದ್ಧವಾಗಿ ಕೆಲಸ ಮಾಡುವ ಕಾಂಗ್ರೆಸ್ ಬೆಂಬಲಿಸಲಾಗುತ್ತಿದೆ ಎಂದು ತಿಳಿಸಿದರು.
ಒಕ್ಕೂಟದ ಮಾವಳ್ಳಿ ಶಂಕರ್ ಮಾತನಾಡಿ, ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರದ ಮೋದಿ ಅವಧಿಯಲ್ಲಿ ಭಾರತ ಅಭಿವೃದ್ಧಿ ಪಥದಲ್ಲಿ ಸಾಗುವ ಬದಲಿಗೆ ಹಿಮ್ಮುಖವಾಗಿ ನಡೆಯುವುದು ಕಂಡುಬರುತ್ತಿದೆ. ಬಡತನ, ಹಸಿವು, ನಿರುದ್ಯೋಗ ಒಳಗೊಂಡಂತೆ ಎಲ್ಲ ಸಮಸ್ಯೆಗಳು ದೇಶವನ್ನು ಹಿಂಡಿ ಹಿಪ್ಪೆ ಮಾಡುತ್ತಿರುವುದನ್ನ ಮರೆಮಾಚಲು ಮೋದಿ ಅವರು ಮಂಗಳಸೂತ್ರ, ಹಿಂದುಳಿದ ವರ್ಗಗಳ ಮೀಸಲಾತಿ ಕಸಿದು ಮುಸ್ಲಿಮರಿಗೆ ಹಂಚಿಕೆ ಮಾಡಲಾಗುತ್ತದೆ ಎಂಬ ವಿಷಯ ಪ್ರಸ್ತಾಪಿಸುತ್ತಿದ್ದಾರೆ. ಆ ಮೂಲಕ ಜನರಲ್ಲಿ ಗೊಂದಲ, ಹತಾಶ ಭಾವನೆ ಉಂಟು ಮಾಡುತ್ತಿದ್ದಾರೆ ಎಂದು ದೂರಿದರು.ಸುದ್ದಿಗೋಷ್ಠಿಯಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಿ. ಬಸವರಾಜ್, ಸೈಯದ್ ಸೈಪುಲ್ಲಾ, ಹೈಕೋರ್ಟ್ ನ್ಯಾಯವಾದಿ ಎನ್. ಅನಂತನಾಯ್ಕ, ಬಿ.ಎಚ್. ಪರಶುರಾಮಪ್ಪ, ಎಚ್.ಬಿ. ಪರಶುರಾಮಪ್ಪ, ಹೊನ್ನಾಳಿ ಸಿದ್ದಪ್ಪ, ಎಚ್.ಬಿ. ಶಿವಯೋಗಿ, ಸುಭಾಶ್, ಲೋಕಿಕೆರೆ ಸಿದ್ದಪ್ಪ, ಡಾ.ಎ.ಬಿ. ರಾಮಚಂದ್ರಪ್ಪ ಇತರರು ಇದ್ದರು.
- - - -1ಕೆಡಿವಿಜಿ40ಃ:ದಾವಣಗೆರೆಯಲ್ಲಿ ಕೆ.ಎಂ. ರಾಮಚಂದ್ರಪ್ಪ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.